ರೋಣ ಹಾಗೂ ಬೆಳವಣಿಕೆ ಭಾಗದಲ್ಲಿ ನಾಳೆ – ವಿದ್ಯುತ್ ವ್ಯತ್ಯಯ.
ರೋಣ ಜೂ.27

ತುರ್ತು ನಿರ್ವಹಣಾ ಕೆಲಸದ ಹಿನ್ನೆಲೆಯಲ್ಲಿ “110/11KV” ರೋಣ ಮತ್ತು ಬೆಳವಣಿಕೆ ವಿದ್ಯುತ್ ವಿತರಣಾ ಉಪ-ಕೇಂದ್ರದ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ದಿನಾಂಕ: 28-06-2025 ರಂದು ಬೆಳಿಗ್ಗೆ 10:00 ಘಂಟೆ ಯಿಂದ ಸಾಯಂಕಾಲ 05:30 ಘಂಟೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಆದ್ದರಿಂದ “110/11KV” ರೋಣ ವಿದ್ಯುತ್ ವಿತರಣಾ ಉಪ-ಕೇಂದ್ರದ ನಿರಂತರ ಜ್ಯೋತಿ ಮತ್ತು ನೀರಾವರಿ ಪಂಪ್ಸೆಟ್ನ ವಿದ್ಯುತ್ ಪೂರೈಕೆ ಯಾಗುತ್ತಿರುವ ರೋಣ, ಕೃಷ್ಣಾಪುರ, ಹೊಸಳ್ಳಿ, ಜಿಗಳೂರ, ಕುರಹಟ್ಟಿ, ಮುದೇನಗುಡಿ, ಹುಲ್ಲೂರ, ಸೋಮನಕಟ್ಟಿ ಹಾಗೂ “110/11KV” ಬೆಳವಣಿಕಿ ವಿದ್ಯುತ್ ವಿತರಣಾ ಉಪ-ಕೇಂದ್ರದ ನಿರಂತರ ಜ್ಯೋತಿ ಮತ್ತು ನೀರಾವರಿ ಪಂಪ್ಸೆಟ್ನ ವಿದ್ಯುತ್ ಪೂರೈಕೆ ಯಾಗುತ್ತಿರುವ ಸವಡಿ, ಹೊನ್ನಾಪೂರ, ಬೆಳವಣಿಕಿ, ಚಿಕ್ಕಮಣ್ಣೂರ, ಸಂದಿಗವಾಡ, ಅರಹುಣಸಿ, ಮಲ್ಲಾಪೂರ, ಭಾಸಲಾಪೂರ, ಹಿರೇಮಣ್ಣೂರ, ಯಾವಗಲ್, ಯಾಸ ಹಡಗಲಿ, ಕೌಜಗೇರಿ ಗ್ರಾಮಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ