ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ – ಪಿಎಸ್ಐ ಗೀತಾಂಜಲಿ ಶಿಂಧೆ.
ಕೊಟ್ಟೂರು ಏಪ್ರಿಲ್.04

ತಾಲೂಕಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವಿಪರೀತವಾಗಿ ಹೆಚ್ಚಾಗಿದ್ದು, ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಎಲ್ ಹರಿಬಾಬು ಹಾಗೂ ಕೂಡ್ಲಿಗಿ ಡಿವೈಎಸ್ಪಿ ಆದೇಶದ ಮೇರೆಗೆ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರನ್ನು ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಶಿಂಧೆ ರವರು ಹಲವು ವರ್ಷಗಳಿಂದ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿರುವ ದಂಧೆಕೋರರ ಮೇಲೆ, ಮಾಹಿತಿ ಮೇರೆಗೆ ಕ್ರೈಂ ನಂಬರ್ 0054/2024 ಪ್ರಕರಣ ದಾಖಲು ಮಾಡಿ, ದಂಧೆಕೋರರ ಎಡೆಮುರಿ ಕಟ್ಟಿದ್ದಾರೆ.

ಕೊಟ್ಟೂರು ಪಟ್ಟಣದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‌ಪಿನ್ ಆಗಿ ಹಲವು ವರ್ಷಗಳಿಂದ ಮೆರೆಯುತ್ತಾ, ರಾಜಕೀಯ ಪ್ರಭಾವಿ ವ್ಯಕ್ತಿಗಳ ಪ್ರಭಾವವನ್ನು ಬಳಸಿಕೊಂಡು ನುಣುಚಿ ಕೊಳ್ಳುತ್ತಿದ್ದರು. ಖಡಕ್ ಅಧಿಕಾರಿಗಳ ನೇತೃತ್ವದಲ್ಲಿ ಎ7 ಅಟವಾಳಗಿ ಸಂತೋಷ್, ಎ 8 ಅಟವಾಳಗಿ ಜಗದೀಶ್ ಇವರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಕೈಗೊಂಡಿರುವುದು ಸಾರ್ವಜನಿಕರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಯುವಕರು ತಮ್ಮ ಮನೆಯ ಪರಿಸ್ಥಿತಿಗಳನ್ನು ಲೆಕ್ಕಿಸದೇ ಹಣ ಕಟ್ಟಿ ತಮ್ಮ ಜೀವನ ಮತ್ತು ಅವರ ಮನೆಯ ವಾತಾವರಣವನ್ನೇ ಕಲುಷಿತ ಗೊಳಿಸಿ ಕೊಂಡಿರುವ ಹಲವಾರು ಪ್ರಕರಣಗಳಿದ್ದು, ಪೊಲೀಸರ ಈ ನಡೆಯಿಂದ ಹಲವು ಸಂಸಾರಗಳು ನಿಟ್ಟುಸಿರು ಬಿಟ್ಟು ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಎಂದು ಮಾನವ ಹಕ್ಕುಗಳ ಕಾರ್ಯಕರ್ತ ಪ್ರವೀಣ್ ಕುಮಾರ್, ಪರಶಪ್ಪ, ಅಂಜಿನಿ, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಮಾಧ್ಯಮಕ್ಕೆ ತಿಳಿಸಿದರು.
ಕೊಟ್ -1ಇಂತಹ ಅಕ್ರಮ ಚಟುವಟಿಕೆಗಳನ್ನು ವರದಿ ಮಾಡುವ ಪತ್ರಕರ್ತರಿಗೆ, ಹಣದ ವ್ಯಾಮೋಹವನ್ನು ತೋರಿಸಿ, ಅದಕ್ಕೆ ಬಗ್ಗದೇ ಇದ್ದಲ್ಲಿ ಅವರ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡಿ, ಪತ್ರಕರ್ತರ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ. ಪತ್ರಕರ್ತರಿಗೆ ತೊಂದರೆ ಅದರಲ್ಲಿ ಸಂಘಟನೆಗಳು ಬೆನ್ನೆಲುಬಾಗಿರುತ್ತವೆ ಎಂದು ಸಿಪಿಐ ಎಂಎಲ್ ಲಿಬರೇಷನ್ ಪಕ್ಷದ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ತಿಳಿಸಿದರು.
ಕೊಟ್ -2ಸಾರ್ವಜನಿಕರ ಹಿತ ಶಕ್ತಿಗೆ ಹಾಗೂ ಸಾಮಾಜಿಕ ಒಳಿತಿಗಾಗಿ ವರದಿಗಳನ್ನು ಬಿತ್ತರಿಸುವ ವರದಿಗಾರರಿಗೆ ತೊಂದರೆ ನೀಡುತ್ತಿರುವ ಸಂಶಯ ಕಾಣುತ್ತಿದೆ. ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಬಿತ್ತರಿಸಿದ ವರದಿಗಾರರಿಗೆ ತೊಂದರೆ ಉಂಟಾದಲ್ಲಿ ದೋ ನಂಬರ್ ದಂಧೆ ನಡೆಸುವ ದಂಧೆ ಕೋರರ ವಿರುದ್ಧ ಸಾಮೂಹಿಕ ಸಂಘಟನೆಗಳು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡುತ್ತೇವೆ .ಎಂದು ಡಿಎಸ್ಎಸ್ ತಾಲೂಕಾ ಅಧ್ಯಕ್ಷ ಪಿ ಚಂದ್ರಶೇಖರ್ ಪತ್ರಿಕೆಗೆ ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ ಕೊಟ್ಟೂರು.