ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿದ – ಶಾಸಕರು.
ಮೊಳಕಾಲ್ಮುರು ಏಪ್ರಿಲ್.23





ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಚಿತ್ರದುರ್ಗ ಲೋಕಸಭಾ ಚುನಾವಣೆ ಮೊಳಕಾಲ್ಮೂರು ಕ್ಷೇತ್ರದ ಹಿರೇಹಳ್ಳಿ,ಬೇಡರಡ್ಡಿಹಳ್ಳಿ,ಮನೆಕೋಟೆ ಜೆ ಬಿ ಹಳ್ಳಿ,ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡರು ಗ್ಯಾರೆಂಟಿ ಕಾಡುಗಳನ್ನು ಮತದಾರ ಬಂಧುಗಳಿಗೆ ವಿತರಿಸಿದರು.ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ನುಡಿದಂತೆ ನಡೆದಿದೆ ಪಂಚ ಗ್ಯಾರಂಟಿಗಳನ್ನು ಈಗಾಗಲೇ ತಾವೆಲ್ಲರೂ ಸದುಪಯೋಗ ಪಡೆದುಕೊಳ್ಳುತ್ತಿದ್ದೀರಿ ನೀವು ಗೃಹ ಲಕ್ಷ್ಮಿ ಫಲಾನುಭವಿಗಳಾಗಿದ್ದು, ಒಂದು ಕುಟುಂಬದ ಮನೆಯ ಹಾರ್ದಿಕ ಪರಿಸ್ಥಿತಿ ಸಹಾಯಕ್ಕೆ ನಿಂತ ಕಾಂಗ್ರೆಸ್ ಪಕ್ಷದ ಸರ್ಕಾರ ಈಗ ಲೋಕಸಭಾ ಚುನಾವಣೆ ತಾವೆಲ್ಲರೂ ಹೆಚ್ಚಿನ ಮತಗಳನ್ನು ನೀಡುವ ಮೂಲಕ ಇನ್ನು ಐದು ಪಂಚ ಗ್ಯಾರಂಟಿಗಳು ಅನುಷ್ಠಾನ ಗೊಳ್ಳಲಿದೆ ಎಂದು ತಿಳಿಸಿದರು.ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಸ್ಥಳೀಯ ಚುನಾಯಿತ ಜನ ಪ್ರತಿನಿಧಿಗಳು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು.