🔔ಹಿರಿಯ ನ್ಯಾಯವಾದಿ ರವಿ ಕಿರಣ್ ಮುರುಡೇಶ್ವರ ಅವರಿಂದ – ರಾಜ್ಯದ ಜನತೆಗೆ ಅತ್ಯಂತ ಪ್ರಮುಖ ಎಚ್ಚರಿಕೆ….🔔

ಉಡುಪಿ ಅ.15

ಕಾನೂನು ಪಾಲನೆಯ ಮಹತ್ವ ಮತ್ತು ಅದರ ಬಗ್ಗೆ ಜನಸಾಮಾನ್ಯರಲ್ಲಿ ಇರಬೇಕಾದ ಕಡ್ಡಾಯ ಅರಿವಿನ ಕುರಿತು ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರು ನೀಡಿರುವ ಸಂದೇಶವು ಇದೀಗ ರಾಜ್ಯ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ. ಅವರು ನೀಡಿರುವ ಎಚ್ಚರಿಕೆ ಕಾನೂನು ಸುವ್ಯವಸ್ಥೆ ಮತ್ತು ನಾಗರಿಕರ ಜವಾಬ್ದಾರಿಯ ಕುರಿತು ಸ್ಪಷ್ಟಪಡಿಸಿದೆ ಎಂದು ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಅವರು ಪ್ರಮುಖ ಸಂದೇಶವನ್ನು ತಿಳಿಸಿದ್ದಾರೆ.

ಕಾನೂನಿನ ಮೂಲ ತತ್ವ “ಇಗ್ನೋರೆನ್ಸ್ ಆಫ್ ಲಾ ಇಸ್ ನಾಟ್ ಆನ್ ಎಕ್ಸ್‌ಕ್ಯೂಸ್” (Ignorance of law is not an excuse) ಎಂಬ ಅಂತರರಾಷ್ಟ್ರೀಯ ತತ್ವವನ್ನು ಒತ್ತಿ ಹೇಳಲಾಗಿದೆ.

ಪ್ರಮುಖ ಎಚ್ಚರಿಕೆ “ನಮಗೆ ಕಾನೂನು ಗೊತ್ತಿಲ್ಲ ಅಂದ ಮಾತ್ರಕ್ಕೆ, ಕಾನೂನು ಕ್ಷಮಿಸದು” – ಅಂದರೆ, ತಿಳಿದೋ ತಿಳಿಯದೆಯೋ ಕಾನೂನನ್ನು ಉಲ್ಲಂಘಿಸಿದರೆ, ‘ನನಗೆ ಗೊತ್ತಿರಲಿಲ್ಲ’ ಎಂಬ ಸಮರ್ಥನೆಯನ್ನು ಕಾನೂನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ.

ಶಾಸಕಾಂಗದ ಕರ್ತವ್ಯ ಶಾಸಕಾಂಗದವರು ಅಪರಾಧಗಳನ್ನು ನಿಯಂತ್ರಿಸಲು, ಪರಿಸರವನ್ನು ರಕ್ಷಿಸಲು, ಅರಣ್ಯವನ್ನು ಕಾಪಾಡಲು, ವನ್ಯಜೀವಿಗಳನ್ನು ರಕ್ಷಿಸಲು ಮತ್ತು ಆಡಳಿತದಲ್ಲಿ ಶುದ್ಧತೆಯನ್ನು ಕಾಪಾಡಲು ಪ್ರತಿವರ್ಷ ನೂರಾರು ಹೊಸ ಕಾನೂನುಗಳನ್ನು ರಚಿಸುತ್ತಿದ್ದಾರೆ.

ಮಾಹಿತಿ ತಲುಪಿಸುವ ಸಲಹೆ ಜನಸಾಮಾನ್ಯರಿಗೆ ಕಷ್ಟಕರವಾಗುವ ಕಾನೂನಿನ ಅಂಶಗಳನ್ನು ಕಥೆಗಳು, ಪ್ರಹಸನಗಳು ಮತ್ತು ಚುಟುಕುಗಳ ಮೂಲಕ ಸರಳವಾಗಿ ಜನರಿಗೆ ತಲುಪಿಸಿದಾಗ ಅದು ಹೆಚ್ಚು ಪರಿಣಾಮಕಾರಿ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆಯಾಗಿ, ಕಾನೂನಿನ ಅಡಿಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ಬದುಕಬೇಕು. ಸಂವಿಧಾನ ಮತ್ತು ಕಾನೂನಿನ ಬಗ್ಗೆ ಅರಿವು ಇರುವುದು ಕಡ್ಡಾಯ. ಇಲ್ಲವಾದರೆ, ಕಾನೂನಿನ ಉಲ್ಲಂಘನೆಗೆ ಯಾವುದೇ ವಿನಾಯಿತಿ ಇರುವುದಿಲ್ಲ ಎಂಬುದನ್ನು ಮಾನ್ಯಾರು ಸ್ಪಷ್ಟಪಡಿಸಿದ್ದಾರೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button