ಮಳೆ ಗಾಳಿಗೆ ಮುರಿದು ಬಿದ್ದ ವಿಂಡ್ ಪ್ಯಾನ್ ರೆಕ್ಕೆ – ಸ್ಥಳೀಯರಲ್ಲಿ ಆತಂಕ.
ಗಜೇಂದ್ರಗಡ ಮೇ.24

ಸಮೀಪದ ಕಾಲಕಾಲೇಶ್ವರ ಗುಡ್ಡದಲ್ಲಿ ಆಳವಡಿಸಲಾದ ವಿಂಡ್ ಪ್ಯಾನ್ ರೆಕ್ಕೆಯು ನೋಡ ನೊಡುತ್ತಲೆ ಮುರಿದು ಬಿದ್ದ ಆತಂಕಕಾರಿ ಘಟನೆಯೊಂದು ನಡೆದಿದ್ದು. ಇದು ಸ್ಥಳೀಯ ಸುತ್ತ ಮುತ್ತಲಿನ ಜನತೆಗೆ ಚಿಂತೆ ತಂದೊಡ್ಡಿದೆ. ವಿದ್ಯುತ್ ಯಂತ್ರ ರೆಕ್ಕೆಗಳು ಗಾಳಿಗೆ ಪೀಸ್ ಪೀಸ್ ಆಗಿ ನೆಲಕ್ಕೆ ಉರಳಿದ ಘಟನೆ ಒಂದು ನಡೆದಿದೆ. 2007 ರಲ್ಲಿ ಅಳವಡಿಸಿದ್ದ ವಿಂಡ್ ಫ್ಯಾನ್. ವೆಸ್ಟಾರ್ಸ್ ಆರ್.ಆರ್.ಬಿ ಎನರ್ಜಿ ಲಿಮಿಟೆಡ್ ಕಂಪನಿಯವರಿಗೆ ಸಂಬಂಧಿಸಿದ ವಿಂಡ್ ಫ್ಯಾನ್. ತಾಂತ್ರಿಕ ದೋಷನೋ ಏನೋ ಗೊತ್ತಿಲ್ಲ ವಿರುದ್ಧ ದಿಕ್ಕಿನತ್ತ ತಿರುಗುತ್ತಿರುವ ಫ್ಯಾನ್ಗಳು ವೇಗವಾಗಿ ತಿರುಗಳು ಅಬ್ಬರಿಸುತ್ತಾ ತಿರುಗುತ್ತಾವೆ, ಗಾಳಿ ಇರುವುದರಿಂದ ನಿಲ್ಲಿಸಲು ಸಾಧ್ಯವಾಗಲಿಲ್ಲ. ಅಲ್ಲಿಯೇ ಇದ್ದ ಟೆಕ್ನಿಸಿಯನ್ ಗಳು ರಭಸದಿಂದ ತಿರುಗುತಿದ್ದ ಫ್ಯಾನನ್ನು ನಿಲ್ಲಿಸಲು ಸಾಕಷ್ಟು ಅರಸಾಹಸ ಪಟ್ಟರು ನಿಲ್ಲಿಸಲು ಆಗಲಿಲ್ಲ ವೇಗವಾಗಿ ತಿರುಗುತ್ತಿದ್ದ ಫ್ಯಾನ್ ಗಡಬಡ ಶಬ್ದ ಮಾಡುತ್ತಾ ನೆಲಕ್ಕೆ ಉರಳಿವೆ. ಆ ಫ್ಯಾನ್ ಸೌಂಡಿನಿಂದ ಮಷಿನ್ ಬ್ಯಾಲೆನ್ಸ ತಪ್ಪಿದೆ ಎಂದು ಗೊತ್ತಾಗಿದ್ದರಿಂದ ಕಾರ್ಮಿಕರು ದೂರ ಹೋಗಿದ್ದು ಸದ್ಯಕ್ಕೆ ಯಾವುದೇ ಪ್ರಣಾಪಯವಾಗಿಲ್ಲ. ಒಂದು ಗಂಟೆಗೆ 600 ಕಿಲೋ ವ್ಯಾಟ್ ವಿದ್ಯುತ್ ತಯಾರಿಸುವ ಯಂತ್ರ,ಒಂದು ದಿನಕ್ಕೆ ಸುಮಾರು 12 ಸಾವಿರ ಕಿಲೋ ವ್ಯಾಟ್ ವಿದ್ಯುತ್ ತಯಾರಿಸುವ ಯಂತ್ರ ನಾಶವಾಗಿದ್ದು ಇದಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗುತ್ತಿದೆ.ಸುಮಾರು ನೂರಾರು ಮೀಟರ್ ನಷ್ಟು ದೂರ ಹೋಗಿ ಬಿದ್ದ ವಿಂಡ್ ಫ್ಯಾನ್ ಉಪಕರಣಗಳು ಸ್ಥಳಕ್ಕೆ ಅಧಿಕಾರಿಗಳು, ವಿಂಡ್ ಕಂಪನಿಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ರೈತ ಬಾಂಧವರೇ ಜಾಗೃತರಾಗಿರಿ ಈ ವಿಂಡ್ ಫ್ಯಾನ್ ಕಂಪನಿಗೆ ಜಮೀನು ಕೊಟ್ಟಿವವರು ಮುಂದೊಂದು ದಿನ ನಿಮ್ಮ ನಿಮ್ಮ ಜಮೀನಿನಲ್ಲಿ ನಿರ್ಮಾಣ ವಾಗಿರುವ ಫ್ಯಾನ್ ಗಾಳಿಯ ರಬಸಕ್ಕೋ ಅಥವಾ ತಾಂತ್ರಿಕ ದೋಷದಿಂದೊ ನೀವು ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಫ್ಯಾನ್ಗಳು ನೆಲಕ್ಕೆ ಕಳಚುವುದು ಖಂಡಿತ ನೀವು ಫ್ಯಾನ್ ಸಮೀಪ ಇದ್ದಲ್ಲಿ ಜೋರಾಗಿ ಗಾಳಿ ಬಂದಲ್ಲಿ ಅಥವಾ ಫ್ಯಾನ್ ಗಡಬಡ ಶಬ್ದ ಬಂದಲ್ಲಿ ತಾವುಗಳು ಆ ಫ್ಯಾನ್ನಿಂದ ದೂರದ ಅಂತರವನ್ನು ಕಾಪಾಡುವದರೊಂದಿಗೆ ಇನ್ನೂ ಮೇಲಾದರೂ ಈ ಫ್ಯಾನ್ ಕಂಪನಿಯನ್ನು ನಿಮ್ಮ್ ನಿಮ್ಮ ಭಾಗದಿಂದ ಬಹಿಷ್ಕರಿಸ ಬೇಕೆಂದು ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ನ ಅಭಿಪ್ರಾಯವಾಗಿದೆ ಬಂಧುಗಳೇ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ