ಕೂಡ್ಲಿಗಿ ತಾಲೂಕ ಕೃಷಿಕ ಸಮಾಜದ ಚುನಾವಣೆ – ಅವಿರೋಧ ಆಯ್ಕೆ.
ಕೂಡ್ಲಿಗಿ ಡಿ.10

ತಾಲೂಕು ಕೃಷಿಕ ಸಮಾಜದ ಚುನಾವಣೆ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆದಿದ್ದು ಕೂಡ್ಲಿಗಿ ತಾಲೂಕು ಕೃಷಿಕ ಸಮಾಜದಿಂದ 16 ಜನ ನಾಮಪತ್ರ ಸಲ್ಲಿಕೆಯಾಗಿದ್ದು ನಿರ್ದೇಶಕರ ಸ್ಥಾನ 15 ಸ್ಥಾನ ಇದ್ದುದರಿಂದ 16 ಜನರಲ್ಲಿ ಒಂದು ನಾಮಪತ್ರ ಹಿಂತೆಗೆದು ಕೊಂಡಿದ್ದರಿಂದ ಇಂದು 15 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಎಂದು ಸಹಾಯಕ ಚುನಾವಣೆ ಅಧಿಕಾರಿ ವಾಮದೇವ ಕೊಳ್ಳಿ ಪತ್ರಿಕಾ ಪ್ರಕಟಣೆಯನ್ನು ತಿಳಿಸಿದ್ದಾರೆ. ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದರಿಂದ ಕೋರ್ಟಿನಿಂದ ತೆರವಾಗಿ ಚುನಾವಣೆ ನಡೆಸಲು ಅನುಮತಿ ಬಂದಾಗ ಇಡೀ ರಾಜ್ಯದ್ಯಂತ ಕೃಷಿಕ ಸಮಾಜದ ಚುನಾವಣೆ ಪ್ರಕ್ರಿಯೆ ಚಾಲನೆ ಗೊಂಡಿತ್ತು.

ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ ಆಯ್ಕೆಯಾದ ನಿರ್ದೇಶಕರುಗಳಾದ ಎಂ ಶಬ್ಬೀರ್, ಕೆ ಯರಿಸ್ವಾಮಿ, ಕೆ ಸಿದ್ದಪ್ಪ, ಬ್ಯಾಳಿ ವಿಜಯಕುಮಾರ್ ಗೌಡ, ಎಂ ಬಸವರಾಜ ಕಕ್ಕುಪ್ಪಿ,ಕೆ ನಾರಾಯಣ ರೆಡ್ಡಿ,ವೀರಣ್ಣ,ಎಂ ಜೆ ಸಿದ್ದನಗೌಡ ಕೆ ಎಂ ಚಂದ್ರಯ್ಯ, ನಟರಾಜ,ನಂದಿ ಜಂಬಣ್ಣ,ಜಯಣ್ಣ ಹೆಚ್ ಗಂಗಾಧರಪ್ಪ,ಕೆ ವಿಜಯ್ ಕುಮಾರ, ಬಿ.ವೀರೇಶ್ ಇವರು ಅವಿರೋಧವಾಗಿ ಕೂಡ್ಲಿಗಿ ತಾಲೂಕು ಕೃಷಿಕ ಸಮಾಜಕ್ಕೆ ಆಯ್ಕೆಯಾಗಿದ್ದಾರೆ ಸಹಾಯ ಕೃಷಿ ನಿರ್ದೇಶಕರಾದಂತಹ ವಾಮದೇವ್ ಕೊಳ್ಳಿ ಇವರು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು ಎಲ್ಲಾ ಚುನಾವಣೆ ಶಾಂತಿ ಯುತವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ಕೃಷಿಕ ಸಮಾಜದ ಮತ್ತು ರೈತರ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದು ಹೇಳಿದರು ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಶ್ರವಣಕುಮಾರ ಸೇರಿದಂತೆ ಕೃಷಿಕಾ ಸಮಾಜದ ಇನ್ನೂ ಅನೇಕ ಮುಖಂಡರು ಹಾಜರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ