ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ – ಅವಿರೋಧ ಆಯ್ಕೆ.
ಅಲಬೂರು ಮೇ.24





ಕೊಟ್ಟೂರು ತಾಲೂಕಿನ ಅಲಬೂರು ಗ್ರಾಮ ಪಂಚಾಯ್ತಿಯ 2 ನೇ. ಅವಧಿಯ ಚುನಾವಣೆಯಲ್ಲಿ ಅಧ್ಯಕ್ಷ ಶ್ರೀಮತಿ ಹೆಚ್.ಎಂ ವಪ್ಪತ್ಯಮ್ಮ ಸಿದ್ದಯ್ಯ ಉಪಾದ್ಯಕ್ಷರ ಶ್ರೀ ಸಿ.ಅಂಜಿನಪ್ಪ ಅವಿರುಧವಾಗಿ ಆಯ್ಕೆ ಮಾಡಲಾಯಿತು. ಈ ಚುನಾವಣೆ ಪ್ರಕ್ರಿಯೆಯನ್ನು ಚುನಾವಣೆ ಅಧಿಕಾರಿ ತಹಶಿಲ್ದಾರ್ ಅಮರೇಶ್ ಜಿ.ಕೆ ಹಾಗೂ ಇಟ್ಟಿಗಿ ಆರಕ್ಷಕ ಠಾಣೆಯ ಪಿ.ಎಸ್.ಐ ಅಬ್ಬಾಸ್, ನೇತೃತ್ವದಲ್ಲಿ ಚುನಾವಣೆ ನಡೆಸಲಾಯಿತು.ನೂತನ ಅವಿರೋಧವಾಗಿ ಅಯ್ಕೆಯಾದ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಸದಸ್ಯರು ಗ್ರಾಮಸ್ಥರು ಗೌರವಿಸಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವಾನಂದಪ್ಪ.ಎ, ಶ್ರೀಮತಿ ಶಿಲ್ಪ ವೀರನಗೌಡ, ಜಂಬಣ್ಣ ಎ,ಬಿ ಉಜ್ಜಿನಿ ನಾಗರಾಜ, ಶ್ರೀಮತಿ ನಿರ್ಮಲಮ್ಮ ಮಲ್ಲೇಶ್, ಶ್ರೀ ಮತಿ ರೇಖಾ ಶಿವನಾಗ, ಶ್ರೀ ಮತಿ ಚಂದ್ರಮ್ಮ ವಾಮದೇವ, ಹಾಗು ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಹೇಮಂತ್ ಕುಮಾರ, ಕಾರ್ಯದರ್ಶಿ ಗಳಾದ ಮಾರುತಿ ಪೂಜಾರ್, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು