“ನಿನ್ನಿಚ್ಛೇ ಸದ್ವಿಚ್ಛೆ ಇದ್ದಾಗ ಯಾವ ಭಯವು ಆವರಿಸದು”…..

ವಿದ್ಯೆ ಇಲ್ಲದವರಲ್ಲೂ ವಿನಯ ಗೌರವವಿದೆ ಧನಿಕನಲ್ಲದಿದ್ದರೂ ಕೊಡುಗೈ ದಾನಿ




ಮಹಾನ್ ಹುದ್ಧೆ ಇಲ್ಲದವರು ಹೆತ್ತವರ ಸೇವೆ ಮರೆಯದೆ ಮಾಡುವರು
ಸಂಸ್ಕಾರ ಸಂಸ್ಕೃತಿಯು ತಂದೆ ತಾಯಿ ಮನೆತದ ಹಿರಿಮೆಯು
ಏಷ್ಟೇ ವಿಶ್ವವಿದ್ಯಾಲಯಗಳ ಪದವಿ ಪಡೆದರೂತಾಯಿ ಹೇಳಿದ ಪಾಠವೇ ಶ್ರೇಷ್ಠತೆಯು
ಉತ್ತಮ ಕಾರ್ಯ ಹೇಳದೇ ಮಾಡು ಗಳಿಕೆ ತೋರಿಸದಿರುವದೇ ಒಳಿತು
ಪೋಷಕಾಂಶ ಆಹಾರ ತೋರಿಸದೇ ತಿನ್ನುವುದೇ ಉದರಕೆ ಹಿತವು
ಕೆಡುಕಗಳು ಕಣ್ಣಿಗೆ ಕಾಣಿಸದಿದ್ದರೆ ಜೀವನ ಪಾವನ
ಅನುಭವಿಗಳ ಸ್ನೇಹ ಬಿಡಬೇಡಸ್ವಾರ್ಥಿಗಳ ಕೂಟ ಕಾರ್ಕೂಟಕ ವಿಷದಂತೆಯು
ತದ್ಭಾವಂ ತದ್ಭವತಿ ಯಥಾ ದೃಷ್ಠಿ ತಥಾ ಸೃಷ್ಟಿಶುದ್ಧ ಮನದ ಮಾನವನು
ಬಾಳಿನ ಪಯಣದಿ ಬಡತನದ ಕೀಳಿರಿಮೆ ಬೇಡ
ಮೈಮಾಟ ಸಿರಿತನದ ಗರ್ವ ಮಾನವೀಯತೆಗೆ ಭಂಗವು
ನಿನ್ನಿಚ್ಛೇ ಸದ್ವಿಚ್ಛೆ ಇದ್ದಾಗ ಯಾವ ಭಯವುಆವರಿಸದು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.