ತಾಲೂಕ ಕಛೇರಿಯಲ್ಲಿ ಅವ್ಯವಹಾರ, ಸರ್ಕಾರಿ ಹಣ ಪತ್ನಿಯ ಗಂಡನ ಪಾಲು – ಶಾಮೀಲಾದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು.

ಉಡುಪಿ ಸ.04

ಜಿಲ್ಲಾ ಕಂದಾಯ ಇಲಾಖೆಯ ಉಡುಪಿ ತಾಲ್ಲೂಕು ಕಛೇರಿಯಲ್ಲಿ ಬ್ರಹ್ಮಾವರ ತಾಲ್ಲೂಕು, ಉಪ್ಪೂರು ಗ್ರಾಮದ ಗ್ರಾಮ ಆಡಳಿತ ಅಧಿಕಾರಿಯಾದ ಶ್ರೀಮತಿ ಸುರೇಖಾ, ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿ ಕೊಂಡು, ತಮ್ಮ ಪತಿಯ ಉದ್ಯಮಕ್ಕೆ ಲಕ್ಷಾಂತರ ರೂಪಾಯಿಗಳ ಸಾರ್ವಜನಿಕ ಹಣವನ್ನು ವರ್ಗಾವಣೆ ಮಾಡಿ ಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳಾದ ಅಂದಿನ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಸೇರಿದಂತೆ ಇತರೆ ಸಿಬ್ಬಂದಿಗಳು ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಪಾರದರ್ಶಕ ನಿಯಮಗಳ ಉಲ್ಲಂಘನೆಪ್ರಸ್ತುತ ಉಡುಪಿ ತಾಲೂಕು ಕಛೇರಿಯಲ್ಲಿ ದ್ವಿ.ದ ಸಹಾಯಕಿ ಹುದ್ದೆಯಲ್ಲಿರುವ ಸುರೇಖಾ, ಹೊಸ ತಾಲೂಕು ಕಛೇರಿ ಕಟ್ಟಡ ನಿರ್ಮಾಣದ ನಂತರ ಪೀಠೋಪಕರಣಗಳು, ಕಂಪ್ಯೂಟರ್ ಪರಿಕರಗಳು ಮತ್ತು ಸ್ಟೇಷನರಿ ಸಾಮಗ್ರಿಗಳನ್ನು ಖರೀದಿಸುವಾಗ ಕರ್ನಾಟಕ ಪಾರದರ್ಶಕ ಖರೀದಿ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ಯಾವುದೇ ರೀತಿಯ ದರ ಪಟ್ಟಿ ಅಥವಾ ಟೆಂಡರ್ ಕರೆಯದೇ, ಕಾಪು ವಿಧಾನ ಸಭಾ ಕ್ಷೇತ್ರದ ಪೆರ್ಡೂರು ಗ್ರಾಮದಲ್ಲಿರುವ ತಮ್ಮ ಪತಿಯಾದ ವಿನಯ್ ಕುಲಾಲ್ ಅವರಿಗೆ ಸೇರಿದ ‘ಲಹರಿ ಎಲೆಕ್ಟ್ರಾನಿಕ್ಸ್ ಸ್ಟೇಷನರಿ ಮತ್ತು ಫ್ಯಾನ್ಸಿ’ ಅಂಗಡಿಯಿಂದ (GSTIN: 29BSKPK9185K1ZS) ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪೂರೈಕೆಯಾಗದ ಸಾಮಗ್ರಿಗಳು, ಬಿಲ್ ಮಾತ್ರ ಪಾಸ್!ನಗರದಲ್ಲಿ ನೂರಾರು ಕಂಪ್ಯೂಟರ್ ಮತ್ತು ಸ್ಟೇಷನರಿ ಅಂಗಡಿಗಳು ಲಭ್ಯವಿದ್ದರೂ, ದೂರದ ಪೆರ್ಡೂರಿನಿಂದಲೇ ಈ ಖರೀದಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ವಹಿವಾಟು ಕೇವಲ ಕಛೇರಿಯ ರಿಜಿಸ್ಟರ್‌ಗಳಲ್ಲಿ ಮಾತ್ರ ನಮೂದಾಗಿದ್ದು, ವಾಸ್ತವವಾಗಿ ಯಾವುದೇ ಸಾಮಗ್ರಿಗಳನ್ನು ಹೊಸ ಕಛೇರಿಗೆ ಪೂರೈಕೆ ಮಾಡಿಲ್ಲಾ ಎಂಬುದು ಪ್ರಮುಖ ಆರೋಪವಾಗಿದೆ. ಈ ಅಕ್ರಮದ ಮೂಲಕ ಲಕ್ಷಾಂತರ ರೂಪಾಯಿಗಳ ಬಿಲ್‌ಗಳನ್ನು ಅಂದಿನ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತು ವಿದ್ಯಾಶ್ರೀ ಅವರ ಸಹಕಾರದೊಂದಿಗೆ ಪಾವತಿ ಮಾಡಿ ಕೊಂಡಿದ್ದಾರೆ ಎಂದು ವರದಿಯಾಗಿದೆ.

ಗಂಭೀರ ಕಾನೂನು ಉಲ್ಲಂಘನೆಗಳು ಈ ಪ್ರಕರಣವು ಹಲವು ಕಾನೂನು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ:

ಕರ್ನಾಟಕ ಸರಕಾರಿ ನೌಕರರ ನಡೆತೆ ನಿಯಮಗಳ ಉಲ್ಲಂಘನೆ: ಯಾವುದೇ ಸರ್ಕಾರಿ ನೌಕರನು ತನ್ನ ಕುಟುಂಬ ಸದಸ್ಯರ ಒಡೆತನದ ವ್ಯವಹಾರಕ್ಕೆ ಬೆಂಬಲ ನೀಡುವುದು ಅಥವಾ ಅದರೊಂದಿಗೆ ವ್ಯವಹಾರ ನಡೆಸುವುದು ಸಂಪೂರ್ಣವಾಗಿ ನಿಷಿದ್ಧ. ಸುರೇಖಾ ಅವರ ಈ ಕೃತ್ಯವು ಗಂಭೀರ ದುರ್ನಡತೆ ಯಾಗಿದೆ.

ಭ್ರಷ್ಟಾಚಾರ ನಿಗ್ರಹ ಕಾಯ್ದೆ: ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿ ಕೊಂಡಿರುವುದು ಭ್ರಷ್ಟಾಚಾರ ನಿಗ್ರಹ ಕಾಯ್ದೆ, 1988ರ ಅಡಿಯಲ್ಲಿ ಅಪರಾಧವಾಗಿದೆ.

ಕ್ರಿಮಿನಲ್ ಪಿತೂರಿ: ಈ ಅವ್ಯವಹಾರದಲ್ಲಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಡೆಪ್ಯೂಟಿ ತಹಶೀಲ್ದಾರ್, ಉಪ ತಹಶೀಲ್ದಾರ್ ರವಿಶಂಕರ್, ಇ.ಎಸ್.ಟಿ ವಿಷಯ ನಿರ್ವಾಹಕಿ ವಿದ್ಯಾಶ್ರೀ ಮತ್ತು ಸುರೇಖಾ ಸೇರಿದಂತೆ ಎಲ್ಲಾರೂ ಸೇರಿ ಕೊಂಡು ಸಾರ್ವಜನಿಕ ಹಣವನ್ನು ಲಪಟಾಯಿಸಿ ವಂಚಿಸಿದ್ದಾರೆ. ಇದು ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 120-ಬಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿ ಎನಿಸಿ ಕೊಳ್ಳುತ್ತದೆ.

ಲೋಕಾಯುಕ್ತಕ್ಕೆ ದೂರು ಮತ್ತು ಸಾರ್ವಜನಿಕರ ಆಕ್ರೋಶಈ ಭ್ರಷ್ಟಾಚಾರದ ಕುರಿತು ಸಾರ್ವಜನಿಕರು ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದು, ಕೂಡಲೇ ತನಿಖೆ ನಡೆಸ ಬೇಕೆಂದು ಒತ್ತಾಯಿಸಿದ್ದಾರೆ. ಗ್ರಾಮ ಆಡಳಿತ ಅಧಿಕಾರಿ ಆಗಿದ್ದರೂ ಡೆಪ್ಯುಟೇಶನ್ ಮೇಲೆ ಕಛೇರಿಯಲ್ಲಿ ಮುಂದುವರೆದಿರುವ ಸುರೇಖಾ ಅವರ ನಿಯೋಜನೆ ರದ್ದು ಪಡಿಸಿ, ಅವರನ್ನು ಮೂಲ ಕರ್ತವ್ಯಕ್ಕೆ ವಾಪಸ್ ಕಳುಹಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆರೋಪಿಗಳನ್ನು ತಕ್ಷಣ ಸೇವೆಯಿಂದ ಅಮಾನತು ಗೊಳಿಸಬೇಕು, ಏಕೆಂದರೆ ಅವರು ಸಾಕ್ಷಿಗಳನ್ನು ನಾಶ ಪಡಿಸುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸ ಬೇಕೆಂದು ಒತ್ತಾಯಿಸಲಾಗಿದೆ. ಇದು ಆಡಳಿತ ವ್ಯವಸ್ಥೆಯಲ್ಲಿನ ನಂಬಿಕೆಯನ್ನು ಪುನಃ ಸ್ಥಾಪಿಸಲು ಅತ್ಯಗತ್ಯವಾಗಿದೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್ ನ ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತದೆ.

ವರದಿ:ಆರತಿ ಗಿಳಿಯಾರು ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button