ಮಗುವಿನಂತೆ ವೃದ್ಧರ ಪಾಲನೆ ಪೋಷಣೆಯ ಅಗತ್ಯವಿದೆ – ನಗರ ಸಭೆ ಅಧ್ಯಕ್ಷೆ ಶ್ರೀಮತಿ ಮಂಜುಳಾ. ಪ್ರಸನ್ನಕುಮಾರ್ ಅಭಿಪ್ರಾಯ.
ಚಳ್ಳಕೆರೆ ಮೇ.31

ವಯೋ ವೃದ್ಧರನ್ನು ಚಿಕ್ಕ ಮಗುವಿನ ರೀತಿಯಲ್ಲಿ ಪಾಲನೆ ಪೋಷಣೆ ಮಾಡುವ ಸಂಸ್ಕೃತಿ ಬೆಳೆಯ ಬೇಕಿದೆ ಎಂದು ಚಳ್ಳಕೆರೆಯ ನಗರ ಸಭೆ ಅಧ್ಯಕ್ಷೆ ಶ್ರೀಮತಿ ಮಂಜುಳಾ ಪ್ರಸನ್ನಕುಮಾರ್ ಕಿವಿಮಾತು ಹೇಳಿದರು. ನಗರದ ಬೆಂಗಳೂರು ರಸ್ತೆಯ ಬನಶ್ರೀ ವೃದ್ಧಾಶ್ರಮದ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ವೃದ್ಧಾಶ್ರಮಗಳು ವಯೋ ವೃದ್ಧರ ಆಶ್ರಯ ತಾಣವಾಗಿದ್ದು ಇವುಗಳ ಸಂಖ್ಯೆ ಹೆಚ್ಚುವುದು ಉತ್ತಮ ಸಮಾಜದ ಲಕ್ಷಣವಲ್ಲ ಆದ್ದರಿಂದ ಮಕ್ಕಳು ಹೆತ್ತವರನ್ನು ಕಡೆಗಣಿಸದೆ ಅವರನ್ನು ದೇವರಂತೆ ಪೂಜಿಸ ಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬನಶ್ರೀ ವೃದ್ಧಾಶ್ರಮಕ್ಕೆ ಸಹಾಯ ಮಾಡಿದ ದಾನಿಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬನಶ್ರೀ ವೃದ್ಧಾಶ್ರಮದ ಸಂಸ್ಥಾಪಕರಾದ ಶ್ರೀಮತಿ ಮಂಜುಳಮ್ಮ, ಶಾಸಕ ರಘುಮೂರ್ತಿ ಸಹೋದರ ತಿಪ್ಪೇಸ್ವಾಮಿ, ಶಶಿಧರ್, ಶೈಲಜಾ ಮಂಜುನಾಥ, ಕುಮಾರಸ್ವಾಮಿ, ಗದ್ದಿಗೆ ತಿಪ್ಪೇಸ್ವಾಮಿ, ಶ್ರೀನಿವಾಸ್ , ಇಂಜಿನಿಯರ್ ತಿಪ್ಪೇರುದ್ರಪ್ಪ, ಬೆಳಗೆರೆ ಸುರೇಶ್, ಶ್ರೀಶಾರದಾಶ್ರಮದ ಸದ್ಭಕ್ತರಾದ ರಂಗಮ್ಮ, ಶ್ರೀಮತಿ ಜಿ ಯಶೋಧಾ ಪ್ರಕಾಶ್, ವನಜಾಕ್ಷಿ ಮೋಹನ್, ಲಕ್ಷ್ಮೀದೇವಮ್ಮ, ಸರಸ್ವತಿ, ದೀಪ ರಾಘವೇಂದ್ರ, ಗೀತಾ ಸುಂದರೇಶ್ ದೀಕ್ಷಿತ್, ಯತೀಶ್.ಎಂ ಸಿದ್ದಾಪುರ, ಪ್ರಭಾವತಿ, ಪಾರಿಜಾತ, ಹೂವಿನ ಲಕ್ಷ್ಮೀದೇವಮ್ಮ, ಸೌಮ್ಯ, ಮಹಾದೇವಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.