ಸರಳತೆಯ ಮೂರ್ತರೂಪವೇ ಶ್ರೀಮಾತೆ ಶಾರದಾದೇವಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್.
ಚಳ್ಳಕೆರೆ ಏ.11

ಸರಳತೆಯ ಮೂರ್ತರೂಪವೇ ಶ್ರೀಮಾತೆ ಶಾರದಾದೇವಿ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಹೇಳಿದರು. ಶಿವ ನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಹಮ್ಮಿಕೊಂಡಿದ್ದ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಶ್ರೀಮಾತೆ ಶಾರದಾದೇವಿಯವರ ಜೀವನ ಶೈಲಿ ಮತ್ತು ಅವರ ಸಂದೇಶಗಳ ಬಗ್ಗೆ ಮಾತನಾಡಿದರು. ಶಾರದಾ ಮಾತೆಯವರ ಸರಳ ಮತ್ತು ನಿರಾಡಂಬರ ಜೀವನ ಇಂದಿನ ಜನರಿಗೆ ಮಾದರಿ ಯಾಗಬೇಕು. ಸರಳ ಜೀವನವೇ ಉತ್ತಮ ಬದುಕಿಗೆ ಸೋಪಾನವಾಗುತ್ತದೆ.

ಆದ್ದರಿಂದ ಸರಳ ಜೀವನ ಶೈಲಿಯನ್ನು ರೂಢಿಸಿ ಕೊಳ್ಳಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಠಣ, ವಿಶೇಷ ಭಜನೆ ನಡೆಯಿತು. ಈ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗೀತಾ ಸುಂದರೇಶ್, ಲಕ್ಷ್ಮೀ ದೇವಮ್ಮ, ಅನಿತ ಯಾದವರೆಡ್ಡಿ, ಶಾಂತಮ್ಮ ಶಾಂತವೀರಪ್ಪ, ನಾಗರತ್ನಮ್ಮ, ಜಯಮ್ಮ, ವಿಜಯಲಕ್ಷ್ಮಿ, ಶೈಲಜ, ಕೃಷ್ಣವೇಣಿ, ಕೆ.ಎಸ್ ವೀಣಾ,ವೀರಮ್ಮ, ಸಂಗೀತ, ಸೌಮ್ಯ , ಭ್ರಮರಂಭಾ, ಯತೀಶ್ ಎಂ ಸಿದ್ದಾಪುರ, ಮೀನಾಕ್ಷಿ ಮಂಜುನಾಥ ಹಾಜರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.