ರೇವಣಸಿದ್ದಪ್ಪ ಎಸ್ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಭಾಗದಲ್ಲಿ – ಪಿ.ಎಚ್.ಡಿ ಪದವಿಗೆ ಭಾಜನ.
ಚಿತ್ರದುರ್ಗ ಏ.11

ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ರೇವಣಸಿದ್ದಪ್ಪ.ಎಸ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ.ಹಂಪಿ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ, ಎನ್.ಚಿನ್ನಸ್ವಾಮಿ ಸೋಸಲೆ ಮಾರ್ಗದರ್ಶನದಲ್ಲಿ “ವಿಜಯನಗರ ಪತನಾನಂತರ ವೀರಶೈವ ಹಾಗೂ ಲಿಂಗಾಯತ ಧರ್ಮದವರಲ್ಲಾದ ಸಾಂಸ್ಕೃತಿಕ ಸ್ಥಿತ್ಯಂತರಗಳ ಅಧ್ಯಯನ” (ಕ್ರಿ.ಶ ೧೫೬೫ ರಿಂದ ಸಮಕಾಲೀನ ವರೆಗೆ) ಎಂಬ ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದರು ಎಂದು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.