ಜಾಲವಾದ ಜೈ ಭೀಮ ಓಣಿಯಲ್ಲಿ ಮೂಲ ಸೌಕರ್ಯಗಳ ಕೊರತೆ – ಅಧಿಕಾರಿಗಳ ನಿರ್ಲಕ್ಷ್ಯ.
ಜಾಲವಾದ ಮೇ.31

ಸರ್ಕಾರ ಹಳ್ಳಿಗಳು ಅಭಿವೃದ್ಧಿ ಆಗಲಿ ಎಂದು ಎರಡೂ ಮೂರು ಹಳ್ಳಿಗಳನ್ನು ಸೇರಿಸಿ ಒಂದು ಕೂಡು ಗ್ರಾಮ ಪಂಚಾಯತಿ ನಿರ್ಮಾಣ ಮಾಡಿದ್ದಾರೆ ಮತ್ತು ಗ್ರಾಮ ಪಂಚಾಯತಿಯಿಂದ ಸಾರ್ವಜನಿಕ ಕೆಲಸದ ಜೊತೆಗೆ ಊರ ಅಭಿವೃದ್ಧಿ ಕಾರ್ಯಗಳಾಗಲೆಂದೆ ಸಾರ್ವಜನಿಕರು ಪಂಚಾಯತಿಗೆ ಸದಸ್ಯರನ್ನು ಅಧ್ಯಕ್ಷರನ್ನು ಹಾಗೂ ಅಧಿಕಾರಿಗಳನ್ನು ನೇಮಿಸುತ್ತಾರೆ. ಆದರೆ ಆಯ್ಕೆಯಾದ ಸದಸ್ಯರು, ಅಧ್ಯಕ್ಷರು ಗ್ರಾಮಗಳನ್ನು ಅಭಿವೃದ್ಧಿ ಮಾಡದೆ ಕಾಲಹರಣ ಮಾಡುತ್ತಾರೆ.

ಗ್ರಾಮ ಪಂಚಾಯತಿಗೆ ಬಂದ ವಂತಿಗೆ ಹಣವನ್ನು ಆರು ತಿಂಗಳ ಮೀಟಿಂಗ್ ಠರಾವಿನಲ್ಲಿ ಬರೆದು ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರು, ಸದಸ್ಯರು ಮಜಾ ಮಾಡುತ್ತಾರೆ. ಗ್ರಾಮಗಳ ಸಮಸ್ಯೆಗಳು ಇವರ ಕಣ್ಣಿಗೆ ಕಾಣಿಸುತ್ತಿಲ್ಲ, ಇವರ ಮಜಾದಾಟಕ್ಕೆ ಕಡಿವಾಣ ಯಾವಾಗ…..? ದೇವರ ಹಿಪ್ಪರಗಿ ತಾಲ್ಲೂಕಿನ ಜಾಲವಾದ ಗ್ರಾಮದ ಅಂಬೇಡ್ಕರ್ ಓಣಿಯಲ್ಲಿ ಒಂದು ಚರಂಡಿ ಇಲ್ಲ ಶೌಚಾಲಯ ಇಲ್ಲ ಊರ ಒಳಗಿನ ಶೌಚಾಲಯದ ನೀರು, ಬಚ್ಚಲ ಮೊರೆ ನೀರು ಚರಂಡಿಯ ನೀರು ಹರಿದು ಅಂಬೇಡ್ಕರ್ ಓಣಿಯಲ್ಲಿ ಬರುತ್ತವೆ, ಅಲ್ಲಿನ ಜನರಿಗೆ ವಾಸ ಮಾಡುಲು ತುಂಬಾ ಕಷ್ಟವಾಗಿದೆ. ಕಾಲರಾ ಮಲೇರಿಯಾ ರೋಗಗಳು ಬರುವ ಸಾಧ್ಯತೆ ಇದೆ. ಇಷ್ಟು ಆದರೂ ಇದರ ಬಗ್ಗೆ ಯಾರಾದರೂ ಗಮನ ಹರಿಸಿಲ್ಲ ಮನೆಯ ಬಾಗಿಲ ಮುಂದೆ ಕೊಳಚೆ ನೀರು ಹರಿದು ಹೋಗುತ್ತದೆ.

ಇದರ ಬಗ್ಗೆ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಗಮನ ಹರಿಸಿಲ್ಲ. ಕೂಡಲೇ ಇಲ್ಲಿ ಬಂದು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸ ಬೇಕು ಇಲ್ಲದಿದ್ದರೆ ನಾವು ಉಗ್ರ ಹೋರಾಟ ಮಾಡ ಬೇಕಾಗುತ್ತದೆ ಎಂದು ದಲಿತ ಮುಖಂಡರು ಹಾಗೂ ಹೆಣ್ಣು ಮಕ್ಕಳು ಸಾರ್ವಜನಿಕವಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರಹಿಪ್ಪರಗಿ

