ನೀಟ್ ಕೌನ್ಸಿಲಿಂಗ್ – ಪೂರ್ವ ತಯಾರಿ.
ಗದಗ ಜೂ. 19

ವಿದ್ಯಾಪೋಷಕ ಸಂಸ್ಥೆ ಧಾರವಾಡ ವತಿಯಿಂದ ೨೦೨೫-೨೬ ನೇ. ಶೈಕ್ಷಣಿಕ ಸಾಲಿನಲ್ಲಿ ವೈದ್ಯಕೀಯ ವಿಭಾಗಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಉಚಿತ ನೀಟ್ ಕೌನ್ಸಿಲಿಂಗ್ ಪೂರ್ವ ತಯಾರಿ ಬಗ್ಗೆ ಇದೆ ಜೂ. ೨೬ ರಂದು, ಮಧ್ಯಾಹ್ನ ೧೨.೦೦ ಗಂಟೆಗೆ ಆನ್ಲೈನ್ ಮೂಲಕ ಕಾರ್ಯಾಗಾರವನ್ನು ಆಯೋಜಿಸಿದೆ. ಈ ಕಾರ್ಯಾಗಾರಕ್ಕೆ ಡಾ, ವರುಣ್ ಶೆಟ್ಟಿ, Dept.of Pedodontic, BDS, MDS, ಎಸ್.ಡಿ.ಎಮ್ ಡೆಂಟಲ್ ಕಾಲೇಜ್ ಧಾರವಾಡ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಈ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಎಂ.ಬಿ.ಬಿ.ಎಸ್, ಬಿ.ಡಿ.ಎಸ್, ಬಿ.ಎ.ಎಂ.ಎಸ್, ಬಿ.ಎಚ್.ಎಂ.ಎಸ್, ಯುನಾನಿ ಮೆಡಿಸನ್ಸ್, ವೆಟರನರಿ ಸೈನ್ಸ್ ಮುಂತಾದ ಕೋರ್ಸುಗಳ ಬಗ್ಗೆ ಮಾಹಿತಿ. ರ‍್ಯಾಂಕಿಂಗ್ ಮತ್ತು ಕಟ್ ಆಫ್ % , ಸೀಟ್ ಆಯ್ಕೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಲಿದ್ದಾರೆ. ಈ ಕಾರ್ಯಾಗಾರದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ವಿದ್ಯಾರ್ಥಿ/ವಿದ್ಯಾರ್ಥಿನಿಯರು ದಿ :೨೪-೦೬-೨೦೨೫ ರ ಒಳಗಾಗಿ ದೂರವಾಣಿ ೦೮೩೬-೨೭೪೭೩೫೭ ಮೂಲಕ ಅಥವಾ ಮೊ:- (ರತ್ನಾ ಹಿಪ್ಪರಗಿ) ೯೯೮೦೧೨೫೬೮೬/೮೮೬೧೨೦೧೮೨೮ಗೆ ವಾಟ್ಸಪ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸ ಬೇಕು. ನಿಗದಿತ ಸಮಯಕ್ಕಿಂತ ಹತ್ತು ನಿಮಿಷ ಮುಂಚಿತವಾಗಿ ಈ ಕೆಳಗಿನ ಲಿಂಕ್‌ನಲ್ಲಿ ಪ್ರವೇಶ ಆಗಬೇಕು. https://us06web.zoom.us/j/83537478081?pwd=WjdwOThTQmVkSIZtNmkvS1hka2g4dz09, Meeting ID 83537478081, Pass code: 123456. ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲೆಯ ವಿದ್ಯಾರ್ಥಿಗಳು ಡಾ.ಸಂಗಮೇಶ ಸಜ್ಜನರ.-ಮೊ: ೯೯೪೫೫೫೦೮೪ , ಡಾ.ಪ್ರಭು ಗಂಜಿಹಾಳ-ಮೊ: ೯೪೪೮೭೭೫೩೪೬ ಇವರನ್ನು ಸಂಪರ್ಕಿಸಬಹುದು.
*****
ಡಾ, ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬