ಮಾದರಿ ಗ್ರಾಮ ಪಂಚಾಯತ ಬಬಲಾದ ಗ್ರಾಮಕ್ಕೆ ಮಂಗಳವಾರ ಮಾನ್ಯ ಜಿಲ್ಲಾಧಿಕಾರಿಗಳು ಭೇಟಿ.
ಇಂಡಿ ಆಗಷ್ಟ.8





ನಿಂಬೆ ನಾಡಿನ ಮಾದರಿ ಗ್ರಾಮ ಪಂಚಾಯತ ಬಬಲಾದ ಗ್ರಾಮಕ್ಕೆ ಮಾನ್ಶ ಜಿಲ್ಲಾಧಿಕಾರಿಗಳಾದ ಶ್ರೀ ಟಿ ಭೂಬಾಲನ್ ಅನೀರಿಕ್ಷಿತ ಬೇಟಿ ನೀಡಿ ಗ್ರಾಮ ಪಂಚಾಯತ ವೀಕ್ಷಿಸಿˌ ಸರಕಾರಿ ಪ್ರಾಥಮಿಕ ಶಾಲೆ ಕ್ರೀಂಡಾಂಗಣ ವೀಕ್ಷಿಸಿ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿದರು ˌ ಗ್ರಾಮ ಒನ್ ಕೇಂದ್ರದಲ್ಲಿ ಧಾಖಲೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಶಕ್ತಪಡಿಸಿದರುˌ ಸಿಬ್ಬಂದಿಗಳನ್ನು ಅಭಿನಂದಿಸುವದರೊಂದಿಗೆ ಗ್ರಹಲಕ್ಷ್ಮಿ ಯೋಜನೆಯ ಸರಕಾರದ ಯೋಜನೆಗಳಿಗೆ ಯಾವುದೇ ಶುಲ್ಕ ತೆಗೆದುಕೊಳ್ಳಬಾರದು ಅಂತ ಖಡಕ್ ಆಗಿ ಸೂಚಿಸಿದರುˌ ಗ್ರಾಮ ಪಂಚಾಯತ ಮೀಟಿಂಗ್ ಹಾಲ್ ನೋಡಿ ಈ ಗ್ರಾಮ ಪಂಚಾಯತ ಅತ್ಶಂತ ಶ್ರೀಮಂತ ಗ್ರಾಮ ಪಂಚಾಯತ ಇದೆ ಅನಿಸುತ್ತೆ ಅಂತ ನಗೆ ಚಟಾಕಿ ಹಾರಿಸಿದರುˌ ಅಲೆಮಾರಿ ವಸತಿ ನಿವೇಶನ ಮಂಜೂರಿಕರಿಸಲು ಅಧಿಕಾರಿಗಳಿಗೆ ಸೂಚಿಸಿದರುˌವಿಜಯಪುರ ಜಿಲ್ಲೆಯಲ್ಲಿಯ ಒಟ್ಟು 290 ಗ್ರಾಮ ಒನ್ ಕೇಂದ್ರಗಳ ಪೈಕಿ ಬಬಲಾದ ಗ್ರಾಮ ಒನ್ ಕೇಂದ್ರವು ಅತಿ ಹೆಚ್ಚು ನಾಗರಿಕ ಸೇವೆಗಳನ್ನು ನೀಡಿ ಸರ್ಕಾರದಿಂದ ಪ್ರಶಸ್ತಿ ಪಡೆದುಕೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಗೃಹ ಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಸಾರ್ವಜನಿಕರಿಂದ ಶುಲ್ಕ ಪಡೆಯುವಂತಿಲ್ಲ ಎಂದು ಕಿವಿ ಮಾತು ಹೇಳಿದರು. ಅರ್ಜಿ ಸಲ್ಲಿಸಲು ಬಂದಿರುವಸಾರ್ವಜನಿಕರನ್ನು ಜಿಲ್ಲಾಧಿಕಾರಿಗಳುಖುದ್ದಾಗಿ ವಿಚಾರಣೆ ಮಾಡಿದಾಗ ಒಂದು ರೂಪಾಯಿ ಕೂಡಾ ಪಡೆದಿರುವುದಿಲ್ಲ ಎಂದು ಖಾತ್ರಿ ಪಡಿಸಿಕೊಂಡು ಸಂತೋಷ ಪಟ್ಟರು.ಈ ಕೇಂದ್ರದಲ್ಲಿ ಸಲ್ಲಿಸಿದ ಗೃಹ ಲಕ್ಷ್ಮೀ ಅರ್ಜಿ ಗಳನ್ನು ಮತ್ತು ಸೇವಾ ಸಿಂಧು ಅರ್ಜಿಗಳನ್ನು ಪರಿಶೀಲಿಸಿದರು.ಕೇಂದ್ರದಲ್ಲಿ ಜನರಿಗೆ ಯಾವ ಯಾವ ಸೇವೆಗಳನ್ನು ಕೊಡುತ್ತೀದ್ದಿರಿ, ಯಾವ ಸೇವೆಗೆ ಎಷ್ಟು ಶುಲ್ಕ ಪಡೆಯುತ್ತೀರಿ ಎಂದು ಪ್ರಶ್ನಿಸಿದರು. ಈ ಸಂಧರ್ಭದಲ್ಲಿಗ್ರಾಪಂ ಲೆಕ್ಕಾಧಿಕಾರಿ ಮಹಾಂತೇಶ ಗುರುಬೆಟ್ಟಿ, ಗ್ರಾಮ ಒನ್ ಕೇಂದ್ರದ ಮುಖ್ಯ ಕಾರ್ಯ ನಿರ್ವಾಹಕ ಮಹೇಶ ಸುತಾರ, ಗ್ರಾಮ ಪಂಚಾಯತ ಅಧ್ಶಕ್ಷ ಸುನೀಲಕುಮಾರ ಬಿರಾದಾರˌ ಉಪಾಧ್ಶಕ್ಷೆ ನೀಲಾವತಿ ದಶವಂತˌ ಹಣಮಂತ ಬಿರಾದಾರ ಕಾಂಗ್ರೇಸ್ ಯುವಧುರೀಣರಾದ ಶ್ರೀ ಬಾಪುರಾಯ ಗೌಡ ಬಿರಾದಾರ್, ಮಲ್ಲಿಕಾರ್ಜುನ ದಶವಂತ ˌ ದೀಪಾ ಬಿರಾದಾರ, ಕೀರ್ತಿ ಬಿರಾದಾರ, ಶ್ರೀನಾಥ್ ವಾಲೀಕಾರ ಹಾಗೂ ಶ್ರೀ ಹಣಮಂತ ಕಟ್ಟಿಮನಿ, ಆಶಾ ಕಾರ್ಯಕರ್ತೆ ಗೌರಾಬಾಯಿ ಬಿರಾದಾರ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ