ವೀರವನಿತೆ ಒನಕೆ ಓಬವ್ವನ ಜಯಂತಿ ಆಚರಣೆ.
ಕೊಟ್ಟೂರು ನವೆಂಬರ್.11

ತಾಲೂಕ ಕಛೇರಿ, ಕೊಟ್ಟೂರಿನಲ್ಲಿ ಚಿತ್ರದುರ್ಗದ ಕೋಟೆ ರಕ್ಷಿಸಿದ ವೀರ ವನಿತೆ ಒನಕೆ ಓಬವ್ವನ ಜಯಂತಿಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಜಿ.ಕೆ.ಅಮರೇಶ ಇವರು ಓಬವ್ವನ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪಾರ್ಚನೆ ಮಾಡಿ ಭಕ್ತಿಯ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ನಸರುಲ್ಲಾ, ತಾಲೂಕು ಚಲವಾದಿ ಮಹಾಸಭಾದ ಅಧ್ಯಕ್ಷರಾದ ಮಂಜುನಾಥ ಡಿ, ಪಟ್ಟಣ ಪಂಚಾಯಿತಿ ಸದಸ್ಯರಾದ ಕೆಂಗರಾಜ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಣಿಕೇರಿ ಕೊಟ್ರೇಶ್, ಡಿ.ಎಸ್.ಎಸ್ ಜಿಲ್ಲಾ ಸಂಚಾಲಕರು ತೆಗ್ಗಿನಕೇರಿ ಕೊಟ್ರೇಶ್, ವಾಲ್ಮೀಕಿ ಸಂಘದ ಅಧ್ಯಕ್ಷರಾದ ಮಂದಾರ ಮಂಜುನಾಥ, ಡಿ.ಎಸ್.ಎಸ್ ಮುಖಂಡರಾದ ತೆಗ್ಗಿನಕೇರಿ ಹನುಮಂತಪ್ಪ ವಕೀಲರು, ಬದ್ದಿ ದುರುಗೇಶ, ಅಂಬೇಡ್ಕರ ಸಂಘದ ಅಧ್ಯರಾದ ಹೊಟ್ಟೇರ ಜಯ್ಯಪ್ಪ, ಪ್ರಕಾಶ, ಮುರುಗೇಶ, ನಾಗಭೂಷಣ,ಅಜ್ಜಪ್ಪ ಸಿ ಹಾಗೂ ಕಛೇರಿಯ ಸಿಬ್ಬಂದಿ ಹಾಜರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು