“ಶಿರಿಯೂರ ಸಿರಿದಾತ ಶ್ರೀ ಸಿದ್ಧೇಶ್ವರ ಶ್ರೀಸಿದ್ಧಲಿಂಗೇಶ್ವರ ಮಹಾ ಸ್ವಾಮಿಗಳು”…..

ಶಿರಿಯೂರ ಸಿರಿದಾತ ಶ್ರೀ ಸಿದ್ಧೇಶ್ವರ ಶ್ರೀ
ಸಿದ್ಧಲಿಂಗೇಶ್ವರ ಮಹಾ ಸ್ವಾಮಿಗಳು
ಶಿರೂರ ಪೂರವಾಸ ಶ್ರೀ ಸಿದ್ಧೇಶ್ವರ ವರದಾತ
ಸಿದ್ದಲಿಂಗೇಶ್ವರ ಮಹಾ ಸ್ವಾಮಿಗಳ ಪಾವನ
ಕ್ಷೇತ್ರ
ಸಕಲ ಭಕ್ತಜನರ ಸಿರಿ ವರದಾತ
ಶ್ರೀ ಸಿದ್ಧಲಿಂಗೇಶ್ವರ ನಮಃ
ದಿನನಿತ್ಯ ಕಾಯಕಜೋತೆ ನೆನೆವ ಮನ
ಶ್ರೀ ಸಿದ್ಧಲಿಂಗೇಶ್ವರ ಭಕ್ತರ ಶಕ್ತಿದಾತ
ನಿಷ್ಕಲ್ಮಶ ಜ್ಞಾನದವರ ಕಾಪಾಡುವ
ಜ್ಞಾನಯೋಗಿ ಶ್ರೀಸಿದ್ಧಲಿಂಗೇಶ್ವರ ಮಹಾ
ಸ್ವಾಮಿಗಳು
ಗುರುಪಥದಿಂ ಶಿವಪಥದಡೆ ತಪೋನಿಧಿ
ಶ್ರೀಸಿದ್ಧಲಿಂಗೇಶ್ವರ ನಮಃ
ನಂಬಿ ಕರೆದ ಶುಧ್ಧಮನದವಂಗೆ ಸಿರಿ
ವರ ಪ್ರದಾಯ ಶ್ರೀ ಸಿದ್ಧಲಿಂಗೇಶ್ವರ
ಸದ್ಗುರು ನಮಃ
ಕಾಯಕ ನಿಷ್ಠೆ ಧರ್ಮಪಾಲಕರ ಬಾಳ ಬೆಳಕು
ಶ್ರೀ ಸಿದ್ಧಲಿಂಗೇಶ್ವರ ನಮಃ
ಅರಿವಿನ ಬೆತ್ತದಿ ಜ್ಞಾನದ ಬೆಳಕಿನಡೆಗೆ
ಸಾಗಿಸುವ ಜ್ಞಾನ ಯೋಗಿ
ಶ್ರೀ ಸಿದ್ಧಲಿಂಗೇಶ್ವರ ನಮಃ
ತನು ಮನ ಶುದ್ಧ ಭಾವದವರ ಸಿರಿವರದಾತ
ಶ್ರೀ ಮಹಾಯೋಗಿ ಶ್ರೀ ಸಿದ್ಧಲಿಂಗೇಶ್ವರ ನಮಃ
ನಿತ್ಯ ನೆನವ ಭಕ್ತರಿಗೆ ಫಲದ ಸಿಹಿ
ವರಪ್ರದಾಯ ಶಿರಿಯೂರ ಸಿರಿದಾತ
ಶ್ರೀಸಿದ್ಧಲಿಂಗೇಶ್ವರ ಮಹಾ ಸ್ವಾಮಿಗಳು
ಸಾಕ್ಷಾತ ಕರ್ತೃ ಗದ್ದೆಗೆ ಸಾಕಾರ ಮೂರ್ತಿ
ದರ್ಶನ ಭಾಗ್ಯ ಸುಕೃತಫಲ ಕರುಣಿಸುವ
ಶ್ರೀಸಿದ್ಧಲಿಂಗೇಶ್ವರ ನಮಃ
ಸರ್ವ ಜೀವ ಸಂಕುಲಗಳ ದಯೆ ಕರುಣೆ ಸಿರಿ
ದಯಪಾಲಿಸುವ ಶ್ರೀ ಸಿದ್ಧಲಿಂಗೇಶ್ವರ ನಮಃ
ತತ್ವಮಸಿ ಶಿವತೇಜ ಶಿವೋಹಂ
ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳ ನೆನವ
ಸರ್ವಮನ ಪಾವನ
ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ.