ಗಡಿ ಗ್ರಾಮಗಳ ರಸ್ತೆಗಳ ಸಾಮಾಜಿಕ ಸುಧಾರಣೆಗೆ ಒತ್ತು ನೀಡುವೆ – ಡಾ, ಶ್ರೀನಿವಾಸ್. ಎನ್ ಟಿ.
ಹೂಡೇಂ ಜೂ.29

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಡಾ, ಶ್ರೀನಿವಾಸ್. ಎನ್ ಟಿ ಅವರು ಹೂಡೇಂ ಗ್ರಾಮದಿಂದ ಶ್ರೀ ಗಾಣಗಟೆ ಕೆರೆ ಮಾಯಮ್ಮ ದೇವಸ್ಥಾನದ ವರೆಗೆ ಸಿ.ಸಿ. ರಸ್ತೆ (₹1 ಕೋಟಿ) ಯ ಕಾಮಗಾರಿಯ ಭೂಮಿ ಪೂಜೆಯನ್ನು ಉದ್ಘಾಟಿಸಿ ಈ ಸಂದರ್ಭದಲ್ಲಿ ಮಾತನಾಡುತ್ತಾ ಇಲ್ಲಿನ ಬಹು ದಿನಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸ್ಥಳೀಯ ಜನ ಪ್ರತಿ ನಿಧಿಗಳು ಹಾಗೂ ಮುಖಂಡರು ಮನವಿ ಮಾಡಿ ಕೊಂಡಿದ್ದರು. ಆ ನಿಟ್ಟಿನಲ್ಲಿ, ಗಡಿ ಗ್ರಾಮಗಳ ರಸ್ತೆಗಳ ಸಾಮಾಜಿಕ ಸುಧಾರಣೆಗೆ ಒತ್ತು ಕೊಡಲು ಸರ್ಕಾರದ ಉನ್ನತ ಮಟ್ಟದಲ್ಲಿ ಶ್ರಮವಹಿಸಿ ಅನುದಾನ ತಂದು ಇಲ್ಲಿನ ಭಕ್ತರ ಭಾವನೆಗಳನ್ನು ಗೌರವಿಸುವುದಕ್ಕಾಗಿ ಎಲ್ಲಾರ ಸಹಕಾರ ದಿಂದ ಒಳಿತನ್ನೂ ಮಾಡಲಿದ್ದೇವೆ ಎಂದರು. ಹಾಗೆಯೇ ಮುಂದಿನ ದಿನಗಳಲ್ಲಿ ಇಲ್ಲಿನ ಕೆರೆಯನ್ನು ಅಭಿವೃದ್ಧಿ ಪಡಿಸಲಿದ್ದೇವೆ ಎಂದು ನಮ್ಮ ಮಾನ್ಯ ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು ಮಾಜಿ ಅಧ್ಯಕ್ಷರುಗಳು ಗ್ರಾಮ ಪಂಚಾಯತಿ ಸದಸ್ಯರು ಮಾಜಿ ಸದಸ್ಯರು ಮುಖಂಡರು ಸಾರ್ವಜನಿಕರು ಮಹಿಳೆಯರು ಯುವಕರು ಭಕ್ತಾದಿಗಳು ಉಪಸಿತರಿದ್ದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ