ಬಾಬು ಜೀ ಯವರು ದೇಶದ ಜನತೆಯ ಏಳ್ಗೆಗಾಗಿ ಜವಾಬ್ದಾರಿ ಯುತವಾಗಿ ಶ್ರಮಿಸಿದ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ ಕೊಳ್ಳಬೇಕೆಂದ – ವಿ.ಕೆ ನೇತ್ರಾವತಿ.

ಕೂಡ್ಲಿಗಿ ಏ.06

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಬಾಬು ಜಗಜೀವನ್ ರಾಂ 118 ನೇ. ಜಯಂತಿ ಆಚರಣೆಯನ್ನು ಸರ್ಕಾರದಿಂದ ತಾಲೂಕು ಆಡಳಿತ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ನೇತ್ರತ್ವದಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹಬ್ಬಗಳ ಅಧ್ಯಕ್ಷರ ತಹಶೀಲ್ದರಾದ ವಿ.ಕೆ ನೇತ್ರಾವತಿ ಇವರ ನೇತೃತ್ವದಲ್ಲಿ ನಡೆದ ಬಾಬು ಜಗಜೀವನ್ ರಾಮ್ ರವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಕಾರ್ಯಕ್ರಮ ಕುರಿತು ಮಾತನಾಡುತ್ತಾ ಬಾಬು ಜಗಜೀವನ್ ರಾಮ್ ರವರು ಸ್ವಾತಂತ್ರ್ಯ ಹೋರಾಟಗಾರರು, ಹಾಗೂ ಭಾರತ ದೇಶ ಸ್ವಾತಂತ್ರ್ಯ ನಂತರ ಮೊದಲ ಉಪ ಪ್ರಧಾನಿಗಳು, ಸಾಮಾಜಿಕ ನ್ಯಾಯದ ಕಾರ್ಯಕರ್ತ, ಇಂಥ ಮಹನೀಯರನ್ನು ಅವರ ಜನ್ಮ ದಿನದಂದು ನಾಮಕವ್ಯವಸ್ಥೆಗೆ ಪೂಜೆ ಹಾಗೂ ಆಚರಣೆ ಮಾಡದೆ ಅವರ ತತ್ವಗಳನ್ನು, ಆದರ್ಶಗಳನ್ನು, ಪ್ರತಿಯೊಬ್ಬರು ಬೆಳೆಸಿ ಕೊಳ್ಳಬೇಕು ಹಾಗೆ ಅವರು ಸಮಾಜದಲ್ಲಿ ಮೇಲೆ ಬರಲಾಗದೇ ಇರುವಂತಹ ದುರ್ಬಲರ ಏಳಿಗೆಗಾಗಿ ಶ್ರಮಿಸಿದ ಮಹಾನ್ ಚೇತನ, ಹಾಗೆ ಪ್ರತಿಯೊಬ್ಬ ನಾಯಕರುಗಳು ತಮ್ಮ ತಮ್ಮ ಜೊತೆಗಿರುವಂತಹವರನ್ನು ಮೇಲೆತ್ತು ಅಂತಹ ಕೆಲಸ ಮಾಡಬೇಕು ಆಗ ಮಾತ್ರ ಸಮಾಜಕ್ಕೆ ಮಾದರಿಯ ವ್ಯಕ್ತಿಗಳಾಗುತ್ತಾರೆ, ಎಂದು ಮಾನ್ಯ ತಹಶೀಲ್ದಾರರು ಕಾರ್ಯಕ್ರಮದ ಕುರಿತು ಮಾತನಾಡಿದರು.

ಹಾಗೆ ಈ ಸಂದರ್ಭದಲ್ಲಿ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಗುಣಸಾಗರ ಕೃಷ್ಣಪ್ಪ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಎಸ್.ದುರ್ಗೇಶ್, ಅಧ್ಯಕ್ಷರ ಭಾಷಣವಾಗಿ ಕಾವಲಿ ಶಿವಪ್ಪ ನಾಯಕ ಪಟ್ಟಣ ಪಂಚಾಯತಿ ಅಧ್ಯಕ್ಷರು, ಮುಖ್ಯ ಭಾಷಣಕಾರರಾಗಿ ಸಾಸಲವಾಡ ಶಿವಣ್ಣ ಬಾಬು ಜಗಜೀವನ್ ರಾಮ್ ಅಧ್ಯಕ್ಷರು, ಮತ್ತು ಚಲವಾದಿ ಉಮೇಶ್ ಬಾಬು ಜಗಜೀವನ್ ರಾಮ್ 118 ನೇ. ಜನ್ಮ ದಿನೋತ್ಸವದ ಕುರಿತು ಮಾತಾನಾಡಿದರು. ಹಾಗೆ ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಾದ ಪಿಡಬ್ಲ್ಯುಡಿ ನಾಗನ ಗೌಡ್ರು, ಜಿಲ್ಲಾ ಪಂಚಾಯತ್ ಅಧಿಕಾರಿಗಳಾದ ಮಲ್ಲಿಕಾರ್ಜುನ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭರಣಂ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಕಾಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ವೆಂಕಟೇಶ್, ಹಾಗೆ ಎಸ್.ಬಿ.ಐ ಹಾಗೂ ಕರ್ನಾಟಕ ಬ್ಯಾಂಕ್, ಪ್ರಗತಿ ಕೃಷ್ಣ ಬ್ಯಾಂಕಿನ ಮ್ಯಾನೇಜರ್ ಗಳು ಭಾಗವಹಿಸಿದ್ದು. ಹಾಗೂ ಮಾದಿಗ ದಂಡೋರ ತಾಲೂಕ ಅಧ್ಯಕ್ಷರಾದ ಕುಡುತಿನಿ ಮಹೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಡಿ ಎಚ್.ದುರ್ಗೇಶ್ ವಕೀಲರು, ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಎಳ್ನೀರ್ ಗಂಗಣ್ಣ, ದಲಿತ ಮುಖಂಡ ಹಾಗೂ ಪೆಟ್ರೋಲ್ ಬಂಕ್ ಮಾಲೀಕರಾದ ಬಂಡೆ ರಾಘವೇಂದ್ರ, ಡಿ.ಎಸ್.ಎಸ್ ದುರ್ಗೇಶ್, ಮಹೇಶ್, ಪಟ್ಟಣ ಪಂಚಾಯತಿಯ ಸರ್ವ ಸದಸ್ಯರುಗಳು ಭಾಗವಹಿಸಿದ್ದು ಹಾಗೂ ತಾಲೂಕು ಮಟ್ಟದ ಅನೇಕ ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button