“ಬದುಕಿಗೆ ಭರವಸೆ”…..

ಮಕ್ಕಳ ಜೀವನದಲ್ಲಿ ಪೋಷಕರು ಪ್ರಮುಖ
ಪಾತ್ರರು
ಮೌಲ್ಯಗಳು ಮತ್ತು ನಡವಳಿಕೆಯ
ಮಾದರಿಯನ್ನು ಒತ್ತಿಹೇಳುವವರು
ಮಕ್ಕಳನ್ನು ಬೆಳೆಸುವ ದಿನನಿತ್ಯದ
ಜವಾಬ್ದಾರಿಗಳಲ್ಲಿ ತೊಡಗುವರು
ಉಸಿರು ಹೆಸರು ಬದುಕು ಕೊಡುವವರು
ಅಮ್ಮ ಕಣ್ಣಾದರೆ ಅಪ್ಪ ಕಣ್ಣನ್ನು ರಕ್ಷಿಸುವ ಕಣ್ಣ
ರೆಪ್ಪೆಯಾಗಿ
ಕುಟುಂಬದ ಸದಸ್ಯರ ಬದುಕಿಗೆ ಆಸರೆಯಾಗಿ
ಬದುಕಿನ ಎಲ್ಲ ಹಂತದಲ್ಲೂ ಶಕ್ತಿಯಾಗಿ
ತಮ್ಮ ಬದುಕನ್ನೆ ಸವೆಸುವವರು ಮಕ್ಕಳಿಗಾಗಿ
ನಾವು ಸೋತಾಗ ಆತ್ಮಸ್ಥೈರ್ಯ
ತುಂಬುವವರು
ಪ್ರತಿ ಹೆಜ್ಜೆಯಲ್ಲೂ ಬೆನ್ನುಲುಬಾಗಿ ನಿಲ್ಲುವವರು
ತಪ್ಪು ಮಾಡಿದಾಗ ತಿದ್ದಿ ತೀಡುವವರು
ನಾವು ಗೆದ್ದಾಗ ತಾವೇ ಗೆದ್ದಂತೆ
ಸಂಭ್ರಮಿಸುವರು
ಅನಂತವನ್ನೇ ಮೀರಿದ ಮುಗಿಲು
ಪೂಜಿಸೋ ದೇವರಿಗಿಂತ ಮಿಗಿಲು
ಹೃದಯ ಮಿಡಿತಕ್ಕೆ ಅಪ್ಪುಗೆಯ ಹೆಗಲು
ಭಾನು ಭುವಿಯ ಅಂತರಕ್ಕೆ ಇವರೇ ಆಸರೆ
ತೊಟ್ಟಿಲು
ಕು. ಜ್ಯೋತಿ ಆನಂದ ಚಂದುಕರ
ಬಾಗಲಕೋಟ

