ಶ್ರೀ ಕೇಂಚಮ್ಮ ದೇವಿ ಮತ್ತು ಶ್ರೀ ಮರಿಯಮ್ಮ ದೇವಿಯವರ – ಜಾತ್ರಾ ಮಹೋತ್ಸವ.
ಜಕ್ಕಲಿ ಏ.07

ರೋಣ ತಾಲೂಕಿನ ನರೇಗಲ್ಲ ಸಮೀಪದ ಜಕ್ಕಲಿ ಗ್ರಾಮದಲ್ಲಿ ಉಗ್ರ ಸ್ವರೂಪಿನಿ ಯರಾದ ಶ್ರೀ ಕೇಂಚಮ್ಮದೇವಿ ಮತ್ತು ಶ್ರೀ ಮರಿಯಮ್ಮ ದೇವಿಯವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಲಿದೆ. ಇದೆ ಸೋಮವಾರದಿಂದ ಗುರುವಾರ ದವರೆಗೆ ವಿವಿಧ ಧಾರ್ಮಿಕ ಸಮಾರಂಭಗಳಿಗೆ ಜಕ್ಕಲಿ ಗ್ರಾಮ ಸಾಕ್ಷಿಯಾಗಲಿದೆ ಈ ಜಾತ್ರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳು 07-04-2025 ಸೋಮವಾರ ರಂದು ಅಮ್ಮನವರು ಹೊಳೆಗೆ ಸ್ನಾನಕ್ಕೆ ಹೋಗುವುದು 08-04-2025 ಮಂಗಳವಾರ ರಂದು ಅಮ್ಮನವರು ಗ್ರಾಮಕ್ಕೆ ಆಗಮನ ಮತ್ತು ಅಭಿಷೆಕ ಹಾಗೂ ಮಹಾ ಪ್ರಸಾದ 09-04-2025 ಬುಧವಾರ ರಂದು ಮಹಾ ಪ್ರಸಾದ 10-04-2025 ಗುರುವಾರ ರಂದು ಅಮ್ಮನವರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಮ್ಮನವರ ಸಂಚಾರ ಹೀಗೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅದೇ ರೀತಿಯಾಗಿ ದಿನಾಂಕ 10-04-2025 ರಾತ್ರಿ 8-00 ರಂದು ಗಾನ ಗಂಧರ್ವ ಮೆಲೋಡಿಸ್ ರವರಿಂದ ರಸ ಮಂಜರಿ ಕಾರ್ಯಕ್ರಮ ಅಂಬೇಡ್ಕರ್ ನಗರದಲ್ಲಿ ಅದ್ದೂರಿ ಯಾಗಿ ನಡೆಯಲಿದೆ. ಈ ಸಮಾರಂಭಕ್ಕೆ ಜಕ್ಕಲಿ ಗ್ರಾಮದ ಗುರು ಹಿರಿಯರು, ಯುವಕ ಮಿತ್ರರು ಸ್ವಾಗತ ಕೋರಿದ್ದಾರೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರು ಉಪಸ್ಥಿತರಿದ್ದು ಆ ತಾಯಿಯ ಆಶೀರ್ವಾದಕ್ಕೆ ಪಾತ್ರರಾಗೋಣ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್. ವಿಸಂಕನಗೌಡ್ರ.ರೋಣ.ಗದಗ