ಮರುಳ ಸಿದ್ದೇಶ್ವರ ಮಠದಲ್ಲಿ ಸೋಮಯ್ಯ ಸ್ವಾಮಿಗಳ 28 ನೇ. – ಪುಣ್ಯಾರಾಧನೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ.

ಸವಡಿ ಮೇ.10

ರೋಣ ತಾಲೂಕಿನ ಸವಡಿ ಗ್ರಾಮದ ಸುಕ್ಷೇತ್ರ ಮರುಳಸಿದ್ದೇಶ್ವರ ಮಠದಲ್ಲಿ ಸೋಮಯ್ಯ ಸ್ವಾಮಿಗಳ 28 ನೇ. ಪುಣ್ಯಾರಾಧನೆ ಅಂಗವಾಗಿ ಜೂ. 09 ರ ಸೋಮವಾರ ದಂದು ಸರ್ವ ಧರ್ಮಗಳ ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜೂ. 08 ರ ರವಿವಾರ ದಂದು ರಾತ್ರಿ 9 ಗಂಟೆಗೆ ವಿಷೇಶ ಭಜನಾ ಕಾರ್ಯಕ್ರಮಗಳು ಹಾಗೂ ಜೂ. 09 ರಂದು ಬೆಳಿಗ್ಗೆ 05 ಗಂಟೆಗೆ ಮರುಳಸಿದ್ದೇಶ್ವರ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಲಿಂಗದೀಕ್ಷೆ, ಅಯ್ಯಾಚಾರ ಕಾರ್ಯಕ್ರಮಗಳು ಜರುಗಲಿವೆ. ನಂತರ 10 ಗಂಟೆಗೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಶ್ರೀ ಸೋಮಯ್ಯ ಸ್ವಾಮಿಗಳ ಪುಣ್ಯ ತಿಥಿ ವಿಜೃಂಬಣೆ ಯಿಂದ ಜರುಗುವುದು.ನಂತರ ಮಧ್ಯಾಹ್ನ 12.15 ಕ್ಕೆ ಪರಮ ಪೂಜ್ಯ ಮರುಳ ಸಿದ್ದೇಶ್ವರ ಸ್ವಾಮಿಗಳ ಹಾಗೂ ಪೂಜ್ಯ ಶಿವಲಿಂಗಯ್ಯ ಸ್ವಾಮಿಗಳ ನೇತೃತ್ವದಲ್ಲಿ ಸಾಮೂಹಿಕ ವಿವಾಹಗಳು ನಡೆಯಲಿವೆ.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ರದುರ್ಗದ ಡಾ, ಬಸವಮೂರ್ತಿ ಮಾದರ ಚನ್ನಯ್ಯ ಮಹಾ ಸ್ವಾಮಿಗಳು,ಕುಕನೂರು ತಾಲೂಕಿನ ಇಟಗಿಯ ಶಿವಶರಣ ಗದಿಗೆಪ್ಪಜ್ಜ ನವರು, ರೋಣ ಗುಲಗಂಜಿ ಮಠದ ಗುರುಪಾದ ದೇವರು, ಕೋಡಿಹಳ್ಳಿ ಆದಿ ಜಾಂಬವ ಸಂಸ್ಥಾನ ಮಠದಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮಿಗಳು, ಬೆನಾಳ ಹಿರೇಮಠದ ಸದಾಶಿವ ಶಿವಾಚಾರ್ಯರ ಸ್ವಾಮಿಗಳು, ಹುಬ್ಬಳ್ಳಿ ರಾಜ ವಿದ್ಯಾಶ್ರಮ ಶ್ರೋತ್ರಿಯ ಬ್ರಹ್ಮನೀಷ್ಠ ಷಡಕ್ಷರಿ ದೇವರು, ಹಂಪಿ ಮಾತಂಗ ಮುನಿ ಆಶ್ರಮದ ಪೂರ್ಣಾನಂದ ಭಾರತಿ ಸ್ವಾಮಿಗಳು.

ಬಾದಾಮಿ ಶ್ರಿ ಅಂಬಾ ಆಶ್ರಮದ ಶ್ರೀ ಮಾತೋಶ್ರೀ ದಯಾಭಾರತಿ, ಬಸವ ಕಲ್ಯಾಣ ಬಸವ ಪ್ರಭು ಸ್ವಾಮಿಗಳು, ಹಿರೇ ಸಿಂದೋಗಿ ಹೂವಯ್ಯ ಸ್ವಾಮಿಗಳು, ಬಿಸರಳ್ಳಿ ಮಳಿಯಯ್ಯ ಸ್ವಾಮಿಗಳು, ಲಕ್ಕುಂಡಿ ಹುಚ್ಚಯ್ಯ ಸ್ವಾಮಿಗಳು, ಹಿರೇ ಸಿಂಧೋಗಿ ನಾಗರಾಜ ಸ್ವಾಮಿಗಳು, ಸವಡಿ ಶಿವಲಿಂಗಯ್ಯ ಸ್ವಾಮಿಗಳು, ಲಕ್ಕುಂಡಿ ಶಿವಮುನಿ ಸ್ವಾಮೀಗಳು, ಯರಗೊಪ್ಪ ಚೌಡೇಶ್ವರಿ ದೇವಿ ಆರಾದಕರಾದ ನಾಗರಾಜ, ಸವಡಿ ಮಲ್ಲಜ್ಜನವರು, ಸವಡಿ ಸಂಗನಬಸಯ್ಯ ಸ್ವಾಮಿಗಳು, ಸವಡಿ ವೇ.ಮೂ. ಚಂದ್ರಶೇಖರಯ್ಯ ಹಿರೇಮಠ ಸೇರಿದಂತೆ ನಾಡಿನ ಹರ, ಗುರು ಚರ ಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗುವವು. ವಿಷೇಶವಾಗಿ ಹುಲ್ಲೂರಿನ ದೇವಿ ಅರ್ಚಕರಾದ ರಾಮಕೃಷ್ಣ ಪೂಜಾರ ಇವರಿಂದ ಸಂಗೀತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಚಿವರು, ಶಾಸಕರು, ರಾಜಕೀಯ ಧುರೀಣರು, ಸಾಹಿತಿಗಳು, ಚಿಂತಕರು, ದಾನಿಗಳು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ವಿವಿಧ ಭಜನಾ ಮಂಡಳಿಯವರು ಭಾಗವಹಿಸುವರು.ಕಾರ್ಯಕ್ರಮಕ್ಕೆ ಸುತ್ತ ಮುತ್ತಲಿನ ಎಲ್ಲಾ ಗ್ರಾಮಗಳ ಸಕಲ ಸದ್ಭಕ್ತರು ಆಗಮಿಸಿ, ತನು, ಮನ, ಧನಗಳಿಂದ ಸೇವೆ ಸಲ್ಲಿಸಿ ಶ್ರೀಗಳ ದರ್ಶನ ಆಶೀರ್ವಾದ ಪಡೆದು ಪ್ರಸಾದವನ್ನು ಸ್ವೀಕರಿಸಿ ಪುನೀತರಾಗ ಬೇಕೆಂದು ಸವಡಿ ಗ್ರಾಮದ ಸಮಸ್ತ ಗುರು, ಹಿರಿಯರು, ಯುವಕ ಮಿತ್ರರು ಹಾಗೂ ರೇವಣ ಸಿದ್ದೇಶ್ವರ ಭಜನಾ ಮಂಡಳಿ, ದುರ್ಗಾದೇವಿ ಟ್ರಸ್ಟ್ ಕಮಿಟಿ ಮತ್ತು ಡಾ, ಬಿ.ಆರ್ ಅಂಬೇಡ್ಕರ್ ಯುವಕ ಸಂಘದವರು ಪತ್ರಿಕಾ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

ವರದಿ:ಅಂದಪ್ಪ ಮಾದರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button