ಗ್ರಾಮ ಪಂಚಾಯತಿ ಮುಂದೆ ಡಿ.ಎಸ್.ಎಸ್ ಮುಖಂಡರಿಂದ – ಅಮಾನತಗೆ ಆಗ್ರಹಿಸಿ ತೀವ್ರ ಪ್ರತಿಭಟನೆ.
ಉಟಕನೂರು ಮೇ.18

ಮಾನ್ವಿ ತಾಲೂಕಿನ ಗ್ರಾಮ ಪಂಚಾಯತಿಯ ಪಿಡಿಓಗಳು ಅಭಿವೃದ್ಧಿ ಮಾಡಲು ಇದ್ದಾರಾ ಅಥವಾ ಲೂಟಿ ಮಾಡಲು ಇದ್ದಾರಾ ಎಂಬುದು ದಿನಕ್ಕೊಂದು ಕರ್ಮಕಾಂಡ, ಹಣ ದುರ್ಬಳಕೆ ಪ್ರಕರಣ ಹೆಚ್ಚಾಗುತ್ತಿದ್ದು, ಉಟಕನೂರು ಗ್ರಾಮ ಪಂಚಾಯತಿ ಮುಂದೆ ದಲಿತ ಸಂಘರ್ಷ ಮುಖಂಡರು ಪ್ರತಿಭಟನೆ ನಡೆಸಿರುವುದೆ ಸಾಕ್ಷಿ.ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ವೇತಾ ಕುಲಕರ್ಣಿ ಅಧ್ಯಕ್ಷರ ಸಹಿ ಇಲ್ಲದೆ ಹಣ ಬಳಕೆ ಮಾಡಬಾರದು ಎಂದು ಸರಕಾರದ ಆದೇಶವಿದ್ದರು ಸಹ ಆದೇಶವನ್ನು ಗಾಳಿಗೆ ತೂರಿ ಹಣ ದುರ್ಬಳಕೆ ಮಾಡಿ ಕೊಂಡಿದ್ದಾರೆಂದು ಆರೋಪಿಸಿ ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಅವರನ್ನು ಡಿ.ಎಸ್.ಎಸ್ ಮುಖಂಡರು ತರಾಟೆಗೆ ತೆಗೆದು ಕೊಂಡರು.ಮಾನ್ವಿ ತಾಲೂಕಲ್ಲಿ ಇ.ಓ ಖಾಲಿದ್ ಅಹ್ಮದ್ ಅವರ ದುರಾಡಳಿತ ಎಷ್ಟರ ಮಟ್ಟಿಗೆ ಇದೆ ಎಂದು ಗ್ರಾಮ ಪಂಚಾಯತಿ ಕರ್ಮಕಾಂಡಗಳೇ ಸಾಕ್ಷಿ, ಇ.ಓ ಖಾಲಿದ್ ಅಹ್ಮದ್ ಅವರು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆಂದು ಜನರ ತರಾಟೆಯೇ ಸಾಕ್ಷಿ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ…..?
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

