ಸಾರ್ಥಕ ಬದುಕಿಗೆ ನಾಲ್ಕು ಯೋಗಗಳ ಸಮನ್ವಯ ಅಗತ್ಯ – ಮಾತಾಜೀ. ತ್ಯಾಗಮಯೀ.
ಚಳ್ಳಕೆರೆ ಏ.05





ಸಾರ್ಥಕ ಬದುಕಿಗೆ ನಾಲ್ಕು ಯೋಗಗಳ ಸಮನ್ವಯ ಅಗತ್ಯ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಹೇಳಿದರು. ನಗರದ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಒಂದು ದಿನದ ಆಧ್ಯಾತ್ಮಿಕ ಶಿಬಿರದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ಕರ್ಮಯೋಗ, ಭಕ್ತಿಯೋಗ, ರಾಜಯೋಗ, ಜ್ಞಾನಯೋಗಗಳ ಸಮನ್ವಯತೆ ಯಿಂದ ಕೂಡಿದ ಅನುಷ್ಠಾನ ದಿಂದ ಉತ್ತಮ ಜೀವನ ಸಾಧ್ಯವಾಗುತ್ತದೆ. ಆದ್ದರಿಂದ ಶ್ರೀರಾಮಕೃಷ್ಣರು ಹೇಳಿದಂತೆ ಕಲಿಯುಗಕ್ಕೆ ಭಕ್ತಿ ಯೋಗವೇ ಸೂಕ್ತವಾಗಿದ್ದು ಇದರ ಅನುಸರಣೆ ಸುಲಭವಾಗಿದೆ ಎಂದು ತಿಳಿಸಿದರು. ಕರ್ಮವನ್ನು ಕರ್ಮಯೋಗವಾಗಿ ಮಾಡಬೇಕು. ನಾವು ಮಾಡುವ ಪ್ರತಿಯೊಂದು ಕೆಲಸವನ್ನು ಭಗವದ್ ಅರ್ಪಣ ಭಾವದಿಂದ ನಿರ್ವಹಿಸಬೇಕು ಎಂದು ನಾಲ್ಕು ಯೋಗ ಮಾರ್ಗಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಈ ಆಧ್ಯಾತ್ಮಿಕ ಶಿಬಿರದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ವಿಶೇಷ ಭಜನೆ, ಧ್ಯಾನ, ಆರತಿ, ರಾಮಾಯಣದ ರಸ ಪ್ರಶ್ನೆ ಮತ್ತು ಆಶು ಭಾಷಣ ಸ್ಪರ್ಧೆಗಳು ನಡೆದವು. ಈ ಶಿಬಿರದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ರಶ್ಮಿ ಪಂಡಿತಾರಾಧ್ಯ, ಜಯಮ್ಮ, ಮಮತ, ಪುಷ್ಪ ,ಅಂಬಿಕ, ಜಯಲಕ್ಷ್ಮೀ, ಸುವರ್ಣ, ದೊಡ್ಡಜ್ಜಯ್ಯ , ಕಾವೇರಿ ಸುರೇಶ್, ಮಲ್ಲಿಕಾರ್ಜುನ, ರಂಜಿತ, ಟಿ.ಎಂ ವಿಜಯಕಲಾ ಗುರು, ಮಾಣಿಕ್ಯ ಸತ್ಯನಾರಾಯಣ, ಯಶೋಧಾ ಪ್ರಕಾಶ್, ಗೀತಾ ನಾಗರಾಜ್, ಹೂವಿನ ಲಕ್ಷ್ಮೀದೇವಮ್ಮ, ಯತೀಶ್ ಎಂ ಸಿದ್ದಾಪುರ, ಹೆಚ್ ಲಕ್ಷ್ಮೀದೇವಮ್ಮ, ಸುಮನ ಕೋಟೇಶ್ವರ, ಅಂಬುಜಾ, ಸರಸ್ವತಿ ಪಾಂಡು, ಚೆನ್ನಕೇಶವ,ಎಸ್ ಎಂ ಗೀತಾ ಸುರೇಶ್, ಸರಸ್ವತಮ್ಮ ಗೋವಿಂದರಾಜು, ಪ್ರೇಮಲೀಲಾ, ಭಾಗ್ಯಲಕ್ಷ್ಮೀ, ದೀಪ ರಾಘವೇಂದ್ರ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.