ಸಹಾಯಕ ಕೃಷಿ ನಿರ್ದೇಶಕರ ಕುಮ್ಮಕ್ಕಿನಿಂದ, ಮಹಾಂತೇಶ್ವರ ಆಗ್ರೋ ಟ್ರೇಡರ್ಸ್ ಮಾಲೀಕನ ವಿರುದ್ಧ – ತೀವ್ರ ಕ್ರಮ, ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ.
ಬಳ್ಳಾರಿ ಆ.24

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಗರದ ಶ್ರೀ ಮಹಾಂತೇಶ್ವರ ಆಗ್ರೋ ಟ್ರೇಡರ್ಸ್ ಮಾಲೀಕನು ರೈತರಿಗೆ ಬೇಕಾಗಿದ್ದಂತ 3201 ಹೈಟೆಕ್ ಜೋಳದ ಬೀಜಗಳನ್ನು ಸರಕಾರ ವಿಧಿಸಿದ ದರ 3 ಕೆಜಿ ಪಾಕೆಟ್ ಗೆ 1.300 ರೂಪಾಯಿ ಇದ್ದು ಇವರು ಹೆಚ್ಚುವರಿಯಾಗಿ 450 ರೂಪಾಯಿಗಳನ್ನು ಸುಮಾರು ರೈತರಿಂದ ಅಕ್ರಮವಾಗಿ ರಾಜಾರೋಷವಾಗಿ ಸರಕಾರ ಕೃಷಿ ಇಲಾಖೆ ಅಧಿಕಾರಿಗಳು ಸರಕಾರದ ದರವನ್ನು ನಿಗದಿ ಪಡಿಸಿ ದರಕ್ಕಿಂತ ಹೆಚ್ಚಿನ ದರವನ್ನು ಏನಾದರೂ ಆಗ್ರೋ ಟ್ರೇಡರ್ಸ್ ಮಾಲೀಕರು ಮಾರಾಟವನ್ನು ಮಾಡಿದ ಕಾನೂನಿನ ಕ್ರಮವನ್ನು ಜರುಗಿಸ ಬೇಕಾಗುತ್ತದೆ ಎಂದು ಎಲ್ಲಾ ಅಂಗಡಿಯ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದು ಬರಿ ಕಾಗದ ಮೇಲೆ ಆದೇಶ ಮಾಡಿ ಕೈ ತೊಳೆದು ಕೊಂಡರೆ ಸಾಲದು ಇದು ಪ್ರತಿ ವರ್ಷ ಕೃಷಿ ಅಧಿಕಾರಿಗಳು ಸೂಚನೆ ನೀಡುವುದು ಸರ್ವೆ ಸಾಮಾನ್ಯ ಎಂದು ಶ್ರೀ ಮಹಾಂತೇಶ್ವರ ಆಗ್ರೋ ಟ್ರೇಡರ್ಸ್ ಮಾಲೀಕನು ಯಾವ ಅಧಿಕಾರಿ ನಮಗೇನು ಮಾಡಿ ಕೊಳ್ಳಲಿಕ್ಕೆ ಆಗುವುದಿಲ್ಲ ಎಂದು ರಾಜಾರೋಷವಾಗಿ ಹೇಳಿ ಕೊಳ್ಳುತ್ತಿರಲಿಕ್ಕೆ ಕಾರಣ ಕೃಷಿ ಸಹಾಯಕ ನಿರ್ದೇಶಕರು ಸಂಪೂರ್ಣವಾದ ಕುಮ್ಮಕ್ಕು ಇದರಿಂದ ಸಿರುಗುಪ್ಪ ನಗರದಲ್ಲಿ ನಡೆಯುವುದಕ್ಕೆ ಕಾರಣ ಆಗಿದ್ದರಿಂದ ಕೃಷಿ ಸಹಾಯಕ ನಿರ್ದೇಶಕರು ತಮ್ಮ ಅಧಿಕಾರ ದುರ್ಬಳಕೆ ಕಾಯ್ದೆಯ ಅಡಿಯಲ್ಲಿ ಇವರನ್ನು ಕೂಡಲೇ ಅಮಾನತ್ತು ಗೊಳಿಸಿ ಹಾಗೂ ಶ್ರೀ ಮಹಾಂತೇಶ್ವರ ಆಗ್ರೋ ಟ್ರೇಡರ್ಸ್ ಅಂಗಡಿಯ ಲೈಸೆನ್ಸ್ ಅನ್ನು ಕಪ್ಪು ಪಟ್ಟಿಗೆ ಸೇರಿಸಿ ಮತ್ತು ಅಂಗಡಿಯ ಮಾಲೀಕನ ಮೇಲೆ ಕ್ರಿಮಿನಲ್ ಪ್ರಕರಣವನ್ನು ಕೂಡಲೇ ದಾಖಲಿಸ ಬೇಕೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ತಮ್ಮಲ್ಲಿ ಒತ್ತಾಯಿಸುತ್ತದೆ ಇದರ ಬಗ್ಗೆ ತಾವು ಕ್ರಮ ಜರುಗಿಸಲಾರದೆ ಹೋದ ಪಕ್ಷದಲ್ಲಿ ನಿಮ್ಮ ಕಚೇರಿಯ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳ ಬೇಕಾಗುತ್ತದೆ ಇದಕ್ಕೆ ತಾವುಗಳು ಅವಕಾಶ ಮಾಡಿ ಕೊಡಲಾರದಂತೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ತಮ್ಮಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾ ಸಮಿತಿಯ ಕೆ ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಮೂಲಕ ಆಗ್ರಹಿಸಿದ್ದಾರೆ.