ನಾಗರಕಟ್ಟೆ ಗ್ರಾಮದಲ್ಲಿ ಪೊಲೀಸ್ ನಾಮಫಲಕ – ಸರಳ ಸಮಾರಂಭ.
ಕೊಟ್ಟೂರು ಏ.27





ತಾಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ಸಾಯಂಕಾಲ ಮಲ್ಲೇಶ್ ದೊಡ್ಮನಿ ಡಿ.ವೈ.ಎಸ್ಪಿ ಕೂಡ್ಲಿಗಿ ಮತ್ತು ಗೀತಾಂಜಲಿ ಸಿಂಧೆ ಪಿ.ಎಸ್.ಐ ಕೊಟ್ಟೂರು ಇವರು ನಾಗರಕಟ್ಟೆ ಗ್ರಾಮದ ಸಾರ್ವಜನಿಕರಿಗೆ ಬೀಟ್ ಸಿಬ್ಬಂದಿಯವರ ಮಾಹಿತಿ ನಾಮಫಲಕ ಸರಳ ಸಮಾರಂಭದಲ್ಲಿ ಕಾನೂನು ಅರಿವು ಮೂಡಿಸುವುದರ ಮೂಲಕ ಯಾವುದೇ ರೀತಿಯ ಕೋಮು ಗಲಭೆಗೆ ಅವಕಾಶ ನೀಡದಂತೆ ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಒಬ್ಬರಿಗೊಬ್ಬರು ಸಹಕಾರ ಮನೋಭಾವ ದಿಂದ ಯಾವುದೇ ಜಾತಿ ಧರ್ಮ ಭೇದ ಭಾವ ಅನ್ನದೇ ಭ್ರಾತೃತ್ವತೆಯಿಂದ ಎಲ್ಲರೂ ಒಂದೇ ಎಂದು ಸಮಾನ ರೀತಿಯ ಜೀವನ ಸಾಗಿಸಬೇಕು.

ಜೂಜು ಮಟ್ಕಾ ಧೂಮಪಾನದಿಂದ ಆದಷ್ಟು ದೂರವಿರಬೇಕು ಹಾಗೂ ಯಾವುದೇ ಅಹಿತಕರ ಘಟನೆಗಳು ಕಂಡು ಬಂದಲ್ಲಿ ಕೊಟ್ಟೂರ್ ಪೊಲೀಸ್ ಠಾಣೆಗೆ ಹಾಗೂ 112 ನಂಬರಿಗೆ ಕಾಲ್ ಮಾಡಿ ತಿಳಿಸಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಗುರುರಾಜ್ ಬಿ, ಶ್ರೀದೇವಿ ಕೆ, ಡಿಎಸ್‌ಪಿ ಆಫೀಸಿನ ಕೊಟ್ರೇಶ್ ಚಿಮ್ಮನಹಳ್ಳಿ, ಕಾರು ಚಾಲಕರಾದ ಬಸವರಾಜ್ ಹಾಗೂ ಸಮಸ್ತ ಊರಿನ ಮುಖಂಡರು,ಯುವಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು