“ಒಳಿತು ಕೆಡಕು ಸರಿದ ಕ್ಷಣಗಳ ಮರಿ”…..

ಕವಿಯ ಕಲ್ಪನೆಯ ಭಾವ ಚಂದ
ಸೃಷ್ಟಿಯ ಚೆಲುವು ಕಣ್ಮನಕೆ ಅಂದ
ಆಸೆಗೆ ಹಿತಮಿತ ನಿತ್ಯ ನೂತನ
ನೋವು ನಲಿವುಂಡವ ಗುಣವಂತ
ಅನುಕಂಪ ಅನುಭವ ಅರಿವಿನ ವರ
ಮೌನವು ಯೋಗಿಗಳ ಅಪರಂಜಿತನ
ವಿಪರೀತ ಮಾತು ಮೂರ್ಖನದು
ಅಹಂಭಾವ ಉಪಯೋಗವಿಲ್ಲದು
ದೇಶ ನಾಡ ನುಡಿ ಜಲ ಸೇವೆ ಸಾರ್ಥಕತೆ
ದೊರೆತ ಸಹಾಯ ಸಹಕಾರ ನೆನೆ ಮನವೆ
ಪ್ರತಿಯೊಂದು ಅವಶ್ಯಕತೆಗಳ ಅರಿ
ಒಳಿತು ಕೆಡಕು ಸರಿದ ಕ್ಷಣಗಳ ಮರಿ
ತಂದೆ ತಾಯಿ ಹಿರಿಯರ ಸೇವೆಯು
ಅನುದಿನದ ಸುಖಿ ಬಾಳ್ವೇಗೆ ಬೆಳಕು
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

