ನೀರಿಗೆ ಹಾಹಾಕಾರ, ಪಿಡಿಓ ಅಕ್ತರ್ ಪಾಶರ ಚಳಿ ಬಿಡಿಸಿದ – ಕಂಬಳತ್ತಿ ಗ್ರಾಮಸ್ಥರು.
ಮಾನ್ವಿ ಏ.01

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ತೊಂದರೆ ಯಾಗದಂತೆ ನೋಡಿ ಕೊಳ್ಳುತ್ತೇವೆಂದು ರಾಯಚೂರು ಸಹಾಯಕ ಆಯುಕ್ತ ಗಜಾನನ ಅವರು ತಾಲೂಕ ಪಂಚಾಯತಿ ಸಭಾ ಭವನದಲ್ಲಿ ಇತ್ತೀಚಿಗೆ ನಡೆಸಿದ ಸಭೆಯಲ್ಲಿ ಮಾನ್ವಿ ಇ.ಓ ಖಾಲಿದ್ ಅಹ್ಮದ್ ಅವರು ಚಾಚು ತಪ್ಪದೆ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದ್ದರು.ಆದರೆ ರಾಯಚೂರು ಸಹಾಯಕ ಆಯುಕ್ತ ಗಜಾನನ ಅವರಿಗೆ ಕೆಲಸ ಮಾಡುತ್ತೇನೆಂದು ಹೇಳಿದ ಕೆಲವೆ ದಿನಗಳಲ್ಲಿ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಬಳತ್ತಿ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರೈತ ಸಂಘದ ಹೋರಾಟಗಾರ ರೊಂದಿಗೆ ಬೀದಿಗೆ ಬಂದು ಹೋರಾಟ ಮಾಡಿ ಅಕ್ತರ್ ಪಾಶ ಸಾಹೇಬ್ರನ್ನ ಚಳಿ ಬಿಡಿಸಿದ ಘಟನೆ ಮಂಗಳವಾರ ಜರುಗಿದೆ.ಮಾನ್ವಿ ಇ.ಓ ಖಾಲಿದ್ ಅಹ್ಮದ್ ಸಾಹೇಬ್ರೆ ನೀವು ಯಾವ ರೀತಿಯಲ್ಲಿ ಕೆಲಸ ಮಾಡುತ್ತೀದ್ದೀರಾ ಎಂದು ಕಂಬಳತ್ತಿ ಗ್ರಾಮದಲ್ಲಿ ನೀರು ಇಲ್ಲದಿರುವುದೆ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದ ಜನರು ಅಮಾಯಕರು ಎಂದು ತಿಳಿದು ಕೊಂಡು ಪಿಡಿಓ ಅಕ್ತರ್ ಪಾಶ ಸಾಹೇಬ್ರು ಇ.ಓ ಖಾಲಿದ್ ಅಹ್ಮದ್ ಅವರ ದುರಾಡಳಿತವೇ ಇಲ್ಲಿ ಎದ್ದು ಕಾಣುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವ ಎನ್.ಎಸ್ ಬೋಸರಾಜು ಸಾಹೇಬ್ರು ಸಹ ಮಾನ್ವಿ ತಾಲೂಕಲ್ಲಿ ಕುಡಿಯುವ ನೀರು ತೊಂದರೆ ಯಾಗದಂತೆ ನೋಡಿ ಕೊಳ್ಳಬೇಕು ಎಂದು ಸಲಹೆ ಸೂಚನೆ ಕೊಟ್ಟರು ಸಹ ನಮ್ಮನ್ನು ಯಾರು ಕೇಳುತ್ತಾರೆಂದು ತಿಳಿದು ಪಿಡಿಓ ಅಕ್ತರ್ ಪಾಶ ಇ.ಓ ಖಾಲಿದ್ ಅವರ ಕಾರುಬಾರು ಜೋರಾಗಿದೆ.ಶಾಸಕ ಬಸನಗೌಡ ದದ್ದಲ್ ಸಾಹೇಬ್ರೆ ನಿಮಗೆ ಮತ ಹಾಕಿದ ಜನರು ನಿಮ್ಮನ್ನು ನಂಬಿದ್ದಾರೆ. ಆದರೆ ನೀವು ಕೆಲಸ ಮಾಡಿ ಕೊಟ್ಟರೆ ಸುಂಕೇಶ್ವರ ಗ್ರಾಮ ಪಂಚಾಯತಿ ಪಿಡಿಓ ಹಾಗೂ ಇ.ಓ ಖಾಲಿದಗ ಅಹ್ಮದ್ ಅವರು ಕಂಬಳೆತ್ತಿ ಗ್ರಾಮದಲ್ಲಿ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಹೀಗಾಗಿ ಇಂತಹ ಅಧಿಕಾರಿಗಳು ಬೇಕಾಗಿಲ್ಲ ಎಂದು ಕಿಡಿಕಾರಿದರು.ಬೇಸಿಗೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ನೀರಿನ ಸೌಲಭ್ಯ ಕಲ್ಪಿಸಲು ಸರಕಾರ ಕೊಟ್ಟಿರುವ ಅನುದಾನ ಯಾರ ಪಾಲಾಗಿದೆ. ಇದು ಸಮಗ್ರವಾಗಿ ತನಿಖೆ ಯಾಗಬೇಕು ಎಂದು ನೊಂದ ಜೀವಿಗಳ ಕೂಗು ಹೋರಾಟದಲ್ಲಿ ಕೇಳಿ ಬಂದಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ