“ಶ್ರೀರಾಮ ವಿಶ್ವ ಗೆಲುವಿನ ರಮಾಪತಿ”…..

ಸೂರ್ಯವಂಶದ ಕುಲ ತಿಲಕ
ಶ್ರೀರಾಮ ವಿಷ್ಣು ಅವತಾರಿ
ವೈಕುಂಠ ಅಯೋಧ್ಯವಾಸ
ಧನುಸ್ಸು ಕರದಲಿ ಹಿಡಿದಾತ
ದಶರಥ ಕೌಸಲ್ಯ ವರ ಸುಪುತ್ರ
ಲಕ್ಷ್ಮಣ ಭರತ ಶತ್ರುಘ್ನರ ಅಗ್ರಜ
ಸೀತಾದೇವಿ ಪ್ರೀಯ ರಮಾಪತಿ
ಪಿತೃವಾಕ್ಯ ಪರಿ ಪಾಲಕ ರಘುರಾಮ
ವಿಶ್ವ ನಾಡ ಸುಭಿಕ್ಷೆಯ ಪ್ರತೀಕ
ಹನುಮಾನ ಭಕ್ತಿಯ ಶಕ್ತಿದಾತ
ಶಬರಿ ಮುಕ್ತಿದಾತ ರಘುನಾಥ
ಶೂರ್ಪನಖಿ ರಾವಣ ಸಂಹಾರಕ
ದಶಗ್ರೀವ ಶಿರೋಹರ ಭಗವಾನ
ಲವ ಕುಶ ವಂಶೋದ್ಧಾರಕ
ಜಗದ ರಕ್ಷಕ ಶ್ರೀರಾಮಭದ್ರಾಯ
ನ್ಯಾಯ ನೀತಿ ಧರ್ಮದ ಪ್ರತೀಕ
ಮರ್ಯಾದಾ ಪುರಷೋತ್ತಮ
ಜನ ಮನದ ಜಯ ಶ್ರೀರಾಮ
ಲೋಕೊದ್ಧಾರಕ ಅಜರಾಮರ
ಶ್ರೀಮಾನ್ ರಾಜೇಂದ್ರ ವರಪ್ರದಾಯ
ಜಯ ಶ್ರೀರಾಮ ಜಯ ಶ್ರೀರಾಮ
ಶ್ರೀರಾಮಚಂದ್ರ ಪ್ರತಿಕ್ಷಣ ಸ್ಮರಣೆ
“ಶ್ರೀರಾಮ ವಿಶ್ವ ಗೆಲುವಿನ ರಮಾಪತಿ”
-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.