ಎನ್.ಎಸ್.ಎಸ್ ವಾರ್ಷಿಕ ಶಿಬಿರದ – ದೀಪದಾನ ಸಮಾರಂಭ.
ಹೊಸಳ್ಳಿ ಏ.11

ರೋಣ ತಾಲೂಕಿನ ಕೆ.ಎಸ್.ಎಸ್ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರವನ್ನು ಹೊಸಳ್ಳಿ ಗ್ರಾಮದಲ್ಲಿ ಆಯೋಜಸಲಾಗಿತ್ತು 6 ನೇ. ದಿನದ ರಾತ್ರಿ ಸಂಪ್ರದಾಯದಂತೆ ದೀಪದಾನ ಸಮಾರಂಭ ಕಾರ್ಯಕ್ರಮ ನಡೆಯಿತು. ಈ ಸಮಯದಲ್ಲಿ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಸಿ,ಬಿ ಪೊಲೀಸ್ ಪಾಟೀಲ್ ರವರು ಭಾರತೀಯ ಪರಂಪರೆಯಲ್ಲಿ ಹಲವಾರು ಸಂಪ್ರದಾಯಗಳು ಬೆಳೆದ ಬಂದಿರುತ್ತದೆ ಅದರಲ್ಲಿ ಈ ದೀಪದಾನ ಸಮಾರಂಭವು ಒಂದು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ನೀವು ಎನ್.ಎಸ್.ಎಸ್ ಘಟಕದ ಕೊನೆಯ ದಿನವಾದ ಇಂದು ನೀವು ಪ್ರಜ್ವಲಿಸುವ ಜ್ಯೋತಿಗಳಂತೆ ಮುಂದಿನ ದಿನಮಾನಗಳಲ್ಲಿ ಬೆಳಗಬೇಕು ಜ್ಯೋತಿಯ ಸಂಕೇತ ಕತ್ತಲೆಯಿಂದ ಬೆಳಕಿ ನೆಡೆಗೆ ಕೊಂಡುಯುವುದು ಎಂಬುದಾಗಿದೆ ಬೆಳಕು ಇದ್ದಲ್ಲಿ ಕತ್ತಲೆ ಸುರಿಯುವುದಿಲ್ಲ ಹಾಗೆಯೇ ನಿಮ್ಮ ಜೀವನದಲ್ಲಿ ಈ ಜ್ಯೋತಿ ನಿಮ್ಮ ಭವಿಷ್ಯತ್ತನ್ನು ಉಜ್ವಲ ಗೊಳಿಸಲಿ ಹಾಗೆಯೇ ನಮ್ಮ ಮಹಾವಿದ್ಯಾಲಯದ ಕೀರ್ತಿ ಬೆಳಗಲಿ ಎಂದು ಮಾತನಾಡಿದರು. ಈ ಸಮಯದಲ್ಲಿ ಎಲ್ಲಾ ಶಿಬಿರಾರ್ಥಿಗಳು ಭಾರತ ನಕಾಶೆ ಚಿತ್ರದ ಮೇಲೆ 50 ಮೇಣದ ಬತ್ತಿಗಳನ್ನು ಇಟ್ಟು ತಮ್ಮ ಭವಿಷ್ಯತ್ತಿನ ಸಂಕಲ್ಪಗಳನ್ನು ಮಾಡಿ ಕೊಂಡು ದೀಪವನ್ನು ಬೆಳಗಿಸಿದರು. ಈ ಸಮಯದಲ್ಲಿ ಪ್ರಾಚಾರ್ಯರಾದ ಶ್ರೀ ಸಿ.ಬಿ ಪೊಲೀಸ ಪಾಟೀಲ್, ಕಾರ್ಯಕ್ರಮ ಅಧಿಕಾರಿಗಳಾದ ಡಾ, ಎಸ್.ಆರ್ ನದಾಫ, ಶ್ರೀ ಕೆ.ಕೆ ಹಿರೇಕಲ್ಲಪ್ಪನವರ, ಶ್ರೀ ಎಂ.ಹೆಚ್ ನಾಯ್ಕರ್, ಶ್ರೀ ಬಿ.ಎಚ್ ಜಂಗಣ್ಣವರ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ