ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ SRE ಇಂಡಿಪೆಂಡೆಂಟ್ ಕಾಲೇಜಿನ ವಿದ್ಯಾರ್ಥಿನಿಯರು ವಿಜ್ಞಾನ, ಮತ್ತು ಕಲಾ ವಿಭಾಗದಲ್ಲಿ – ಪ್ರಥಮ ಸ್ಥಾನ.
ಜೇವರ್ಗಿ ಏ.09

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು. ನಗರದ SRE ಇಂಡಿಪೆಂಡೆಂಟ್ ಪಿ.ಯು ಕಾಲೇಜಿನ ವಿದ್ಯಾರ್ಥಿನಿಗಳಾದ ಕು.ಮೀನಾಕ್ಷಿ ವಿಜ್ಞಾನ ವಿಭಾಗದಲ್ಲಿ 97.66% ಪ್ರತಿಶತ ಅಂಕ ಪಡೆದು ಕಲಬುರಗಿ ಜಿಲ್ಲೆಗೆ 6 ನೇ. ರ್ಯಾಂಕ್ ತಾಲೂಕಿಗೆ ಪ್ರಥಮ ಸ್ಥಾನ ಮತ್ತು ಕಲಾ ವಿಭಾಗದಲ್ಲಿ ಕು.ಸಮೀನಾ 97.66% ಪ್ರತಿಶತ ಅಂಕ ಪಡೆದು ಕಲಬುರ್ಗಿ ಜಿಲ್ಲೆಗೆ 3 ನೇ. ರ್ಯಾಂಕ್ ಪಡೆದುಕೊಂಡಿದ್ದಾರೆ.

ತಾಲೂಕಿಗೆ ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿ ತಮ್ಮ ಶಿಕ್ಷಣ ಸಂಸ್ಥೆಗೆ ಉನ್ನತ ಶ್ರೇಣಿಯ ಹೆಸರು ತಂದು ಕೊಟ್ಟಿದ್ದಾರೆ ಅವರಿಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಚಾರ್ಯರು, ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ.ಎನ್.ಇಜೇರಿ