ಅರ್ಜುಣಗಿ ಗ್ರಾಮದ ಸಮಸ್ತ ಆದರಣೀಯ ಪುಣ್ಯವಂತ ರಕ್ತ ದಾನಿಗಳು – ಆರೋಗ್ಯ ಹಬ್ಬದಲ್ಲಿ ಔದಾರ್ಯದ ಸೇವಾ ನೋಟ.
ಅರ್ಜುಣಗಿ ಬಿ.ಕೆ ಏ.18

ಇಂಡಿ ತಾಲೂಕಿನ ಅರ್ಜುಣಗಿ ಬಿ.ಕೆ ಗ್ರಾಮದ ಪವಿತ್ರ ಗೈಬಿಪೀರ ದೇವರ ಜಾತ್ರೆಯ ಅಂಗವಾಗಿ ಆಯೋಜನೆದ ಧಾರ್ಮಿಕ ಹಾಗೂ ಆರೋಗ್ಯದ ಹಬ್ಬವು ಈ ಬಾರಿ ಗ್ರಾಮದ ಜನತೆಗೆ ವೈಶಿಷ್ಟ್ಯಮಯ ಅನುಭವವಾಗಿ ನೆನಪಾಗಿ ಉಳಿಯಿತು. ಬೆಳಿಗ್ಗೆ ಯಿಂದ ಸಾಯಂಕಾಲದ ವರೆಗೂ ನಡೆದ ಈ ಪವಿತ್ರ ಕಾರ್ಯಕ್ರಮದಲ್ಲಿ 104 ಮಂದಿ ಪುಣ್ಯವಂತರು ಸ್ವಯಂ ಪ್ರೇರಿತವಾಗಿ ರಕ್ತದಾನದಲ್ಲಿ ಪಾಲ್ಗೊಂಡರು. ಆದರೆ 22 ಮಂದಿ ರಕ್ತದಾನ ಮಾಡಲು ಯೋಗ್ಯರಾಗದೆ ತಿರಸ್ಕೃತರಾದರೂ, ಇತರೆ 82 ಮಂದಿಯಿಂದ ಶುದ್ಧ ರಕ್ತದ ಸಂಗ್ರಹ ನಡೆಯಿತು. ಈ ರಕ್ತದಾನ ಅಭಿಯಾನವು 334 ಜೀವಗಳನ್ನು ರಕ್ಷಿಸುವ ಮಹತ್ವ ಪೂರ್ಣ ಕಾರ್ಯಕ್ಕೆ ನಾಂದಿ ಬರೆದಿದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಈ ಸೇವೆಗೆ ಕೈಜೋಡಿಸಿದ ಆಯೋಜಕರು, ಅನ್ನದಾಸೋಹ ಸೇವೆ ಸಲ್ಲಿಸಿದವರು, ಹಣ್ಣಿನ ರಸ ಹಾಗೂ ಹಣ್ಣು ಹಂಪಲುಗಳನ್ನು ದಾನಿಸಿದ ದಾನಿಗಳು ಈ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು, ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆಗಳ ಪ್ರತಿ ನಿಧಿಗಳು, ಗುರು ಹಿರಿಯರು, ಸಹೋದರ ಸಹೋದರಿಯರು, ನೌಕರ ಬಂಧುಗಳು ಸೇರಿ ಶ್ರದ್ದೆಯಿಂದ ಪಾಲ್ಗೊಂಡರು. ಈ ಎಲ್ಲರ ಸಹಕಾರದಿಂದ ಆರೋಗ್ಯದ ಹಬ್ಬವು ಯಶಸ್ವಿಯಾಗಿ ನೆರವೇರಿತು. ಈ ಸುದಿನದ ನೆನಪಿಗಾಗಿ ಮತ್ತು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿರುವ ತಮ್ಮೆಲ್ಲರ ಅನನ್ಯ ಸೇವೆಗೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ ಪೂಜಾರ್ ಅವರು ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.