“ನಿತ್ಯ ಯೋಗ ಸರಳತೆಯ ಸುಯೋಗ”…..

ಯೋಗ ನಿತ್ಯ ಸುಯೋಗ
ಯೋಗ ತರುವುದು ನಿರಾಳತೆ
ಜ್ಞಾನಯೋಗ ಯೋಗ
ತರುವುದು ಸುಯೋಗ
ಯೋಗ ತನು ಮನದ ಶುದ್ಧತೆ
ಯೋಗ ಜೀವನದ ಬದ್ಧತೆ
ರಾಜಯೋಗ ಕರ್ಮಯೋಗ
ಜ್ಞಾನಯೋಗ ಭಕ್ತಿ ಯೋಗ
ಹಠಯೋಗ ಪಂಚಯೋಗ
ಸುಯೋಗ ಶುಭಯೋಗವು
ಸುಲಭ ಯೋಗ ತರುವುದು
ಉತ್ತಮ ಆರೋಗ್ಯಕರ ಜೀವನ
ಏಕಾಗ್ರತೆಯು ಆಧ್ಯಾತ್ಮಿಕ
ದೈಹಿಕ ಮಾನಸಿಕ ಆಂತರಿಕ
ಯೋಗದ ಶಕ್ತಿ ತನುಮನ ಗಟ್ಟಿ
ಸರಳ ಯೋಗಗಳು ನಿತ್ಯ ಇರಲಿ
ಆರೋಗ್ಯಕರ ಜೀವನದ ಜೋಪಾನ
ಯೋಗ ಕಲಿಸಿರಿ ಯೋಗ ಪಾಲಸಿರಿ
ಯೋಗದಿಂದ ರೋಗಗಳು ದೂರ
ಯೋಗದಿ ಅನುದಿನವು ಸುಖಕರ
ವಿಶ್ವದಲಿ ಯೋಗವು ಅತ್ಯದ್ಭುತ ಶಕ್ತಿ
ಮನುಕುಲದ ಜೀವನದ ನಿತ್ಯ ವರವು
ಯೋಗ ಬಾಳ ಪಯಣದ ನಿರಾಳತೆ
ನಿತ್ಯ ಯೋಗ ಸರಳತೆಯ ಸುಯೋಗ

ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ