ಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ವಿಭಿನ್ನ ಶೈಲಿಯಿಂದ – ಮಣ್ಣೆತ್ತಿನ ಅಮವಾಸ್ಯೆ ಆಚರಣೆ.
ಗೊರಬಾಳ ಜೂ.27

ಇಳಕಲ್ಲ ತಾಲೂಕಿನ ಸಮೀಪದ ಗೊರಬಾಳ ಗ್ರಾಮದಲ್ಲಿ ಸಿದ್ದಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಮರೆತು ಹೋಗುತ್ತಿರುವ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆಯ ಪದ್ಧತಿ ಇವತ್ತಿನ ಮಕ್ಕಳಿಗೆ ಗೊತ್ತಾಗಲಿ ಮಣ್ಣೆತ್ತಿನ ಅಮಾವಾಸ್ಯೆಯ ಆಚರಣೆಯನ್ನು ಯಾವ ರೀತಿ ಮಾಡುತ್ತಿದ್ದರು ಮತ್ತು ಮಣ್ಣೆತ್ತಿನ ಅಮಾವಾಸ್ಯೆಯ ವಿಶೇಷತೆ ಏನು ಎನ್ನುವುದನ್ನು ಮಣ್ಣೆತ್ತುಗಳನ್ನು ಕರಿ ಹರಿಯುವುದರ ಮೂಲಕ ಪ್ರಾತ್ಯಕ್ಷಿತವಾಗಿ ಮಾಡಿ ತೋರಿಸಿದ ಗೊರಬಾಳದ ಸಿದ್ಧಿ ವಿನಾಯಕ ಗೆಳೆಯರ ಬಳಗದ ತಂಡ ವಿಭಿನ್ನ ಮತ್ತು ವಿಶೇಷ ಆಚರಣೆಗೆ ಹೆಸರಾಗಿದೆ. ಈ ಗೆಳೆಯರ ಬಳಗ ನಶಿಸಿ ಹೋಗುತ್ತಿರುವ ಪ್ರತಿಯೊಂದು ಹಬ್ಬಗಳನ್ನು ಇವತ್ತಿನ ಪೀಳಿಗೆಗೆ ಗೊತ್ತಾಗಬೇಕು ನಮ್ಮ ಹಿರಿಯರು ಹಬ್ಬಗಳನ್ನು ಯಾವ ರೀತಿ ಆಚರಣೆ ಮಾಡುತ್ತಿದ್ದರು ಯಾವ್ಯಾವ ಹಬ್ಬವನ್ನು ಯಾತಕ್ಕಾಗಿ ಆಚರಣೆ ಮಾಡಬೇಕು ಎನ್ನುವುದನ್ನು ತಿಳಿಸಿ ಕೊಡುವ ಉದ್ದೇಶದಿಂದಾಗಿ ಹಬ್ಬಗಳನ್ನು ವಿಶಿಷ್ಟ ವಿಶೇಷ ಮತ್ತು ವಿಶಿಷ್ಟತೆಯಿಂದ ಆಚರಿಸಿ ನಶಿಸಿ ಹೋಗುತ್ತಿರುವ ಹಬ್ಬಗಳ ಸಂಸ್ಕೃತಿ ರಕ್ಷಣೆ ಮಾಡುವಲ್ಲಿ ಪಣ ತೊಟ್ಟು ನಿಲ್ಲಬೇಕು.

ಮಣ್ಣೆತ್ತಿನ ಅಮಾವಾಸ್ಯೆ ಅದ್ದೂರಿಯಾಗಿ ಆಚರಣೆ ಮಾಡುವುದರ ಮೂಲಕ ಇವತ್ತಿನ ಮಕ್ಕಳಿಗೆ ನಶಿಸಿ ಹೋಗುತ್ತಿರುವ ಹಬ್ಬಗಳ ಜಾಗೃತಿ ಮೂಡಿಸುವುದರ ಜೊತೆಗೆ ಹಬ್ಬಗಳ ವಿಶೇಷತೆಯನ್ನು ಹಬ್ಬಗಳನ್ನು ಯಾತಕ್ಕಾಗಿ ಆಚರಣೆ ಮಾಡಬೇಕು ಮತ್ತು ಹಬ್ಬಗಳ ಆಚರಣೆ ಮಾಡುವುದರಿಂದ ಏನು ಪ್ರಯೋಜನವಾಗಲಿದೆ ಎನ್ನುವುದನ್ನು ಇವತ್ತಿನ ಮಕ್ಕಳೇ ನಾಳಿನ ನಾಗರಿಕರು ಎಂದು ಭಾವಿಸಿ ನಮ್ಮ ಭಾರತೀಯ ಸಂಸ್ಕೃತಿ ಹಬ್ಬಗಳು ನಶಿಸಿ ಹೋಗಬಾರದು ಎನ್ನುವ ಉದ್ದೇಶಕ್ಕಾಗಿ ಈ ರೀತಿ ವಿಭಿನ್ನ ಶೈಲಿಯಲ್ಲಿ ಆಚರಣೆ ಮಾಡಿಕೊಂಡು ಬಂದಿದ್ದೇವೆ ಎಂದು ಕುಮಾರ ಹಿರೇಮಠ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಗೊರಬಾಳ ಗ್ರಾಮಕ್ಕೆ ಇಲಕಲ್ ಸಿಟಿ ಸಮೀಪ ಇರುವುದರಿಂದ ಇಲ್ಲಿನ ಮಕ್ಕಳು ಸಂಪೂರ್ಣವಾಗಿ ಗ್ರಾಮೀಣ ಹಬ್ಬಗಳನ್ನು ಗ್ರಾಮೀಣ ಕಲೆಗಳನ್ನು ಮರೆ ಮಾಚುತ್ತಿದ್ದು ಅವುಗಳನ್ನು ಮುನ್ನೆಲೆಗೆ ತರುವ ಉದ್ದೇಶದಿಂದಾಗಿ ನಾವು ಇಂತಹ ಹಬ್ಬಗಳನ್ನು ವಿಶೇಷ ಮತ್ತು ವಿಶಿಷ್ಟ ಮತ್ತು ವಿಭಿನ್ನವಾಗಿ ಆಚರಣೆ ಮಾಡುತ್ತೇವೆ ಎಂದು ಯುವಕರ ತಮ್ಮ ಸಂಘದ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ವಿನಾಯಕ ಗೆಳೆಯರ ಬಳಗ ಪ್ರತಿಯೊಂದು ಹಬ್ಬಗಳನ್ನು ವಿಶಿಷ್ಟ ಮತ್ತು ವಿಶೇಷವಾಗಿ ಆಚರಣೆ ಮಾಡುವುದರೊಂದಿಗೆ ಹಬ್ಬದ ಮಹತ್ವಗಳು ಮತ್ತು ಭಾರತೀಯ ಸಂಸ್ಕೃತಿಯನ್ನು ಕಾಪಾಡುವಲ್ಲಿ ಸದಾ ಕಾರ್ಯ ನಿರತರಾಗಿರುತ್ತಾರೆ. ಮತ್ತು ಯಾವತ್ತಿಗೂ ನಮ್ಮ ಭಾರತೀಯ ಸಂಸ್ಕೃತಿ ಹಬ್ಬಗಳು ನಶಿಸಿ ಹೋಗ ಬಾರದೆಂದು ಈ ಹಬ್ಬಗಳ ಆಚರಣೆಗಾಗಿಯೇ ನಮ್ಮ ಸಂಘವನ್ನು ಕಟ್ಟಿ ನಾವು ಕಾರ್ಯನ್ಮೂಖರಾಗ ಬೇಕೆಂದು ಕೆಲಸ ಮಾಡುತ್ತಿದ್ದೇವೆ ಎಂದು ಸಂಘದ ಯುವಕ ಮಿತ್ರ ಗಿರೀಶ ಬೋಗಾಪುರ ಹೇಳಿ ಕೊಂಡಿದ್ದಾರೆ.

