ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶಾಸಕರ ಸ್ವಗ್ರಾಮದಲ್ಲಿ ನೂರಾರು ಮಹಿಳೆಯರಿಗೆ ಸೀಮಂತ ಕಾರ್ಯ – ನೆರವೇರಿಸಿದ ಶಾಸಕರು.
ನರಸಿಂಹಗಿರಿ ಏ.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆಶಾ ಕಾರ್ಯಕರ್ತರಿಗೆ ಸನ್ಮಾನ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಿ ಶಾಸಕ ಡಾ, ಎನ್.ಟಿ. ಶ್ರೀನಿವಾಸ ಮಾತನಾಡಿದರು. ತಾಯ್ತನ ವೆಂಬುದು ಹೆಣ್ಣಿಗೊಲಿದ ಅದೃಷ್ಟವಾಗಿದೆ ಎಂದು ಶಾಸಕ ಡಾ, ಎನ್.ಟಿ ಶ್ರೀನಿವಾಸ ಹೇಳಿದರು. ತಾಲೂಕಿನ ನರಸಿಂಹಗಿರಿ ಗ್ರಾಮದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶಾಸಕರ ಸ್ವಗ್ರಾಮದಲ್ಲಿ ಗುರುವಾರ ನೆರವೇರಿದ ಸೀಮಂತ ಕಾರ್ಯ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೀಮಂತ ವೆಂದರೇ, ಕೇವಲ ಸಂಭ್ರಮಾಚರಣೆಯಲ್ಲ ಬದಲಿಗೆ ಸಂಸ್ಕಾರವನ್ನು ನೀಡುವುದಾಗಿದೆ. ಗರ್ಭವತಿಯಾದ ಹೆಣ್ಣು ಮಗಳು ಮತ್ತು ಆಕೆಯ ಕರುಳ ಕುಡಿಗೆ ಗುರು, ಹಿರಿಯರ, ಮುತೈದೆಯರ ಶುಭ ಹಾರೈಸುವುದರೊಂದಿಗೆ ಆರೈಕೆ ಮಾಡುವುದರೊಂದಿಗೆ ಧೈರ್ಯವನ್ನು ತುಂಬುವ ಶಾಸ್ತ್ರವಾಗಿದೆ ಎಂದರು. ತಜ್ಞ ವೈಧ್ಯನಾದ್ದರಿಂದ ಒಬ್ಬ ಗರ್ಭೀಣಿ ಸ್ತ್ರೀ ಮನೋವೇದನೆ ಆಕೆ ಬಯುಸುವ ಆಸೆ, ಆಕಾಂಕ್ಷೆಗಳನ್ನು ತಿಳಿದಿರುವುದರಿಂದ ಕ್ಷೇತ್ರದ ಶಾಸಕನಾಗಿ ಮನೋಬಲವನ್ನು ನೀಡುವುದರ ಮೂಲಕ ನಮ್ಮ ಕುಟುಂಬದವ ರೊಂದಿಗೆ, ವಿಶೇಷವಾಗಿ ಮಾತೃಶ್ರೀ ಎನ್.ಟಿ. ಓಬಮ್ಮನವರ ಶುಭ ಹಾರೈಸುವ ಕಾರ್ಯಕ್ರಮವನ್ನು ನೆರವೇರಿಸಿದ್ದೇನೆ.

ಗುಡೇಕೋಟೆ ಹೋಬಳಿಗೆ ಸಂಬಂಧಿಸಿ ದಂತೆ ಆಶಾ ಕಾರ್ಯಕರ್ತರೊಂದಿಗೆ, ಸೀಮಂತ ಕಾರ್ಯವನ್ನು ನೆರವೇರಿಸಲಾಗಿದೆ ಎಂದರು. ಕ್ಷೇತ್ರದ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಆರೋಗ್ಯ ನೀಡುವ ಮಹತ್ತರ ಉದ್ಧೇಶದಿಂದ ಸುಸಜ್ಜಿತ ಆಸ್ಪತ್ರೆಗಳು, ಉತ್ತಮ ತಜ್ಞ ವೈಧ್ಯರು, ಹಾಗೆ ನಿರಂತರ ಆರೋಗ್ಯ ತಪಾಸಣಾ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸರ್ವರಿಗೂ ಆರೋಗ್ಯ ನೀಡುವಲ್ಲಿ ಶ್ರಮ ವಹಿಸುತ್ತೇನೆಂದರು. ಮುಖ್ಯವಾಗಿ ಪ್ರತಿಯೊಂದು ಗ್ರಾಮದಲ್ಲಿ ಈಗಾಗಲೇ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಭೂಮಿ ಪೂಜೆಯನ್ನು ನೆರವೇರಿಸಿದ್ದೇನೆ. ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು. ದೊಡ್ಮನೆ ಕುಟುಂಬದ ಸದಸ್ಯರಾದ ಸಹೋದರ ಎನ್.ಟಿ ತಮ್ಮಣ್ಣ ಆಪ್ತ ಸಹಾಯಕ ಎಂ. ಮರುಳಸಿದ್ದಪ್ಪ, ದಿನಕರ ಸೇರಿದಂತೆ ಮುಖಂಡರು ಇದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ