ಸರ್ಕಾರದ ಸಮಯ ಪ್ರಜ್ಞೆ ಇಲ್ಲದ ನಿರೀಕ್ಷಕಿ ಶೋಭಾ ಬೀಳಗಿ – ಮತ್ತು ಶಿರಸ್ತೇದಾರಿಣಿ ಶಾಂತ ಚವಡಿ.
ರೋಣ ಏ.27

ಇವರೇನು ಸರ್ಕಾರದ ನಿಯಮದ ಪ್ರಕಾರ ಸಮಯಕ್ಕೆ ಸರಿಯಾಗಿ ಸೇವೆ ಸಲ್ಲಿಸಲು ಬಂದಿದ್ದಾರೋ ಇಲ್ಲಾ ತಮಗೆ ಇಷ್ಟಬಂದಂತೆ ಬೇಕಾ ಬಿಟ್ಟಿಯಾಗಿ ಮಜಾ ಮಾಡಲು ಬಂದಿದ್ದಾರೋ ಗೊತ್ತೇ ಆಗುತ್ತಿಲ್ಲ. ಗದಗ ಜಿಲ್ಲೆಯ ರೋಣ ತಾಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾಂಖ್ಯಿಕ ನಿರೀಕ್ಷಕರು ಶೋಭಾ ಬೀಳಗಿ ಮತ್ತು ಸಿರಸ್ತಿದಾರಣಿ ಶಾಂತ ಚವಡಿ ಈ ಅಧಿಕಾರಿಗಳು ಇವರು ಬಂದಿದ್ದೆ ಸಮಯ ಹೋದಿದ್ದೆ ಸಮಯ ಇವರಿಗೆ ಹೆಳುವವರಿಲ್ಲ ಕೇಳುವವರಿಲ್ಲ ಕಚೇರಿಯಲ್ಲಿ ತಹಶೀಲ್ದಾರ ಇಲ್ಲದ ಸಮಯದಲ್ಲಿ ಮನೆ ಕಡೆ ಜಿಗಿಯುವುದೇ ಇವರಿಬ್ಬರ ಕೆಲಸ ಸರ್ಕಾರದ ಸಮಯ ಬೆಳಿಗ್ಗೆ 10:30 ರಿಂದ ಸಂಜೆ 5:30 ಗಂಟೆಯ ವರೆಗೆ ಸೇವೆ ಸಲ್ಲಿಸೊದು ನಿಯಮ ಇದ್ರೂ ಕೂಡ ಪ್ರತಿ ದಿನ ಈ ಸಾಂಖ್ಯಿಕ ನಿರೀಕ್ಷಕಿರು ಶೋಭಾ ಬೀಳಗಿ ಮತ್ತು ಸಿರಸ್ತೇದಾರಣಿ ಶಾಂತ ಚವಡಿ ಬೆಳ್ಳಿಗೆ ಬರೋದು 11 ಗಂಟೆಗೆ ಮತ್ತು ಸೇವೆ ಮುಗಿಸಿ ಹೋಗುವುದು ಸಂಜೆ 4:30 ಗಂಟೆಗೆ ಇವರೇನು ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಬಂದಿದ್ದಾರೋ ಇಲ್ಲಾ ತಮಗೆ ಇಷ್ಟ ಬಂದಂತೆ ಹೋಗಲು ಬರಲು ನೆಂಟರ ಮನೆ ಅಂದು ಕೊಂಡಿದ್ದಾರೋ ಎಂಬ ಯಕ್ಷ ಪ್ರಶ್ನೆಯಾಗಿದೆ.

ಅಷ್ಟೆಲ್ಲ ಈ ಶಿರಸ್ತೇದಾರಿಣಿ ಶಾಂತ ಚವಡಿ ಮತ್ತು ಶೋಭಾ ಬೀಳಗಿ. ರೋಣ ತಾಲೂಕಿನ ಗ್ರಾಮೀಣ ಪ್ರದೇಶದಿಂದ ಬರುವ ಜನರು ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಲಭ್ಯ ಇರುವುದಿಲ್ಲ ಕರೆ ಮಾಡಿದರು ಸಹ ಅದಕ್ಕೆ ಉತ್ತರ ನೀಡುವುದಿಲ್ಲ ಎಂದು ಗ್ರಾಮೀಣ ಪ್ರದೇಶದ ಸಾರ್ವಜನಿಕರಿಂದ ಪಿಸು ಪಿಸು ಮಾತುಗಳು ಕೇಳಿ ಬಂದಿವೆ. ತಾಲೂಕ ತಂಢಾಧಿಕಾರಿಗಳೇ ಎಲ್ಲಿದ್ದೀರಿ ನಿಮ್ಮ ಚಿತ್ತ ಸಮಯ ಪ್ರಜ್ಞೆ ಇಲ್ಲದ ತಮ್ಮ ಕಚೇರಿಯ ಸಾಂಖ್ಯಿಕ ನಿರೀಕ್ಷಕಿ ಶೋಭಾ ಬೀಳಗಿ ಮತ್ತು ಶಿರಸ್ತೇದಾರಿಣಿ ಶಾಂತ ಚವಡಿ ಅತ್ತ ಗಮನ ಹರಿಸಿರಿ ಸರ್ಕಾರದ ಸಮಯ ಪಾಲನೆ ಮಾಡದ ಈ ಅಧಿಕಾರಿಗಳಿಗೆ ಕಾನೂನು ಕ್ರಮ ತೆಗೆದು ಕೊಳ್ಳುವದರ ಜೊತೆಗೆ ಇವರನ್ನು ಅಮಾನತ್ತು ಮಾಡಬೇಕೆಂದು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್ ದ ಒತ್ತಾಯವಾಗಿದೆ.

ಈ ತಹಶೀಲ್ದಾರ ಕಚೇರಿಯಲ್ಲಿ ಇದೊಂದೇ ಸಮಸ್ಯೆ ಅಲ್ಲ ಇನ್ನೂ ಅನೇಕ ಸಮಸ್ಯೆಗಳು ಇದೆ ಎಂದು ಪಿಸು ಮಾತುಗಳು ಕೇಳಿ ಬರುತ್ತಿದ್ದಾವೆ. ಮುಂದಿನ ಭಾಗದಲಿ ನಮ್ಮ ಸಿಹಿ ಕಹಿ ಸುದ್ದಿ ಮಾಧ್ಯಮ ನಿಮ್ಮ ಮುಂದೆ ತರಲಿದೆ ಕಾಯ್ದು ನೋಡಿರಿ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ