ಶ್ರೀ ಪೇಟೆ ಬಸವೇಶ್ವರ ರಥೋತ್ಸವಕ್ಕೆ ಚಾಲನೆ ನೀಡಿದ – ಎನ್.ವೈ.ಜಿ ಕುಟುಂಬ ಮತ್ತು ಶಾಸಕರು.
ದೇವಸಮುದ್ರ ಏ.12

ದೇವಸಮುದ್ರ ಶ್ರೀ ಜಠಂಗಿ ರಾಮೇಶ್ವರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ಗಂಗೆ ತರಲಾಯಿತು.ರಾಂಪುರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಲ್ಲಿಸಲಾಯಿತು ಈಶ್ವರ ದೇವಸ್ಥಾನ ಗುಡಿ ತುಂಬಲಾಯಿತು.ಸಂಜೆ ಶ್ರೀ ಪೇಟೆ ಬಸವೇಶ್ವರ ರಥೋತ್ಸವಕ್ಕೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ಗ್ರಾಮದ ದೈವಸ್ಥರಾದ ಎನ್.ವೈ ಪಿ ಸ್ವಾಮಿ, ಜಿ.ಎನ್ ಬಸವರಾಜಪ್ಪ, ಶಿವಣ್ಣ ಮೂರ್ತಿ, ತಿಪ್ಪೇಸ್ವಾಮಿ, ಜಯಕುಮಾರ್, ಸಿದ್ದಬಸಪ್ಪ, ವಿಜಯ್ ಕುಮಾರ್, ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಟಿ ನಾಗವೇಣಿ, ಸದಸ್ಯರಾದ ಶಿವರಾಜ್, ಭರತ್ ಕುಮಾರ್ ಬಸವರಾಜ್, ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು