100 ದಿನ ಮನರೇಗಾ ಕೆಲಸ ಕಲ್ಪಿಸಿ ಎಂದು ಪಿಡಿಓ ಮತ್ತು ಅಧ್ಯಕ್ಷರಿಗೆ ಹಕ್ಕೋತ್ತಾಯ ಪತ್ರ ಕೊಡುವದರೊಂದಿಗೆ – ಪಟ್ಟು ಹಿಡಿದ ಗ್ರಾಮಸ್ಥರು.
ಜಕ್ಕಲಿ ಮೇ.13





ಸರ್ಕಾರದ ನಿಯಮದ ಪ್ರಕಾರ ಪ್ರತಿ ಜಾಬ್ ಕಾರ್ಡಿಗೆ 100 ದಿನ ಕೆಲಸ ಕೊಡಬೇಕೆಂದು ಆದೇಶ ಇದ್ರೂ ಕೂಡ ಕೇವಲ ಕೆಲವೇ ಕೆಲವೂ ದಿನಗಳು ಮಾತ್ರ ಕೆಲಸ ಕೊಡುವ ಪಿಡಿಓ ಮೇ 12 ರಂದು ಸೋಮವಾರ 100 ದಿನ ಕೆಲಸ ಕೊಡಲೇ ಬೇಕು ಎಂದು ಗ್ರಾಮ ಪಂಚಾಯಿತಿ ಪಿಡಿಓ ಮತ್ತು ಅಧ್ಯಕ್ಷಣಿಗೆ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು.ಹೌದು ಇದು ಎಲ್ಲಿ ಅಂತೀರಾ ಗದಗ ಜಿಲ್ಲೆ ರೋಣ ತಾಲೂಕು ಜಕ್ಕಲಿ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆ, ಜೊತೆಗೆ ಬಡ ಕೂಲಿ ಕಾರ್ಮಿಕರಿಗೆ 100 ದಿನ ಕೆಲಸ ಕೊಡದ ಪಿಡಿಓ ಗೆ ಗ್ರಾಮದ ಪ್ರಜ್ಞಾವಂತ ಯುವಕರು ಮತ್ತು ಮಹಿಳೆಯರು ಸರ್ಕಾರ ನಿಯಮದ ಪ್ರಕಾರ ಪ್ರತಿ ಜಾಬ್ ಕಾರ್ಡಿಗೂ 100 ದಿನ ಕೆಲಸ ಕೊಡಲೇ ಬೇಕು 100 ದಿನ ಕೆಲಸ ಕೊಡದೆ ಇದ್ದಲ್ಲಿ ಗ್ರಾಮ ಪಂಚಾಯಿತಿಯ ಪಿಡಿಓ ಎಸ್.ಎಸ್ ರಿತ್ತಿ ಮತ್ತು ಪಂಚಾಯಿತಿಯ ಅಧ್ಯಕ್ಷೆ ಗಂಗವ್ವ ಜಂಗಣ್ಣವರ ಹಾಗೂ ಸದಸ್ಯರು ಹೊಣೆಗಾರರು ಎಂದು ಗ್ರಾಮದ ಯುವಕರು ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಿದರು.ಇದೆ ಸಂದರ್ಭದಲ್ಲಿ ಶಿಕ್ಷಕ ನಿಂಗರಾಜ್ ತುರಾಯದ. ಶರಣಪ್ಪ ಕೋರಿ. ಮಂಜುನಾಥ ತೋಟದ. ಹಣಮಂತ ಮಾದರ. ಅನಿಲಿಕುಮಾರ ತಳವಾರ. ಮಂಜು ವಾಲಿ. ರಾಘವೇಂದ್ರ ನರಿ. ಆನಂದ ಕೊಪ್ಪದ. ಗ್ರಾಮದ ಇನ್ನೂ ಅನೇಕ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ