ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಲ್ಲಿ ಡಾ, ಬಾಬು ಜಗಜೀವನ್ ರಾಮ್ ಮತ್ತು ಅಂಬೇಡ್ಕರ್ ಅವರಿಗೆ ಅಗೌರವ ತೋರಿದ – ಘಟನೆ ಕಂಡು ಬಂದಿದೆ.
ರೋಣ ಏ.18

ನಗರದಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿ ಇರುವಂತ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ್ ರಾಮ್ ಅವರಿಗೆ ಅವಮಾನ ಮಾಡಿರುವ ಘಟನೆ ಒಂದು ಕಂಡು ಬಂದಿದೆ. ನಮ್ಮ ಸಿಹಿ ಕಹಿ ಪತ್ರಿಕೆಯ ವರದಿಗಾರರು ತಕ್ಷಣ ಇಲಾಖೆಯ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ಕಚೇರಿಯಲ್ಲಿ ಇದ್ದ ರವಿ ಭಜೇಂತ್ರಿ ಡಿ.ಗ್ರೂಪ್ ಸಹಾಯಕ ಹಾಗೂ ಕಂಪ್ಯೂಟರ್ ಡಾಟಾ ಆಪರೇಟರ್ ಅಹಮ್ಮದ್ ಅಲಿ ನದಾಫ್ ನಮ್ಮ ಮುಂದೆ ಏನೂ ಭಯವಿಲ್ಲದೆ ದಿನಾಂಕ 05/04/2025 ರಂದು ಡಾ, ಬಾಬು ಜಗಜೀವನ್ ರಾಮ್ ಜಯಂತಿ ನಾವು ಮಾಡಿಲ್ಲ ನಮ್ಮ ಇಲಾಖೆಯಲ್ಲಿ ಬಾಬು ಜಗಜೀವನ್ ರಾಮ್ ಅವರ ಫೋಟೋ ಇಲ್ಲ ನಮ್ಮ ತಾಲೂಕಾ ಅಧಿಕಾರಿಗಳು ನಮಗೆ ಜಯಂತಿ ಆಚರಣೆ ಮಾಡು ಎಂದು ನಮ್ಮ ಗಮನಕ್ಕೆ ತಂದಿಲ್ಲವೆಂದು ನಿರ್ಭಯವಾಗಿ ಹೇಳಿದ್ದಾರೆ.

ಸರ್ಕಾರದ ನಿಯಮದ ಪ್ರಕಾರ ಆಡಳಿತ ಮಾಡಲು ಬಂದಿದ್ದಾರೆ ಇಲ್ಲಾ ತಮಗೆ ಇಷ್ಟ ಬಂದಂತೆ ಮಜಾ ಮಾಡಲು ಬಂದಿದ್ದಾರೆ ನಾಚಿಕೆ ಆಗಬೇಕು ರಾಷ್ಟ್ರ ನಾಯಕನೆಂದು ಹೆಸರು ಹಸಿರು ಕ್ರಾಂತಿ ಹರಿಕಾರ ಡಾ, ಬಾಬು ಜಗಜೀವನ್ ರಾಮ್ ರವರಿಗೆ ಅಗೌರವ ತೋರಿದ ರೋಣ ತಾಲೂಕ ಮುಖ್ಯ ಅಧಿಕಾರಿ ಶರಣಪ್ಪ ಗರೇಬಾಳ. ಮತ್ತು ಆ ಇಲಾಖೆಯ ಇನ್ನೂಳಿದ ಅಧಿಕಾರಿಗಳು ಅಷ್ಟೇ ಅಲ್ಲಾ ಸಂವಿಧಾನವನ್ನು ಕಲ್ಪಿಸಿ ಕೊಟ್ಟ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ರವರಿಗೂ ಕೂಡ ಅಗೌರವ ತೋರಿದ ಘಟನೆ ಒಂದು ಕಂಡು ಬಂದಿದೆ.

ನಾ ದುರಸ್ತಿಯಾದ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿ ನಿಮಿಷಕ್ಕೆ ಅತ್ಯಂತ ಗೌರವಕ್ಕೆ ಒಳಗಾಗುವ ವಿಶ್ವದ ಏಕೈಕ ವ್ಯಕ್ತಿ ವಿಶ್ವ ಜ್ಞಾನಿ ಅವರ ಪೋಟೋ ಬಗ್ಗೆ ಅತ್ಯಂತ ದಿವ್ಯ ನಿರ್ಲಕ್ಷ್ಯ ತಳೆದ ಅಧಿಕಾರಿ ವರ್ಗ…..
ಅದೇ ನಂತೀರಾ ವೀಕ್ಷಕರೇ ಬಾಬಾ ಸಾಹೇಬ ಅಂಬೇಡ್ಕರ ಭಾವ ಚಿತ್ರ ಒಡೆದು ಹೋದರು ಕೂಡ ಅದೇ ಭಾವ ಚಿತ್ರವನ್ನು ಅಳವಡಿಸಿರುತ್ತಾರೆ ಸ್ಥಳಕ್ಕೆ ಭೇಟಿ ನೀಡಿದ ನಮ್ಮ ಸಿಹಿ ಕಹಿ ಮಾಧ್ಯಮ ವರದಿಗಾರರು ನೇರವಾಗಿ ಕಂಡಿದ್ದನ್ನು ಪ್ರಶ್ನೆ ಮಾಡಿದಾಗ ಅಲ್ಲಿನ ಅಧಿಕಾರಿಗಳು ತೊದಲು ನುಡಿಯಿಂದ ತಡ ಬಡಾಯಿಸಿದರು ತರಾಟೆಗೆ ತೆಗೆದು ಕೊಂಡಾಗ ಕಕ್ಕಾ ಬಿಕ್ಕಿಯಾಗಿ ಆ ಭಾವ ಚಿತ್ರವನ್ನು ತೆಗೆದು ಬಿರುನಲ್ಲಿ ಇಡಲು ಮುಂದಾದರು.

ಈ ವಿಷಯವಾಗಿ ಮಾಧ್ಯಮದವರು ಹಾಗೂ ಸಂಘಟನೆಯವರು ಇಲಾಖೆಗೆ ಬಂದು ಪರಿಶೀಲಿಸಿ ದೂರವಾಣಿ ಮುಖಾಂತರ ಶರಣಪ್ಪ ಗರೇಬಾಳ ಅವರಿಗೆ ಕೇಳಿದಾಗ ನನ್ನ ಗಮನಕ್ಕೆ ಬಂದಿರುವುದಿಲ್ಲ ನಾನು ನೋಡಿಲ್ಲ ಎಂದು ಉಡಾಫೇ ಉತ್ತರವನ್ನ ನೀಡುತ್ತಾರೇ ಇದನ್ನು ಗಮನಿಸಿದರೆ ಈ ತಾಲ್ಲೂಕು ಅಧಿಕಾರಿ ಶರಣಪ್ಪ ಗರೇಬಾಳ ಕೆಲಸ ಮಾಡಲು ಬಂದಿದ್ದಾನಾ ಇಲ್ಲಾ ಮಜಾ ಮಾಡಲು ಬಂದಿದ್ದಾನಾ ಎಂಬುದು ಯಕ್ಷ ಪ್ರಶ್ನೆ ಆಗಿದೆ ಅಷ್ಟೇ ಅಲ್ಲ ವೀಕ್ಷಕರೇ ಹೀರೆ ಅಕ್ಕನ ಚಾಳಿ ತಂಗಿಗೆ ಎಂಬಂತೆ ಈ ಮುಖ್ಯ ಅಧಿಕಾರಿಗಳ ನಿಯಮವನ್ನು ಕೆಳಗಿನ ಅಧಿಕಾರಿಗಳು ಅದನ್ನೇ ಪಾಲಿಸುತ್ತಿದ್ದಾರೆ ಅದೇನಂತೀರಾ ಕೊಟ್ಟಿರುವ ಐ.ಡಿ ಕಾರ್ಡ್ಗಳನ್ನು ಕೊರಳಿಗೆ ಹಾಕಿ ಕೊಳ್ಳದೆ ಬೇಕಾ ಬಿಟ್ಟೀಯಾಗಿ ಕೆಲಸ ಮಾಡುತ್ತಿದ್ದಾರೆ ಅದನ್ನು ಪ್ರಶ್ನೆ ಮಾಡಿದರೆ ಐ.ಡಿ ಕಾರ್ಡ್ಗಳನ್ನು ಮನೆಯಲ್ಲಿ ಇಟ್ಟಿದ್ದೇನೆ ಎಂಬ ಉಡಾಫೇ ಉತ್ತರ ನೀಡುತ್ತಾರೇ ಈ ಅಧಿಕಾರಿಗಳು ಐ.ಡಿ ಕಾರ್ಡನ್ನು ಕಚೇರಿಯಲ್ಲಿ ಹಾಕಿ ಕೊಳ್ಳುತ್ತಾರೋ ಇಲ್ಲಾ ಮನೆಯಲ್ಲಿ ಹಾಕಿ ಕೊಳ್ಳುತ್ತಾರೋ ನಾಚಿಕೆ ಯಾಗಬೇಕು ಇವರಿಗೆ ಇಷ್ಟೇ ಅಲ್ಲಾ ಜಿಲ್ಲಾ ಅಧಿಕಾರಿಗಳು ಈ ವಿಷಯವಾಗಿ ಕ್ರಮ ವಹಿಸಿದ್ದರೋ ಇಲ್ಲವೋ ಎಂದು ಮುಂದಿನ ವರದಿಯಲ್ಲಿ ಪ್ರಕಟಿಸಲಾಗುವುದು ಕಾಯ್ದು ನೋಡಿ ವಿಕ್ಷಕರೇ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ