ಕಳಪೆ ಕಾಮಗಾರಿ – ವಿರೋಧಿಸಿ ಪ್ರತಿಭಟನೆ.
ತರೀಕೆರೆ ಮೇ .19

ತಾಲೂಕಿನ ನೇರಲಕೆರೆ ಗ್ರಾಮದಲ್ಲಿ ನಡೆದಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಯೋಜನೆ ಕಳಪೆ ಕಾಮಗಾರಿ ಯಾಗಿದೆ ಎಂದು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಇಂದು ಪಟ್ಟಣದ ಲೋಕಪಯೋಗಿ ಇಲಾಖೆಯ ಪ್ರವಾಸಿ ಮಂದಿರದ ಎದುರು ಅನಿರ್ದಿಷ್ಟ ಕಾಲ ಧರಣೀ ಸತ್ಯಾಗ್ರಹ ನಡೆಸಿದರು. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಪರವಾನಿಗೆ ರದ್ದು ಗೊಳಿಸಬೇಕು ಮತ್ತು ಕಾನೂನು ರೀತಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು. ಲೋಕಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ ಗ್ರಾಮೀಣ ಭಾಗದಲ್ಲಿ ಕೂಡಲೇ ಹಾಳಾಗಿರುವ ರಸ್ತೆಗಳನ್ನು ದುರಸ್ತಿ ಮಾಡಿಸಬೇಕು. ತರೀಕೆರೆ ನಗರದಲ್ಲಿ ನಡೆಯುತ್ತಿರುವ ಬಿ.ಎಚ್ ರಸ್ತೆಯ ಅಭಿವೃದ್ಧಿ ಕಾಮಗಾರಿಯು ಯೋಜನೆಯಂತೆ ನಿರ್ಮಾಣ ಮಾಡದೆ ನಿಯಮ ಬಾಹಿರವಾಗಿದೆ ಕಾಮಗಾರಿಯನ್ನು ನಿರ್ಮಾಣ ಮಾಡುತ್ತಿರುವುದನ್ನು ಸರಿಪಡಿಸ ಬೇಕು ಯುಜಿಡಿ ಪೈಪ್ ಲೈನ್ ಅಳವಡಿಸದೆ ರಸ್ತೆ ಕಾಮಗಾರಿಯನ್ನು ಮಾಡುತ್ತಿರುವುದನ್ನು ವಿರೋಧಿಸಿದರು. ಕುಡಿಯುವ ನೀರಿನ ಪೈಪ್ ಲೈನ್ ಹಾದು ಹೋಗಿರುವ ಜಾಗದಲ್ಲಿ ಯಾವುದೇ ಶಾಶ್ವತ ಕಾಮಗಾರಿಯನ್ನು ಮಾಡ ಬಾರದೆಂಬ. ನಿಯಮವಿದ್ದರೂ ಸಹ ಕಾನೂನು ಬಾಹಿರವಾಗಿ ಕಾಮಗಾರಿಯನ್ನು ನಡೆಸುತ್ತಿರುವುದನ್ನು ಖಂಡಿಸಿದರು. ವೇದಿಕೆಯ ರಾಜ್ಯ ಅಧ್ಯಕ್ಷರಾದ ಎಂ.ಓಂಕಾರಪ್ಪ, ದಲಿತ ಸಂಘಟನೆಯ ವಸಂತಕುಮಾರ್, ಪರಮೇಶ್, ಶಿವಾನಂದ ಮಾಳಗಿ, ಮೀನಾ,ಭಾಗ್ಯ ಗೌಡ, ಲಕ್ಷ್ಮಿ,ಬಲರಾಮ್, ಸಿ ವೆಂಕಟೇಶ್, ಶಾಂತಕುಮಾರ್ ರೈತ ಸಂಘದ ಅಧ್ಯಕ್ಷರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರಿಗೆ ಮನವಿಯನ್ನು ನೀಡಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು