ಬಸನಗೌಡ ಕೊಲೆ ಬೆದರಿಕೆ ಹಾಕಿದ್ದಾನೆಂದು – ಲಕ್ಷ್ಮಿಯ ಆರೋಪ.
ಆಲ್ದಾಳ್ ಮೇ.14

ಅಮಾಯಕ ಮಹಿಳೆಯರು ಕಂಡರೆ ಸಾಕು ಸಮಾಜದಲ್ಲಿ ಮೋಸ ಅನ್ಯಾಯ ವಂಚನೆ ಮಾಡುವುದು ಗ್ಯಾರಂಟಿ. ಅಂತದ್ದೆ ಸಮಚಾರ ಮಾನ್ವಿ ತಾಲೂಕಿನ ಆಲ್ದಾಳ್ ಗ್ರಾಮದ ಬಸನಗೌಡ ತಂದೆ ಚನ್ನವೀರಪ್ಪ ಅವರು ಅಮಾಯಕ ಮಹಿಳೆ ಲಕ್ಷ್ಮಿಗೆ ಮೋಸ ಮಾಡಿ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ನೊಂದ ಮಹಿಳೆ ಲಕ್ಷ್ಮಿ ಮಾತನಾಡಿ, ನಾನು ಮಾನ್ವಿ ಪಟ್ಟಣದ ನಿವಾಸಿ ಯಾಗಿದ್ದು, ನನ್ನ ಪತಿ ಪಾಪರಾವ್ ಹತ್ತಿರ ಆಲ್ದಾಳ್ ಗ್ರಾಮದ ಬಸನಗೌಡ ಎಂಬಾತ ಕೆಲ ವರ್ಷಗಳ ಹಿಂದೆ ನನ್ನ ಪತಿಯ ಹತ್ತಿರ 8 ಲಕ್ಷ. ರೂಗಳನ್ನು ಸಾಲವಾಗಿ ಪಡೆದು. ಪತಿ ಮರಣ ಹೊಂದಿದ ನಂತರ ಹಣ ಕೊಟ್ಟಿದ್ದೇನೆಂದು ಸುಳ್ಳು ಹೇಳಿ ನನಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ನನಗೆ ಜೀವ ಬೆದರಿಕೆ ಹಾಕಿದ್ದಾನೆಂದು ಗಂಭೀರವಾಗಿ ಆರೋಪಿಸಿದ್ದಾರೆ.
ಆಲ್ದಾಳ್ ಬಸನಗೌಡ ಎಂಬಾತ ನನಗೆ ಮೋಸ ಮಾಡಿದ್ದಲ್ಲದೆ ನನಗೆ ಜೀವ ಬೆದರಿಕೆ ಹಾಕಿ ನಾನು ವಾಸವಿದ್ದ ಮನೆಯ ಸಾಮಾನು ಸಾಮಗ್ರಿಗಳನ್ನು ಹೊರ ಹಾಕಿ ನನಗೆ ಬೆದರಿಕೆ ಹಾಕಿದ್ದಾನೆಂದು ನನಗೆ ನ್ಯಾಯ ಬೇಕು ಎಂದು ಮಾನ್ವಿ ಠಾಣೆಗೆ ಅಲೆದರು ಸಹ ನನಗೆ ನ್ಯಾಯ ಸಿಕ್ಕಿಲ್ಲ ಎಂದು ನೊಂದ ಮಹಿಳೆ ಲಕ್ಷ್ಮಿಯ ಅಳಲು ಆಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ