ಜಲಾನಯನ ಯಾತ್ರೆ – ಕಾರ್ಯಕ್ರಮ ಜರಗಿತು.
ಹೀರೆ ಓತಗೇರಿ ಮಾ.03

ದಿನಾಂಕ 03-03-2025 ಸೋಮವಾರ ರಂದು ಬೆಳಿಗ್ಗೆ 10 ಗಂಟೆಗೆ ಹಿರೇ ಓತಗೆರಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರ ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ, ಬಾಗಲಕೋಟೆ ತಾಲೂಕ ಪಂಚಾಯತ. ಇಳಕಲ್ ವತಿಯಿಂದ “ಜಲಾನಯನ ಯಾತ್ರೆ ಕಾರ್ಯಕ್ರಮ” ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಂ.ಪಂ ಉಪಾಧ್ಯಕ್ಷರಾದ ಶ್ರೀಮತಿ ಶಿವಮ್ಮ ಸಿದ್ದಪ್ಪ ಪೂಜಾರಿ ವಹಿಸಿ ಕೊಂಡಿದ್ದರು. ಮಾನ್ಯ ಜಂಟಿ ಕೃಷಿ ನಿರ್ದೇಶಕರಾದ ಶ್ರೀ ಲಕ್ಷಣ ಕಳ್ಳೆಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ, ಸಿದ್ದಣ್ಣ ಅಂಗಡಿ KVK ವಿಜ್ಞಾನಿಗಳು ಮನ್ನು ಮತ್ತು ನೀರು ಕುರಿತು ಉಪನ್ಯಾಸ ನೀಡಿದರು. ಉಪ ಕೃಷಿ ನಿರ್ದೇಶಕರಾದ ಶ್ರೀ ಎಲ್.ಐ ರುಡಗಿ ಜಲಾನಯನ ಪ್ರತಿಜ್ಞೆ ಬೋಧಿಸಿದರು ಸಹಾಯಕ ಕೃಷಿ ನಿರ್ದೇಶಕರಾದ ಸೋಮಲಿಂಗಪ್ಪ ಅಂಟರತಾನಿ ಯವರು ಜಲಾನಯನ ಯೋಜನೆಯ ಮಹತ್ವವನ್ನು ರೈತರಿಗೆ ಹೇಳಿದರು.

ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ಸ್ವಾಗತಿಸಿದರು. ಮಹಾಂತೇಶ್ ಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಕೃಷಿಕ ಸಮಾಜದ ಅಧ್ಯಕ್ಷ ರಾದ ಸುರೇಶ್ ಬಂದರಗಲ್, ಉಪಾಧ್ಯಕ್ಷರಾದ ದೊಡ್ಡಪ್ಪ ದಂಡಿನ, ಕಾರ್ಯದರ್ಶಿಗಳಾದ ಶಶಿಕಾಂತ ಬಂಡರಗಲ್ ಜಿಲ್ಲಾ ಕಾರ್ಯದರ್ಶಿಗಳಾದ ಪ್ರಭು ಇದ್ದಲಗಿ, ಕೃಷಿ ಅಧಿಕಾರಿ ಆರ್.ವಿ ಬೋರಣ್ಣವರ, ಜಲಾನಯನ ಸಹಾಕರು, ಕೃಷಿ ಅಧಿಕಾರಿ ವಿವಿಧ ಗ್ರಾಮದ ಗುರು ಹಿರಿಯರು, ರೈತ ಬಾಂಧವರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ