ಪತ್ರಕರ್ತ ವೆಂಕಟೇಶ ಸಂಪ ಅವರಿಗೆ, “ಮೇಘ ಮೈತ್ರಿ ರಾಜ್ಯೋತ್ಸವ” – ಪ್ರಶಸ್ತಿ ಪ್ರಧಾನ.
ಕಮತಗಿ ನ.24

ಮೇಘ ಮೈತ್ರಿ ಸಂಸ್ಥೆ (ರಿ) ಮತ್ತು ಹೆಜ್ಜೆ ಶೈಕ್ಷಣಿಕ ,ಸಾಮಾಜಿಕ ಸಂಸ್ಥೆ (ರಿ) ಬಾಗಲಕೋಟೆ , ಇವರು ಕೊಡುವ ರಾಜ್ಯ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪತ್ರಕರ್ತ ವೆಂಕಟೇಶ ಸಂಪ ರವರಿಗೆ ಇಂದು 2024 ರ ನವೆಂಬರ್ 23. ರಂದು ಬಾಗಲಕೋಟೆಯ ಕಮತಗಿಯಲ್ಲಿ ಖ್ಯಾತ ಜನಪದ ಗಾಯಕ, ಚಲನಚಿತ್ರ ನಟ ಶ್ರೀ ಗುರುರಾಜ್ ಹೊಸಕೋಟೆ ಅವರು ಪ್ರಧಾನ ಮಾಡಿದರು. ವೆಂಕಟೇಶ ಸಂಪ ಅವರು,ಕಳೆದ 18 ವರ್ಷಗಳಿಂದ ನಿರಂತರವಾಗಿ ಸಂಪದ ಸಾಲು ಎನ್ನುವ ಪತ್ರಿಕೆಯನ್ನು ನಡೆಸುತ್ತಿರುವ ವೆಂಕಟೇಶ ಸಂಪ ರವರ ಸಾವಿರಾರು ಲೇಖನಗಳು ಪ್ರಕಟವಾಗಿವೆ ಹಾಗೂ ರೇಡಿಯೋ ಟಿವಿಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಇದನ್ನು ಪರಿಗಣಿಸಿ ಮಾಧ್ಯಮ ಕ್ಷೇತ್ರದ “ರಾಜ್ಯೋತ್ಸವ” ಪ್ರಶಸ್ತಿಯನ್ನು ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಮೇಘ ಮೈತ್ರಿ ಸಂಸ್ಥೆಯ ರಮೇಶ್ ಕಮತಗಿ, ಪೂಜ್ಯ ಶ್ರೀ ಮಹೇಶ್ವರ ತಾತನವರು, ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಇತರರು ಹಾಜರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ