ಎನ್.ಎಸ್.ಎಸ್ ವಾರ್ಷಿಕ ಶಿಬಿರದ – ಸಮಾರೋಪ ಸಮಾರಂಭ.

ಹೊಸಳ್ಳಿ ಏ.11

ರೋಣ ತಾಲೂಕಿನ ಕೆ.ಎಸ್.ಎಸ್ ಮಹಾ ವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಹೊಸಳ್ಳಿ ಗ್ರಾಮದಲ್ಲಿ ಆಯೋಜಸಲಾಗಿತ್ತು. ಸಂಪ್ರದಾಯದಂತೆ ಎನ್.ಎಸ್.ಎಸ್ ಶಿಬಿರದ ಮುಕ್ತಾಯ ಸಮಾರಂಭ ಜರುಗಿತು. ಈ ಸಮಯದಲ್ಲಿ ಮುಖ್ಯೋಪಾಧ್ಯಾಯರಾದ ಡಾ, ರಾಜಯ್ಯ.ಆರ್ ಹಿರೇಮಠ ಅವರು ಇಂತಹ ಯೋಜನೆಗಳಿಂದ ಕೂಡಿರುವ ಘಟಕಗಳು ಪದೇ ಪದೇ ನಮ್ಮ ಗ್ರಾಮಕ್ಕೆ ಬರುವುದಾದರೆ ಸ್ವಾಗತಿಸಿ ತಮ್ಮ ಶಾಲೆಯಲ್ಲಿ ಎಲ್ಲ ತರದ ಮೂಲಭೂತ ಸೌಕರ್ಯ ಒದಗಿಸಿ ಸಹಕಾರ ನೀಡುವುದಾಗಿ ಭರವಸೆ ಇಟ್ಟರು ಗ್ರಾಮ ಪಂಚಾಯಿತಿಯ ಸದಸ್ಯರಾದ ಶ್ರೀ ಎಸ್ ಬಿ ರೆಡ್ಡಿರವರು ಸತತ ಮೂರು ನಾಲ್ಕು ವರ್ಷಗಳಿಂದ ಪ್ರಯತ್ನ ಪಟ್ಟು ಮೂಲಭೂತ ಸೌಕರ್ಯವನ್ನೆಲ್ಲ ಸಿದ್ಧಪಡಿಸಿ ಕೊಂಡು ತಮ್ಮೂರಿಗೆ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಹಮ್ಮಿಕೊಳ್ಳವಂತೆ ಮಾಡಲಾಯಿತು. ಇಂತಹ ಕಾರ್ಯಗಳಿಗೆ ತಮ್ಮ ಪಂಚಾಯತ್ ಅಧಿಕಾರಿ ವರ್ಗ ಗ್ರಾಮಸ್ಥ ರಿಂದ ಯುವಕ ಮಿತ್ರರಿಂದ ಎಲ್ಲಾ ತರದ ಸಹಾಯ ಸಹಕಾರದ ಭರವಸೆನಿಟ್ಟು ಮುಂದಿನ ದಿನಮಾನಗಳಲ್ಲಿ ಗ್ರಾಮದ ಜನರಲ್ಲಿರುವ ಮೌಢ್ಯತೆಗಳನ್ನು ಹೋಗಲಾಡಿಸಲು ಇಂತಹ ಘಟಕಗಳ ಸೇವೆ ತಮ್ಮ ಗ್ರಾಮಕ್ಕೆ ಅವಶ್ಯಕತೆ ಎಂಬ ವಿಚಾರವನ್ನು ವ್ಯಕ್ತಪಡಿಸಿದರು. ಅದೇ ರೀತಿಯಾಗಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಿವುಕುಮಾರ ಜುಮ್ಮನಗೌಡ ಅವರು ನಮ್ಮ ಶಾಲೆಯು ಹೈಟೆಕ್ ಶೌಚಾಲಯವನ್ನು ಹೊಂದಿದ್ದು, ವಿದ್ಯಾರ್ಥಿನಿ ಯರಿಗೆ ಯಾವುದೇ ರೀತಿಯ ಸಮಸ್ಯೆಯಾಗದ ರೀತಿಯಲ್ಲಿ ಮೂಲಭೂತ ಅವಶ್ಯಕತೆಗಳ ಪೂರೈಕೆ ಮಾಡುವಲ್ಲಿ ನಮ್ಮ ಶಾಲಾ ಸಿಬ್ಬಂದಿ ವರ್ಗ ಎಸ್‌ಡಿಎಂಸಿ ಸರ್ವ ಸದಸ್ಯರು ಸತತ ಪ್ರಯತ್ನದಿಂದ ಎಲ್ಲಾ ಸೌಕರ್ಯವನ್ನು ಒದಗಿಸುವಲ್ಲಿ ಯಶಸ್ವಿ ಯಾಯಿತು. ಈ ಶಿಬಿರದಲ್ಲಿ ಶಿಬಿರಾರ್ಥಿಗಳು ಪಡೆದ ಅನುಭವ ಮುಂದಿನ ದಿನಮಾನದಲ್ಲಿ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿ. ತಾವೆಲ್ಲರೂ ಮತದಾನದ ಹಕ್ಕನ್ನು ಹೊಂದಿರುವ ತಾವು ಉತ್ತಮ ನಾಯಕನ ಆಯ್ಕೆ ಮಾಡುವಲ್ಲಿ ಜವಾಬ್ದಾರಿ ಯುತವಾಗಿ ಕಾರ್ಯ ಪವೃತ್ತರಾಗ ಬೇಕೆಂಬ, ಸಮಾಜ ಸುಧಾರಣಾ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುವ ವಿಚಾರವನ್ನು ತಿಳಿಸಿದರು. ಕಾರ್ಯಕ್ರಮ ಅಧಿಕಾರಿಗಳಾದ ಡಾ, ಎಸ್.ಆರ್ ನದಾಫ್ ಅವರು ವಿದ್ಯಾರ್ಥಿಗಳಲ್ಲಿ ಸಮಾಜ ಗ್ರಾಮಗಳ ಅಭಿವೃದ್ಧಿ ಸೇವಾ ಮನೋಭಾವನೆಯನ್ನು ಬೆಳೆಸುವಲ್ಲಿ ಎನ್.ಎಸ್.ಎಸ್ ನ ಪಾತ್ರ ಅತ್ಯಂತ ಮಹತ್ವದವಾಗಿದ್ದು ಈ ಚಟುವಟಿಕೆಯಲ್ಲಿ ತೊಡಗಿರುವ ಶಿಬಿರಾರ್ಥಿಗಳಿಗೆ ಎಲ್ಲಾ ತರದ ಸಹಾಯ ಸಹಕಾರ ನೀಡಿದ ಶಾಲಾ ಮುಖ್ಯೋಪಾಧ್ಯರಿಗೆ ಸಿಬ್ಬಂದಿ ವರ್ಗದವರಿಗೆ ಎಸ್.ಡಿ.ಎಂ.ಸಿ ಅಧ್ಯಕ್ಷರಿಗೆ ಸರ್ವ ಸದಸ್ಯರಿಗೆ ಗ್ರಾಮ ಪಂಚಾಯತ ಅಧಿಕಾರಿ ವರ್ಗ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರಿಗೆ ಧನ್ಯವಾದಗಳು ಅರ್ಪಿಸಿದರು ಅದೇ ರೀತಿ ಈ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ಶಿಬಿರದ ಅನುಭವಗಳಿಂದ ಪಡೆದ ಅನುಭವಗಳನ್ನು ತಮ್ಮ ಮುಂದಿನ ಭವಿಷ್ಯತ್ತಿನ ಜೀವನದಲ್ಲಿ ಪರಿಣಾಮಕಾರಿಯಾಗಿ ಬಳಸಿ ಕೊಂಡು ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸಲು ಕಾರ್ಯ ಪ್ರವೃತ್ತರಾಗಬೇಕೆಂದು ತಿಳಿಸಿದರು. ಅದೇ ರೀತಿಯಾಗಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಸಿ.ಬಿ ಪೊಲೀಸಪಾಟೀಲ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನಮ್ಮ ಮಹಾವಿದ್ಯಾಲಯ ಸುಮಾರು 10 ವರ್ಷಗಳಿಂದ ವಿವಿಧ ಗ್ರಾಮಗಳನ್ನು ದತ್ತು ಗ್ರಾಮಗಳನ್ನಾಗಿ ಸ್ವೀಕರಿಸಿ ಕೊಂಡು ರಾಷ್ಟ್ರೀಯ ಸೇವಾ ಯೋಜನೆಯ ಅಡಿ ಒಳಗೆ ವಿಶೇಷ ಶಿಬಿರವನ್ನು ಹಮ್ಮಿಕೊಂಡು ಗ್ರಾಮೀಣ ಸೇವಾ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುತ್ತಾ ಬಂದಿದ್ದು, ಮಹಾವಿದ್ಯಾಲಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕಾರಿ ಯಾಗುವಂತೆ ಈ ಶಿಬಿರಗಳು ಕಾರ್ಯ ಪ್ರವೃತ್ತವಾಗುತ್ತಿದೆ. ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ತಮ್ಮ ಮನೆ ಮಕ್ಕಳೆಂದು ಸ್ವಾಗತಿಸಿ, ಎಲ್ಲ ತರಹದ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣೀಕರ್ತ ರಾಗಿರುವ ಹೊಸಳ್ಳಿ ಗ್ರಾಮದ ಸರ್ವರಿಗೂ ಮಹಾವಿದ್ಯಾಲಯದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ಈ ಸಮಯದಲ್ಲಿ ವೇದಿಕೆಯಲ್ಲಿ ಅಧ್ಯಕ್ಷತೆ ಕೆ.ಎಸ್.ಎಸ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ರೋಣ ಪ್ರಾಚಾರ್ಯರಾದ ಶ್ರೀ ಸಿ.ಬಿ ಪೊಲೀಸ ಪಾಟೀಲ್ ಅವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಡಾ. ರಾಚಯ್ಯ ಆರ್ ಹಿರೇಮಠ, ಶ್ರೀ ಬಿ. ಎಸ್ ರಡ್ಡೇರ, ಶ್ರೀ ಶಿವುಕುಮಾರ ಜುಮ್ಮನಗೌಡ್ರ, ಶ್ರೀ ಎಂ ಹೆಚ್ ನಾಯ್ಕರ್ , ಶ್ರೀ ಬಿ ಎಚ್ ಜಂಗನ್ನವರ್ ಹಾಗೂ ಶಿಬಿರಾರ್ಥಿಗಳು ಹಾಜರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button