ಸೂಲಗಿತ್ತಿ ತಳುಕಿನ ತಿಮ್ಮಕ್ಕರ ನಿಸ್ವಾರ್ಥ ಸೇವೆಯನ್ನು ಶ್ರೀಶಾರದಾಶ್ರಮದ ಸದ್ಭಕ್ತರು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ – ರೈತ ಮುಖಂಡ ಕೆ.ಪಿ.ಭೂತಯ್ಯ.
ಕಾಲುವೆಹಳ್ಳಿ ಮೇ.18

ಸೂಲಗಿತ್ತಿ ತಳುಕಿನ ತಿಮ್ಮಕ್ಕ ಮತ್ತು ಗೋಪಾಲಕಿ ಪಾರ್ವತಮ್ಮನವರ ನಿಸ್ವಾರ್ಥ ಸೇವೆಯನ್ನು ಶ್ರೀಶಾರದಾಶ್ರಮದ ಸದ್ಭಕ್ತರು ಗುರುತಿಸಿ ಸನ್ಮಾನಿ ಸುತ್ತಿರುವುದು ಶ್ಲಾಘನೀಯ ಸೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ ಭೂತಯ್ಯ ತಿಳಿಸಿದರು. ತಾಲೂಕಿನ ಕಾಲುವೆಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿರುವ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಮತ್ತು ನೂರಾರು ದೇಸಿ ಗೋವುಗಳನ್ನು ನಿಸ್ವಾರ್ಥವಾಗಿ ಪಾಲನೆ ಪೋಷಣೆ ಮಾಡುತ್ತಿರುವ ಪಾರ್ವತಮ್ಮನವರಿಗೆ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಶಿಲ್ಪಾ ರಮೇಶ್ ಮತ್ತು ಆಶಾ ಅನುಪ್ ಅವರ ಉದಾರ ಆರ್ಥಿಕ ನೆರವಿನಿಂದ ಆಹಾರ ಸಾಮಗ್ರಿ ಗಳನ್ನು, ಗೃಹ ಬಳಕೆಯ ವಸ್ತುಗಳನ್ನು ಸನ್ಮಾನ ಹಾಗೂ ಗೌರವ ಧನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲಾ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಜೆ.ಹೆಚ್ ರಾಘವೇಂದ್ರ ಮಾತನಾಡಿ ಕಾಲುವೆಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಐವತ್ತು ವರ್ಷಗಳ ಕಾಲ ನಿಸ್ವಾರ್ಥವಾಗಿ ಸಾವಿರಾರು ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಹೆರಿಗೆ ಮಾಡಿಸಿರುವ ಸೂಲಗಿತ್ತಿ ತಳುಕಿನ ತಿಮ್ಮಕ್ಕ ಅವರು ಗೃಹ ಲಕ್ಷೀ ಮತ್ತು ವೃದ್ಧಾಪ್ಯ ವೇತನದಿಂದ ಬರುವ ಹಣದಿಂದ ಜೀವನ ಸಾಗಿಸುತ್ತಿದ್ದು ಅವರಿಗೆ ಸರಿಯಾದ ಸೂರಿನ ವ್ಯವಸ್ಥೆಯಿಲ್ಲ ಅವರಿಗೆ ತುರ್ತಾಗಿ ಮನೆ ನಿರ್ಮಿಸುವ ಅಗತ್ಯವಿದ್ದು ಸಂಬಂಧಪಟ್ಟ ಜನ ಪ್ರತಿನಿಧಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಆಡಳಿತ ಗಮನ ಹರಸಿ ಮನೆ ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು. ಗ್ರಾಮದ ಹಿರಿಯ ಮುಖಂಡ ನೀಲಕಂಠ ಶೆಟ್ಟಿ ಅವರು ಗೋಪಾಲಕಿ ಪಾರ್ವತಮ್ಮನವರ ಗೋ ಸೇವೆಯನ್ನು ಕೊಂಡಾಡಿ ಆಕೆಯ ಸೇವೆಯನ್ನು ಶ್ರೀಶಾರದಾಶ್ರಮದ ಸದ್ಭಕ್ತರು ಗುರುತಿಸಿ ಗೌರವಿಸುತ್ತಿರುವುದು ನಮ್ಮ ಊರಿಗೆ ಹೆಮ್ಮೆಯ ವಿಷಯ ಎಂದರು. ಈ ಸಂದರ್ಭದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರು ಸೂಲಗಿತ್ತಿ ತಳುಕಿನ ತಿಮ್ಮಕ್ಕ, ಗೋಪಾಲಕಿ ಪಾರ್ವತಮ್ಮ ಹಾಗೂ ತಿಮ್ಮಕ್ಕ ಅವರನ್ನು ನೋಡಿ ಕೊಳ್ಳುತ್ತಿರುವ ಪಾಲಕ್ಕರನ್ನು ಸನ್ಮಾಸಿ ಗೌರವಧನ ಮತ್ತು ಆಹಾರ ಧಾನ್ಯಗಳನ್ನು ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಗೋಪಾಲಕಿ ಪಾರ್ವತಮ್ಮನವರ ಗೋವುಗಳಿಗೆ ಗೋ ಪೂಜೆ, ಇಂಡಿ ಹಾಗೂ ಬಾಳೆ ಹಣ್ಣು ವಿತರಿಸುವ ಮೂಲಕ ಗೋ ಸೇವೆ ಮಾಡಿದರು. ಸಂಘಟಕ ಸಮಾಜ ಸೇವಕ ಯತೀಶ್.ಎಂ ಸಿದ್ದಾಪುರ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸದ್ಭಕ್ತರಾದ ಶಿಲ್ಪಾ ರಮೇಶ್, ಆಶಾ ಅನುಪ್, ಯತೀಶ್.ಎಂ ಸಿದ್ದಾಪುರ, ಶುಭ ಸೋಮಶೇಖರ್, ಮೋಹಿನಿ ಸತ್ಯನಾರಾಯಣ, ರುಕ್ಮಿಣಿ, ರಂಗಸ್ವಾಮಿ, ಡಿ.ಆರ್ ತಿಮ್ಮಣ್ಣ, ಲಿಂಗದಹಳ್ಳಿ ಪಾಲಣ್ಣ, ಕೆ.ಜಿ. ರಾಮಣ್ಣ, ಜಿ.ಕಾಂತಣ್ಣ, ಬ್ರೇಕಿ ಲೋಕೇಶ್, ಕೆ.ಓ ಪಾಲಣ್ಣ, ಲೋಕೇಶ್ ಪೂಜಾರಿ, ರಾಜಣ್ಣ, ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.