ಶ್ರೀಶಾರದಾಶ್ರಮದಲ್ಲಿ ಪ್ರತಿ ಭಾನುವಾರ ವಿವೇಕ ವಿಹಾರ – ವಿದ್ಯಾರ್ಥಿ ಶಿಬಿರ.
ಚಳ್ಳಕೆರೆ ಜೂ.10

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಪ್ರತಿ ಭಾನುವಾರ ಬೆಳಗ್ಗೆ 11 ಗಂಟೆಯಿಂದ ಮಧ್ನಾಹ್ನ 1 ಗಂಟೆಯ ವರೆಗೆ ಮಕ್ಕಳಿಗಾಗಿ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮ ನಡೆಯಲಿದ್ದು ಈ ಕಾರ್ಯಕ್ರಮದ ಪ್ರಯುಕ್ತ ಭಜನೆ, ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ನುಡಿ ಮುತ್ತುಗಳ ಪಠಣ, ನೀತಿ ಕಥೆಗಳನ್ನು ಒಳಗೊಂಡಂತೆ ವಿವಿಧ ವಿಷಯಗಳ ತರಗತಿ ಹಾಗೂ ವಿನೋದದಿಂದ ವಿವೇಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.