ಉಗ್ರವಾದಿಗಳ ದಾಳಿಗೆ ಖಂಡನೆ ಮತ್ತು ಶ್ರದ್ಧಾಂಜಲಿ – ಮಾನ್ವಿಯಲ್ಲಿ ಸಾಲಿಡಾರಿಟಿ ಯೂತ್ ಮೊಮೆಂಟ್ ವತಿಯಿಂದ ಶಾಂತಿ ಪ್ರತಿಭಟನೆ.
ಮಾನ್ವಿ ಏ.26

ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಆತಂಕವಾದಿ ದಾಳಿಯನ್ನು ಖಂಡಿಸಿ ಮಾನ್ವಿಯ ಬಸವ ವೃತ್ತದಲ್ಲಿ ಸಾಲಿಡಾರಿಟಿ ಯೂತ್ ಮೊಮೆಂಟ್ ಸಂಸ್ಥೆಯು ಶಾಂತಿ ಪ್ರತಿಭಟನೆ ಆಯೋಜಿಸಿತು.ಈ ದಾಳಿಯಲ್ಲಿ ಪ್ರಾಣ ಕಳೆದು ಕೊಂಡ ಪ್ರವಾಸಿಗರ ಸ್ಮರಣಾರ್ಥವಾಗಿ ಮೊಮ್ ಬತ್ತಿಗಳ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಸದಸ್ಯರು ಮತ್ತು ಸಾರ್ವಜನಿಕರು ದೀಪ ಬೆಳಗಿಸಿ ಮೌನಾಚರಣೆ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಂಘದ ಸದಸ್ಯರು ಮಾತನಾಡುತ್ತಾ, “ಈ ರೀತಿಯ ಕ್ರೂರ ಕೃತ್ಯಗಳು ದೇಶದ ಶಾಂತಿ, ಸಾಮರಸ್ಯತೆಗೆ ಧಕ್ಕೆಯಾಗಿದ್ದು, ಇಂತಹ ಘಟನೆಗಳನ್ನು ತೀವ್ರವಾಗಿ ಖಂಡಿಸುತ್ತೇವೆ” ಎಂದರು. ಈ ಸಂದರ್ಭದಲ್ಲಿ ಸಾಲಿಡಾರಿಟಿ ಯೂತ್ ಮೊಮೆಂಟ್ ನ ಪದಾಧಿಕಾರಿಗಳು ಮಾತನಾಡುತ್ತಾ, “ಪಹಲ್ಗಾಮ್‌ನಲ್ಲಿ ಭದ್ರತಾ ವ್ಯವಸ್ಥೆಯ ಬಹುತೇಕ ಲೋಪದ ಕಾರಣ ಈ ದುರ್ಘಟನೆ ಸಂಭವಿಸಿದೆ. ಇಂತಹ ಪ್ರವಾಸಿ ಪ್ರದೇಶಗಳಲ್ಲಿ ಕಠಿಣ ಭದ್ರತಾ ಕ್ರಮಗಳು ಕೈಗೊಳ್ಳ ಬೇಕಾಗಿತ್ತು. ಇದು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಮತ್ತು ಇಂಟಲಿಜೆನ್ಸ್ ವೈಫಲ್ಯದ ಸ್ಪಷ್ಟ ಉದಾಹರಣೆಯಾಗಿದ್ದು, ಇದರಿಂದ ಅನೇಕ ಅಮಾಯಕ ಜನರು ತಮ್ಮ ಪ್ರಾಣ ಕಳೆದು ಕೊಂಡಿದ್ದಾರೆ,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಅಂತ್ಯದಲ್ಲಿ, ಶಾಂತಿ, ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಯ್ದು ಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ಸಾಲಿಡಾರಿಟಿಯ ಸದಸ್ಯರು ತೀವ್ರವಾಗಿ ಹುರಿದುಂಬಿಸಿದರು. ಬಸವ ಗುಪ್ತರಲ್ಲಿ ಸೇರಿದ ಯುವಕರನ್ನ ಉದ್ದೇಶಿಸಿ ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಶೇಕ್ ಫರೀದ್ ಉಮರಿ, ಮೌಲಾನ ಸಮೀರ್ ಪಾಷಾ, ಯುವ ಮುಖಂಡ ಮಿರ್ಜಾ ಮೊಹಮ್ಮದ್ ಬೇಗ್, ಅಬ್ದುಲ್ ಕರೀಂ ಖಾನ್, ಮೊಹಮ್ಮದ್ ಹಾರೂನ್ ಹಾಗೂ ದಾವುದು ಸಿದ್ದೀಕಿ ಮತ್ತು ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮಹಿಬೂಬ್ ಕುರೇಶಿ ಹಾಗೂ ಆದಿಲ್ ಸಿದ್ದಿಕಿ ಮಾತನಾಡಿದರು. ಈ ಸಂದರ್ಭದಲ್ಲಿ solidarity youth movement ಅಧ್ಯಕ್ಷರಾದ ನಾಸಿರ್ ಅಲಿ ಉಪಾಧ್ಯಕ್ಷರಾದ ಇಮ್ರಾನ್ ಖಾನ್ ಕಾರ್ಯದರ್ಶಿಯಾದ ಮೊಹಮ್ಮದ್ ಹಾರುನ್ ಗಫರ್ ಖಾನ್ ಮೊಹಮ್ಮದ್ ಮುಸಾ ಮುಜೀಬ್ ಉರ್ ರೆಹಮಾನ್ ಜಮಾತ್ ಇಸ್ಲಾಮಿ ಹಿಂದ್ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಾಬ್, ಅಥರ್ ಪಾಷಾ ಮೊಹಮ್ಮದ್ ಹಫೀಜ್ ನಾಜಿರ್ ಅಬ್ದುಲ್ ಖಾಯ್ಯೊಮ್ ಮತ್ತು ಇತರೆ ಸದಸ್ಯರು ಮತ್ತು ಅಪಾರ ಸಂಖ್ಯೆಯ ಯುವಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾನಕ್ಕುಂದಿ.ಮಾನ್ವಿ