ಜ್ಞಾನಜ್ಯೋತಿ ಶ್ರೀ ಸಿದ್ಧೇಶ್ವರ ಹಿರಿಯ ಪ್ರಾಥಮಿಕ ಶಾಲೆಯ – 19 ನೇ. ವಾರ್ಷಿಕ ಸ್ನೇಹ ಸಮ್ಮೇಳನ ಜರುಗಿತು.

ಕಲಕೇರಿ ಮಾ.09

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಜ್ಞಾನಜ್ಯೋತಿ ಶ್ರೀ ಸಿದ್ದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ 19 ನೇ. ವಾರ್ಷಿಕ ಸ್ನೇಹ ಸಮ್ಮೇಳನ 2024/25 ನೇ. ಸಾಲಿನ ಜ್ಯೋತಿಯನ್ನು ಬೆಳಗಿಸಿ ದೀಪದಿಂದ ದೀಪ ಹಚ್ಚಬೇಕು ಮಾನವ ಎಂದು ಈ ಸಮಾರಂಭ ನಡೆಯಿತು. ಪರಮ ಪೂಜ್ಯ ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯರು ಶ್ರೀ ಗುರು ಮರುಳಾರಾಧ್ಯ ಸಂಸ್ಥಾನ ಹಿರೇಮಠ ಇವರು ಆಶೀರ್ವಚನ ನೀಡಿದರು. ಈ ಸಂಸ್ಥೆ ಇಲ್ಲಿ ಕಲಿತಿರುವ ಮಕ್ಕಳು ಬಹಳ ಚೆನ್ನಾಗಿ ವಿದ್ಯಾವಂತರಾಗಿ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಪೂಜ್ಯರು ಈ ಸಂಸ್ಥೆಯವರಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಎಲ್ಲಾ ಪಾಲಕರಿಗೆ ಈ ಸಂಸ್ಥೆ ಇನ್ನೂ ಮೇಲತ್ರೆಕ್ಕೆ ಬೆಳೆಯಲಿ ಪ್ರತಿಯೊಂದು ಮಗು ಈ ಶಾಲೆಯಲ್ಲಿ ಕಲಿತು ಈ ಶಾಲೆಯ ಶಿಕ್ಷಕರ ಈ ಸಂಸ್ಥೆಯ ಹೆಸರನ್ನು ಉಳಿಸುವುದು ವಿದ್ಯಾರ್ಥಿಗಳ ಕರ್ತವ್ಯ ಎಂದು ಮನುಷ್ಯ ನಾವು ಹಾಕುವ ಬಟ್ಟೆಗಳಿಂದ ದೊಡ್ಡವನಾಗ ಬಾರದು ಮನುಷ್ಯನಿಂದ ದೊಡ್ಡವನಾಗ ಬೇಕು ಹಾಗೆ ಇಲ್ಲಿ ಕಲಿತ ವಿದ್ಯಾರ್ಥಿಗಳು ನೀವು ಕಲಿತ ವಿದ್ಯೆಯಿಂದ ದೊಡ್ಡವರಾಗ ಬೇಕು ಶಿಕ್ಷಕರನ್ನ ಹಿರಿಯರನ್ನ ಗೌರವಸ ಬೇಕು ಇದು ಪ್ರತಿಯೊಂದು ಮಗುವಿನ ಕರ್ತವ್ಯ ಎಂದು ತಿಳಿಸಿದರು.

ಎಸ್.ಎಸ್ ಕಲಶೆಟ್ಟಿ ಉಪನ್ಯಾಸಕರು ಇವರು ಈ ಸಂದರ್ಭದಲ್ಲಿ ಜಗತ್ತಿನಲ್ಲಿ ಮೊದಲು ಮಕ್ಕಳಿಗೆ ವಿದ್ಯಾ ಇರಬೇಕು ವಿದ್ಯೆ ಇದ್ದರೆ ಬೆಲೆ ಈ ಜಗತ್ತಿನಲ್ಲಿ ತಾಯಿ ತಂದೆ ಇವರನ್ನು ಗೌರವಿಸ ಬೇಕು ಅದು ಮಕ್ಕಳ ಧರ್ಮ ಎಂದು ತಿಳಿಸಿದರು. ಈ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಸುವರ್ಣ ದೇಸಾಯಿ. ಸಂಗನಗೌಡ ಲಿಂಗದಳ್ಳಿ. ಸಿ.ಎಸ್ ಹಿರೇಮಠ ಪ್ರಚಾರ್ಯರು. ಶಿವಶರಣ ಬಸ್ತಿಹಾಳ. ಎಸ್.ಎಲ್ ನಾಯ್ಕೋಡಿ. ಸಿ.ಆರ್.ಪಿ ಗ್ರಾಮದ ಹಿರಿಯರಾದಂತ ಸಂಗಾರೆಡ್ಡಿ ದೇಸಾಯಿ. ಶರಣಯ್ಯ ಮಠಪತಿ. ದೊಡ್ಡಬಸಪ್ಪ ಗೊಮ ಶೆಟ್ಟಿ . ದುಂಡಯ್ಯ ಚಿಕ್ಕಮಠ್ ಶಿಕ್ಷಕರು. ಕಲಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ರಾಜ ಅಹ್ಮದ್ ಸಿರಸಗಿ. ಆನಂದ್ ಅಡಿಕಿ. ಗ್ರಾಂ. ಪಂ. ಸದಸ್ಯರು. ವಿಶ್ವನಾಥ್ ರಾಠೋಡ್. ರಘುವೀರ ವರ್ಧಮಾನ ಗ್ರಾಂ.ಪಂ ಅಧ್ಯಕ್ಷರು ಆಲಗೂರ. ಪರಶುರಾಮ್ ಕುದರಕಾರ. ಈ ಶಾಲೆಯ ಮುಖ್ಯ ಗುರುಗಳು ಶಿವಾನಂದಯ್ಯ ಗಣೇಶ್ ಮಠ. ಕಿರಣ್ ಕುಮಾರ್ ದೇಸಾಯಿ. ಪ್ರಕಾಶ್ ಯರನಾಳ. ಶಾಂತಯ್ಯ ಚಿಕ್ಕಮಠ್. ವಿಶ್ವನಾಥ್ ಸಬರದ. ಪ್ರಶಾಂತ್ ಬಡಿಗೇರ್. ಮಾಡು ಜಂಬಿಗಿ. ಕಾರ್ಯಕ್ರಮದ ನಿರೂಪಣೆ ಇವರಗೆಂಟೆಪ್ಪ ಮೋಪಗಾರ. ಮೊಹಿಮೊದ ಬಾಗಲಕೋಟೆ.ಎಲ್ಲಾ ಶಾಲೆಯ ಶಿಕ್ಷಕರು ಗುರು ಮಾತೆಯವರು ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ಪಾಲಕರು ಸೇರಿದಂತೆ ಈ ಮಕ್ಕಳ ಕಾರ್ಯಕ್ರಮಗಳು ಅದ್ದೂರಿಯಿಂದ ನಡೆಯಿತು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button