ಮಳೆಗಾಲದಲ್ಲಿ ರೈತರು ಜಾಗೃತ ವಹಿಸಬೇಕು – ಬಂಗಾರೇಮ್ಮ ದೊಡಮನಿ.
ದೇವರ ಹಿಪ್ಪರಗಿ ಜೂ.01





ದೇವರ ಹಿಪ್ಪರಗಿ ಮಳೆಗಾಲದಲ್ಲಿ ರೈತರು ವಿದ್ಯುತ್ ಪರಿಕರಗಳೊಂದಿಗೆ ಜಾಗೃತಿ ವಹಿಸಿ ಕೆಲಸ ಮಾಡಬೇಕು ಎಂದು ಹುಣಶ್ಯಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯರಾದ ಬಂಗಾರೇಮ್ಮ ಮಾನಪ್ಪ ದೊಡಮನಿ ಯವರು ತಿಳಿಸಿದರು.ಮಳೆಗಾಲದಲ್ಲಿ ಕರೆಂಟ್ ಎಷ್ಟು ಹೊತ್ತಿಗೆ ಬೇಕಾದರು ಬರಬಹುದು ಆದ್ದರಿಂದ ರೈತ ಬಾಂಧವರು ಕರೆಂಟ್ ಇರುವುದಿಲ್ಲ ಎಂದು ತಿಳಿದು ಯಾವುದೇ ರೀತಿಯ ವಿದ್ಯುತ್ ಕಂಬ ತುಂಡಾಗಿರುವ ವೈರ್ ಗಳನ್ನು ಸುರಕ್ಷಾ ಸಾಧನಗಳಿಲ್ಲದೆ ಮುಟ್ಟಬಾರದು ಮಳೆಗಾಲದಲ್ಲಿ ವಿದ್ಯುತ್ ಗೆ ಸಂಬಂಧಿಸಿದ ಉಪಕರಣಗಳಿಂದ ದೂರ ಇರಬೇಕು.

ಹೊಲದಲ್ಲಿ ಲೈನ್ ತುಂಡಾಗಿದ್ದರೆ, ವಿದ್ಯುತ್ ಸಮಸ್ಯೆ ಇದ್ದರೆ ತಕ್ಷಣ ಕೆಇಬಿ ಅವರಿಗೆ ಕರೆ ಮಾಡಿ ತಿಳಿಸಬೇಕು ಹೊಲದ ಬೋರ್ವೆಲ್ ಹಾಗೂ ಕೆನಾಲ್ ಕಾಲುವೆಗಳಲ್ಲಿನ ಮೋಟಾರ್ಗಳನ್ನು, ಹಾಗೂ ಅವುಗಳಿಗೆ ಸಂಪರ್ಕವಾಗಿರುವ ವೈರ್ ಗಳ ಕುರಿತು ಜಾಗೃತ ವಹಿಸಬೇಕುಯಾವುದೇ ಟ್ರಾನ್ಸ್ಫಾರ್ಮರ್ ಕೆಲಸಗಳಲ್ಲಿ ಲೈನ್ ಮೆನ್ ಸಹಾಯ ಪಡೆದು ಕೆಲಸ ನಿರ್ವಹಿಸಬೇಕು. ಮಳೆಗಾಲ ಜೋರಾಗುತ್ತಿರು ವುದರಿಂದ ತುಂಬಾ ವಿದ್ಯುತ್ ಅನಾಹುತಗಳು ಸಂಭವಿಸುತ್ತಿರುತ್ತವೆ ರೈತ ಈ ದೇಶದ ಬೆನ್ನೆಲುಬು ಪ್ರತಿ ರೈತನ ಜೀವವು ಅತ್ಯಮೂಲ್ಯ ಹಾಗಾಗಿ ರೈತರು ಹೊಲಗಳಲ್ಲಿ ಎಚ್ಚರಿಕೆ ವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ