ಇಂದು ಬಾಗಲಕೋಟೆಯಲ್ಲಿ ಭಾ.ಜ.ಪ ದಿಂದ – ಜನಾಕ್ರೋಶ ಹೋರಾಟ.
ಬಾಗಲಕೋಟೆ ಏ.17

ದಿನಾಂಕ 17 ರಂದು ಬಾಗಲಕೋಟೆಯಲ್ಲಿ ನಡೆಯುವ ಜನಾಕ್ರೋಶ ಹೋರಾಟಕ್ಕೆ ರಾಜ್ಯ ಭಾ.ಜ.ಪ ಅಧ್ಯಕ್ಷರಾದ ಶ್ರೀ ಭಿ.ವೈ ವಿಜೇಂದ್ರ ರವರು ಮತ್ತು ವಿರೋದ ಪಕ್ಷದ ನಾಯಕರಾದ ಶ್ರೀ ಆರ್.ಅಶೋಕ್ ರವರು ಮತ್ತು ವಿಧಾನ ಪರಿಷತ ನಾಯಕರಾದ ಶ್ರೀಛಲವಾದಿ ನಾರಾಯಣಸ್ವಾಮಿ ರವರು, ಸಚೇತಕರಾದ ಶ್ರೀ ರವಿಕುಮಾರ ರವರು ಜಿಲ್ಲೆಯ ಶಾಸಕರು ಮಾಜಿ ಸಚಿವರು ಸಂಸದರು ಪ್ರಮುಖರು ಭಾಗವಹಿಸುತ್ತಿರುವ ಈ ಮಹತ್ತ್ವದ ಹೋರಾಟದಲ್ಲಿ ದಯವಿಟ್ಟು ಎಸ್/ಸಿ, ಎಸ್/ಟಿ ಸಮುದಾಯದ ಮೋರ್ಚಾ ಪದಾಧಿಕಾರಿಗಳು ಹಾಗೂ ಪ್ರಮುಖ ಕಾರ್ಯಕರ್ತರು ಸಕ್ರೀಯವಾಗಿ ತೊಡಗಿಸಿ ಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಪಕ್ಷವು ಅತ್ಯಂತ ಅಚ್ಚುಕಟ್ಟಾಗಿ ಸದೃಢವಾಗಿದೆ ಎಂಬುದನ್ನು ಸಾಬೀತು ಪಡಿಸ ಬೇಕಾಗಿದೆ. ಎಲ್ರೂ ಭಾಗವಹಿಸ ಬೇಕೆಂದು ಕಳಕಳಿಯ ಮನವಿಯೊಂದಿಗೆ. ಜಿಲ್ಲಾಧ್ಯಕ್ಷರಾದ ಶ್ರೀ ಶಾಂತಗೌಡ ಪಾಟೀಲರು ಮತ್ತು ಬಾಗಲಕೋಟೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ವೀರಣ್ಣ ಚರಂತಿಮಠ ರವರು ಈಗಾಗಲೇ ಎಲ್ಲಾ ಪ್ರಮುಖರು ಭಾಗವಹಿಸಿ ಹೋರಾಟ ಯಶಸ್ವಿ ಗೊಳಿಸಲು ಕೋರಿದಂತೆ ನಾವುಗಳು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಮತ್ತೊಮ್ಮೆ ಮನವಿಯೊಂದಿಗೆ ಮುತ್ತಣ್ಣ.ವೈ ಬೆಣ್ಣೂರಜಿಲ್ಲಾಧ್ಯಕ್ಷರು ಬಿಜೆಪಿ ಎಸ್ಸಿ ಮೋರ್ಚಾ ಬಾಗಲಕೋಟೆ ಇವರು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟೆ